ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 2 OCTOBER 2024 : ದಸರಾ ಮಹೋತ್ಸವದಲ್ಲಿ ಈ ಬಾರಿ ಅಂಬಾರಿ ಮೆರವಣಿಗೆಗೆ ಮೂರು ಆನೆಗಳು (Elephants) ಭಾಗವಹಿಸುತ್ತಿವೆ. ಸಾಗರನ ಜೊತೆ ಕುಮ್ಕಿ ಆನೆಗಳಾಗಿ ಎರಡು ಗಂಡಾನೆಗಳು ಭಾಗವಹಿಸುತ್ತಿವೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಅಂಬಾರಿ ಮೆರವಣಿಗೆ ಅತ್ಯಂತ ಆಕರ್ಷಣೀಯ. ಕಳೆದ ಬಾರಿ ದಸರಾ ಸಂದರ್ಭದಲ್ಲೇ ಆನೆ ಮರಿ ಹಾಕಿತ್ತು. ಹಾಗಾಗಿ ಈ ಬಾರಿ ಮೂರು ಗಂಡಾನೆಗಳೇ ಭಾಗವಹಿಸುತ್ತಿವೆ. ಮುಂದಿನ ವರ್ಷ ಹೆಣ್ಣಾನೆಗಳು ಭಾಗವಹಿಸಲಿವೆ ಎಂದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸಾಗರ ಆನೆ ಅಂಬಾರಿ ಹೊರಲಿದೆ. ಅದರ ಜೊತೆಗೆ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕಳೆದ ವರ್ಷ ದಸರಾ ಮೆರವಣಿಗೆ ಮುನ್ನಾ ದಿನ ಹೆಣ್ಣಾನೆ ಮರಿ ಹಾಕಿತ್ತು. ಇದರಿಂದ ಅಂಬಾರಿಯನ್ನು ಲಾರಿ ಮೇಲೆ ಮೆರವಣಿಗೆ ಮಾಡಲಾಗಿತ್ತು.
ಸಕ್ರೆಬೈಲಿಗೆ ಎಂಎಲ್‌ಎ, ಪಾಲಿಕೆ ಅಧಿಕಾರಿಗಳು
ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ಭಾಗವಹಿಸಲಿರುವ ಆನೆಗಳಿಗೆ ಸಕ್ರೆಬೈಲಿನಲ್ಲಿ ಪೂಜೆ ಸಲ್ಲಿಸಲಾಯಿತು. ಶಾಸಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಕಮಿಷನರ್ ಕವಿತಾ ಯೋಗಪ್ಪನವರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು. ಗುರುವಾರ ಸಕ್ರೆಬೈಲು ಬಿಡಾರದಿಂದ ಆನೆಗಳು ಶಿವಮೊಗ್ಗಕ್ಕೆ ಆಗಮಿಸುವ ಸಾಧ್ಯತೆ ಇದೆ.
ಇದನ್ನೂ ಓದಿ » ಬ್ಯಾಟರಿ ಲೈಟ್ ಬಿಟ್ಟ ವಿಚಾರ, ಕೈ ಕೈ ಮಿಲಾಯಿಸಿದ ಕುಟುಂಬಗಳು