ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 14 NOVEMBER 2024 : ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಹಲವು ಅಪಘಾತಕ್ಕೆ ಇವೇ ಮೂಲ ಕಾರಣವಾಗಿವೆ. ಗುಂಡಿ ಮುಚ್ಚುವತ್ತ ಸರ್ಕಾರಗಳು ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ದಿನೇ ದಿನೆ ಗುಂಡಿಗಳ ಸಂಖ್ಯೆ ಮತ್ತು ಗಾತ್ರ ಹಿಗ್ಗುತ್ತಿವೆ. ಇತ್ತ ಗುಂಡಿಗಳ ಸಮಸ್ಯೆಗೆ ಮುಕ್ತಿ ನೀಡಲು ನಗರದ ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು (JNNCE) ವಿದ್ಯಾರ್ಥಿಗಳು ಕೋಲ್ಡ್ ಪಾಟ್‌ಹೋಲ್ ಮಿಕ್ಸ್ ಆವಿಷ್ಕರಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಸ್ತೆ ಗುಂಡಿಗೆ ಕೋಲ್ಡ್ ಪಾಟ್‌ಹೋಲ್ ಮಿಕ್ಸ್ ಸುರಿದು, ಮೇಲೆ ತಟ್ಟಿ ಸಮತಟ್ಟು ಮಾಡಿದರೆ ಸಾಕು. ಗುಂಡಿ ಬಂದ್ ಆಗಲಿದೆ. ಬಿಸಿ ಡಾಂಬರ್ ಸುರಿದು, ಟಾರ್ ಹಾಕಿ ರೋಲರ್ ಹತ್ತಿಸಬೇಕದ ಪ್ರಮೇಯವೆ ಇಲ್ಲ. ಕೆಲವೇ ಕ್ಷಣಕ್ಕೆ ಗುಂಡಿ ಬಂದ್ ಆಗಲಿದೆ. ವಾಹನ ಸಂಚಾರ ಸುಗಮವಾಗಲಿವೆ.
ಗುಂಡಿ ಮುಚ್ಚಿದ ಸಂಸದ ರಾಘವೇಂದ್ರ
ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಕೋಲ್ಡ್ ಪಾಟ್‌ಹೋಲ್ ಮಿಕ್ಸ್ ಆವಿಷ್ಕರಿಸಿದ್ದಾರೆ. ರೈಲ್ವೆ ಮೇಲ್ಸೇತುವೆ ಮುಂಭಾಗ ಅಶ್ವಥನಗರದ ಸಮೀಪ ಸವಳಂಗ ರಸ್ತೆಯಲ್ಲಿ ಇದ್ದ ಗುಂಡಿಗೆ ಸಂಸದ ಬಿ.ವೈ.ರಾಘವೇಂದ್ರ ಇವತ್ತು ಕೋಲ್ಡ್ ಪಾಟ್‌ಹೋಲ್ ಮಿಕ್ಸ್ ಸುರಿದು ಬಂದ್ ಮಾಡಿದರು.
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜು ಅನೇಕ ಅವಿಷ್ಕಾರಗಳನ್ನು ಮಾಡಿದೆ. ಕೋಲ್ಡ್ ಪಾಟ್‌ಹೋಲ್ ಮಿಕ್ಸ್ ಕುರಿತು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರುತ್ತೇನೆ. ಕಾಲೇಜು ಆಡಳಿತ ಮಂಡಳಿ ಜೊತೆಗೆ ಕೇಂದ್ರ ಸಚಿವರ ಜೊತೆಗೆ ಮೀಟಿಂಗ್ ನಿಗದಿಪಡಿಸುತ್ತೇನೆ. ದೇಶಾದ್ಯಂತ ಈ ಮಿಕ್ಸ್ ಬಳಕೆ ಕುರಿತು ಯೋಚನೆ ಮಾಡೋಣ.
ಬಿ.ವೈ.ರಾಘವೇಂದ್ರ, ಸಂಸದ
ಪಾಟ್‌ಹೋಲ್ ಮಿಕ್ಸ್ ಆನಾವರಣ
ಇದಕ್ಕೂ ಮುನ್ನ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕೋಲ್ಡ್ ಪಾಟ್‌ಹೋಲ್ ಮಿಕ್ಸ್ ಅನ್ನು ಸಂಸದ ಬಿ.ವೈ.ರಾಘೇಂದ್ರ ಅನಾವರಣಗೊಳಿಸಿದರು.
2021ರಲ್ಲಿ ರಸ್ತೆ ಗುಂಡಿಗಳಿಂದಾಗಿ 3125 ಅಪಘಾತ ಸಂಭವಿಸಿದೆ. ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇಂದ್ರ ಸರ್ಕಾರ ರಸ್ತೆಯಲ್ಲಿ ಗುಂಡಿಗಳಾಗದಂತೆ ತಡೆಯಲು ಕಾರ್ಯಕ್ರಮ ರೂಪಿಸುತ್ತಿದೆ.
ಬಿ.ವೈ.ರಾಘವೇಂದ್ರ, ಸಂಸದ
ಬೆಂಗಳೂರು, ಶಿವಮೊಗ್ಗ – ಭದ್ರಾವತಿಯಲ್ಲಿ ಪ್ರಯೋಗ
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಕಟ್‌ಬ್ಯಾಗ್ ಎಮಲ್ಷನ್ ಬಳಸಿ ಉತ್ಪನ್ನ ಆವಿಷ್ಕರಿಸಲಾಗಿದೆ. ಇದನ್ನು ಬಳಸಲು ವಿಶೇಷ ಪರಿಣಿತಿಯ ಬೇಕಿಲ್ಲ. ರೋಡ್ ಕಟ್ಟಿಂಗ್‌ಗಳಿಗೆ, ರಸ್ತೆ ಗುಂಡಿಗಳಿಗೆ ಈ ಉತ್ಪನ್ನ ಉಪಯುಕ್ತ. ಸುಮಾರು ಎರಡರಿಂದ ಐದು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ರಸ್ತೆಯಲ್ಲಿ ಈ ಮಿಕ್ಸ್ ಹಾಕಿದ ಕೆಲವೇ ಸೆಕೆಂಡುಗಳಿಗೆ ವಾಹನಗಳು ಮುಕ್ತವಾಗಿ ಸಂಚಿರಸಬಹುದಾಗಿದೆ. ಈಗಾಗಲೇ ಬೆಂಗಳೂರು ಹಾಗೂ ಶಿವಮೊಗ್ಗ – ಭದ್ರಾವತಿ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಗುಂಡಿಗಳನ್ನು ಮುಚ್ಚಲಾಗಿದೆ. ಅದರಲ್ಲಿ ಯಶಸ್ಸು ಕಂಡಿದ್ದೇವೆ ಎಂದರು.
ಇದನ್ನೂ ಓದಿ » ಸಿಗಂದೂರು ಬಳಿ ಹಿನ್ನೀರಿನಲ್ಲಿ ಮೂವರು ಯುವಕರ ಮೃತದೇಹ ಪತ್ತೆ
ವಿಧಾನ ಪರಿಷತ್ತಿನ ಸದಸ್ಯ ಡಿ.ಎಸ್.ಅರುಣ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಮಧುರಾವ್, ಸೀತಾಲಕ್ಷ್ಮೀ, ಅನಂತದತ್ತಾ, ಸುಧೀರ್, ಜೆಎನ್‌ಎನ್‌ಸಿಇ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್, ಡೀನ್‌ಗಳಾದ ಡಾ.ಪಿ.ಮಂಜುನಾಥ, ಡಾ.ಎಸ್.ವಿ.ಸತ್ಯನಾರಾಯಣ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಕಾರ್ತಿಕ್, ಸಹಾಯಕ ಪ್ರಾಧ್ಯಾಪಕ ಅರುಣ್, ಡಾ.ಎಸ್.ಟಿ.ಅರವಿಂದ್, ಹೆಚ್.ಎಂ.ಮಲ್ಲಪ್ಪ, ಕಿಶೋರ್ ಶೀರನಾಳಿ, ರವೀಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.