ಶಿವಮೊಗ್ಗದಲ್ಲಿ ಮಳೆ, ರಸ್ತೆಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು

RAINFALL NEWS, 20 OCTOBER 2024 : ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿಯಿಂದ ಜೋರು ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳು ಮತ್ತು ಚರಂಡಿಗಳು ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ.

ನಗರದ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್‌ನಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇಲ್ಲಿ ರಾಜಾಕಾಲುವೆ ತುಂಬಿ ನೀರು ಹೊರಗೆ ಬಂದಿದೆ. ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಮನೆಗಳಿಗು ನೀರು ನುಗ್ಗಿದೆ. ವಾಹನಗಳು ನೀರಿನಲ್ಲಿ ಅರ್ಧ ಮುಳುಗಿವೆ. ಮನೆಯಿಂದ ನೀರು ಹೊರಗೆ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.

Heavy-rain-at-gopalagowda-layout-c-block

ಇತ್ತ ಬಿ.ಹೆಚ್‌.ರಸ್ತೆಯಲ್ಲಿ ನೀರು ನಿಂತಿದೆ. ಇನ್ನು, ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವ ವರದಿಯಾಗಿದೆ.

heavy rain in Shimoga

ಇದನ್ನೂ ಓದಿ » ಶಿವಮೊಗ್ಗದಲ್ಲಿ ಭಾರಿ ಮಳೆ, ಇವತ್ತು ಯಲ್ಲೋ ಅಲರ್ಟ್‌ ಘೋಷಣೆ

Heavy-rain-at-gopalagowda-layout-c-block

Leave a Comment