ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 15 OCTOBER 2024 : ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕಂಪನಿಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು, ಮಹಿಳೆಯೊಬ್ಬರಿಂದ (ಹೆಸರು ಗೌಪ್ಯ) ಒಬ್ಬರಿಂದ ಹಣ (Money) ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. 7.40 ಲಕ್ಷ ರೂ. ಕಳೆದುಕೊಂಡಿರುವ ಮಹಿಳೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಹಿಳೆ ಮೋಸ ಹೋಗಿದ್ದು ಹೇಗೆ?
ಪಾರ್ಟ್ ಟೈಮ್ ಜಾಬ್ ಎಂದು ನಂಬಿಸಿ ಹೊಟೇಲ್ ರಿವ್ಯು ಮಾಡುವಂತೆ ಟೆಲಿಗ್ರಾಂ ಆಪ್ ಮೂಲಕ ಲಿಂಕ್ ಕಳುಹಿಸಲಾಗಿತ್ತು. ರಿವ್ಯುಮಾಡುತ್ತಿದ್ದಂತೆ ಮಹಿಳೆಯ ಖಾತೆಗೆ 50 ರೂ. ಮತ್ತು 1000 ರೂ. ಹಣ ವರ್ಗಾಯಿಸಲಾಗಿತ್ತು. ನಂಬಿಕೆ ಮೂಡಿಸಿದ ವಂಚಕರು ಹೆಚ್ಚು ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿದ್ದರು.
ಇದನ್ನೂ ಓದಿ » ಶಿವಮೊಗ್ಗದಿಂದ ಯಾವೆಲ್ಲ ವಿಮಾನ ಎಷ್ಟೊತ್ತಿಗೆ ಹೊರಡುತ್ತವೆ? ಇಲ್ಲಿದೆ ಟೈಮ್ ಟೇಬಲ್
ಮಹಿಳೆಯಿಂದ ಹಂತ ಹಂತವಾಗಿ 7.40 ಲಕ್ಷ ರೂ. ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ತಮ್ಮ ಪಾಲಿನ ಲಾಭಾಂಶ ನೀಡುವಂತೆ ತಿಳಿಸಿದಾಗ ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಿ ಎಂದು ವಂಚಕರು ಮೆಸೇಜ್ ಮೂಲಕ ತಿಳಿಸಿದ್ದರು. ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದರಿಂದ ಅನುಮಾನಗೊಂಡು ಪರಿಚಿತರಲ್ಲಿ ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.