ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
RAINFALL NEWS, 20 OCTOBER 2024 : ಶಿವಮೊಗ್ಗದಲ್ಲಿ ಕಳೆದ ರಾತ್ರಿಯಿಂದ ವರುಣನ ಅಬ್ಬರ ಜೋರಾಗಿದೆ. ಇಡೀ ರಾತ್ರಿ ಸುರಿದ ಮಳೆ ಇನ್ನೂ ಮುಂದುವರೆದಿದೆ. ಇನ್ನು, ಜಿಲ್ಲೆಯಾದ್ಯಂತ ಇವತ್ತು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಾತ್ರಿಯಿಂದ ಮಳೆಯೋ ಮಳೆ
ಕಳೆದ ರಾತ್ರಿ 11 ಗಂಟೆ ಹೊತ್ತಿಗೆ ಆರಂಭವಾದ ಮಳೆ ಬಿಡುವು ನೀಡದೆ ಅಬ್ಬರಿಸುತ್ತಿದೆ. ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದೆ. ಇವತ್ತು ಇಡೀ ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗ, ಭದ್ರಾವತಿ, ಸಾಗರ, ಹೊಸನಗರ, ಶಿಕಾರಿಪುರ ಮತ್ತು ಸೊರಬ ತಾಲೂಕುಗಳಲ್ಲಿ ಭಾರಿ ಮಳೆಯ ಅಲರ್ಟ್ ಇದೆ. ತೀರ್ಥಹಳ್ಳಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ತಿಳಿಸಿದೆ.
ಎಲ್ಲೆಲ್ಲಿ ಭಾರಿ ಮಳೆಯಾಗುತ್ತಿದೆ?
ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಭದ್ರಾವತಿಯ ಸಿಂಗನಮನೆ, ಹಿರಿಯೂರು, ಮಾವಿನಕೆರೆ, ಯರೆಹಳ್ಳಿ, ಅರಲಹಳ್ಳಿ, ಕಾಗೆಕೊಡಮಗ್ಗಿ, ತಡಸ, ಬಿಳಕಿಯಲ್ಲಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ನಾಗತಿಬೆಳಗಲು, ಅರೆಬಿಳಚಿ, ಕಲ್ಲಿಹಾಳ್, ದಾಸರಕಲ್ಲಹಳ್ಳಿ, ಎಮ್ಮೆಹಟ್ಟಿ, ಮೈದೊಳಲು, ಮಂಗೋಟೆ, ನಿಂಬೆಗೊಂದಿ, ಗುಡುಮಘಟ್ಟ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿತ್ತು.
ಇನ್ನು, ಶಿವಮೊಗ್ಗ ತಾಲೂಕಿನ ಬಿದರೆ, ಪಿಳ್ಳಂಗೆರೆ, ಸಂತೆ ಕಡೂರು, ಶಿವಮೊಗ್ಗ ನಗರದಲ್ಲಿ ಭಾರಿ ಮಳೆ. ಕೂಡ್ಲಿ, ಕುಂಚೇನಹಳ್ಳಿ ಭಾಗದಲ್ಲಿ ಸಾಧಾರಣ ಮಳೆ. ತೀರ್ಥಹಳ್ಳಿಯ ಹೊನ್ನೇತಾಳು, ಅರೆಹಳ್ಳಿ, ಹೊಸಹಳ್ಳಿ, ನೆರಟೂರು, ಹೊದಲ ಅರಳಾಪುರ, ಆರಗ, ತ್ರಯಂಬಕಪುರ, ಭಾಂಡ್ಯ ಕುಕ್ಕೆ, ತೂದೂರು, ದೇಮ್ಲಾಪುರ ಭಾಗದಲ್ಲಿ ಜೋರು ಮಳೆ. ಬಿದರಗೋಡು, ಆಗುಂಬೆ, ಹೆಗ್ಗೋಡು ಭಾಗದಲ್ಲಿ ಸಾಧಾರಣದಲ್ಲಿ ಮಳೆಯಾಗುತ್ತಿದೆ.
ಇದನ್ನೂ ಓದಿ » ಶಿವಮೊಗ್ಗ ಜನಶತಾಬ್ದಿ ರೈಲಿಗೆ ಹೊಸ ಸ್ಟಾಪ್ ಸೇರ್ಪಡೆ
ಹೊಸನಗರದ ಕೋಡೂರು, ಅಮೃತ, ಸೋನಲೆ, ಮೇಲಿನ ಬೆಸಿಗೆ ಸುತ್ತಮುತ್ತ ಜೋರು, ಮುಂಬಾರು, ಹೊಸೂರು (ಸಂಪೆಕಟ್ಟೆ), ಮಾರುತಿಪುರ ಭಾಗದಲ್ಲಿ ಸಾಧರಣ. ಶಿಕಾರಿಪುರದ ಚಿಕ್ಕಮಾಗಡಿ ಮತ್ತು ಇನಾಮ್ ಅಗ್ರಹಾರ ಮುಚಡಿ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ.
ಇದನ್ನೂ ಓದಿ » ಉದ್ಯೋಗ ಖಾತ್ರಿ ಯೋಜನೆ, ರೈತರಿಂದ ಅರ್ಜಿ ಆಹ್ವಾನ
ಸದ್ಯ ರಾಜ್ಯದಲ್ಲಿ ಭಾರಿ ಮಳೆಯಾದ ಟಾಪ್ 5 ಪ್ರದೇಶಗಳ ಪೈಕಿ ಬೆಜ್ಜವಳ್ಳಿಯಲ್ಲಿ 107 ಮಿ.ಮೀ ಮಳೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.