ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
RAINFALL NEWS, 16 OCTOBER 2024 : ಶಿವಮೊಗ್ಗ ಜಿಲ್ಲೆಯಾದ್ಯಂತ ಜೋರು ಮಳೆಯಾಗುತ್ತಿದೆ. ನಗರದಲ್ಲಿ ಸತತ ಒಂದು ಗಂಟೆಯಿಂದ ಮಳೆಯಾಗುತ್ತಿದೆ. ಇನ್ನೊಂದೆಡೆ ಅ.17ರಂದು ಶಿವಮೊಗ್ಗ ಜಿಲ್ಲೆಗೆ ಯಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 11.5 ಮಿ.ಮೀ ಮಳೆಯಾಗಿದೆ. ಇನ್ನು, ಭದ್ರಾವತಿ ತಾಲೂಕಿನಲ್ಲಿ 9.7 ಮಿ.ಮೀ, ಹೊಸನಗರದಲ್ಲಿ 6 ಮಿ.ಮೀ, ಸಾಗರದಲ್ಲಿ 12.5 ಮಿ.ಮೀ, ಶಿಕಾರಿಪುರದಲ್ಲಿ 14 ಮಿ.ಮೀ, ಶಿವಮೊಗ್ಗದಲ್ಲಿ 10.4 ಮಿ.ಮೀ, ಸೊರಬದಲ್ಲಿ 11.6 ಮಿ.ಮೀ, ತೀರ್ಥಹಳ್ಳಿಯಲ್ಲಿ 16.5 ಮಿ.ಮೀ ಮಳೆಯಾಗಿದೆ.» ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಜಿಲ್ಲೆಯಲ್ಲಿ ಜೋರು ಮಳೆ
ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಸಣ್ಣ ಪ್ರಮಾಣದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕೆಲವು ಕಡೆ ಆಗಾಗ ಬಿಡುವು ನೀಡಿ, ಬಳಿಕ ಅಬ್ಬರಿಸುತ್ತಿದೆ. ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ಇನ್ನು, ಸಂಜೆ ವೇಳೆಗೆ ಭದ್ರಾವತಿ ತಾಲೂಕಿನ ಹಲವು ಕಡೆ ಜೋರು ಮಳೆಯಾಗುತ್ತಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಭದ್ರಾವತಿಯ ಮಂಗೋಟೆ, ಗುಡುಮಘಟ್ಟ, ಎಮ್ಮೆಹಟ್ಟಿ, ಕಲ್ಲಿಹಾಳ್, ದಾಸರಕಲ್ಲಹಳ್ಳಿ, ಅರೆಬಿಳಚಿ, ಅರಕೆರೆ, ನಾಗತಿಬೆಳಗಲು, ತಡಸ, ಅರಳಿಕೊಪ್ಪದಲ್ಲಿ ಭಾರಿ ಮಳೆಯಾಗುತ್ತಿದೆ.
ಇದನ್ನೂ ಓದಿ » ಮಲೆನಾಡಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು, ಸತ್ಯಾಗ್ರಹಕ್ಕೆ ದಿನಾಂಕ ಫಿಕ್ಸ್
ಭದ್ರಾವತಿಯ ಸಿಂಗನಮನೆ, ಹರಿಯೂರು, ಯರೆಹಳ್ಳಿ, ಮಾವಿನಕೆರೆ, ಅರಳಿಹಳ್ಳಿ, ಕಾಗೆಕೊಡಮಗ್ಗಿ, ಬಿಳಕಿ, ನಿಂಬೆಗೊಂದಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ.
ಇದನ್ನೂ ಓದಿ » ಅಡಿಕೆ ಧಾರಣೆ | 16 ಅಕ್ಟೋಬರ್ 2024 |ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
ಶಿವಮೊಗ್ಗ ತಾಲೂಕಿನ ಕೂಡ್ಲಿ, ಹಸೂಡಿ, ಬಿದರೆ, ಸಂತೆಕಡೂರು, ಕೊರಲಹಳ್ಳಿ, ಶಿವಮೊಗ್ಗ ನಗರದಲ್ಲಿ ಮಳೆ ಅಬ್ಬರಿಸುತ್ತಿದೆ. ಪಿಳ್ಳಂಗೆರೆ, ಅಬ್ಬಲಗೆರೆ, ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಆಯನೂರು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರದ ವಿವಿಧೆಡೆ ಸಾಧಾರಣ ಮಳೆಯಾಗುತ್ತಿದೆ.