ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 15 NOVEMBER 2024 : ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂಬ ಕಾರಣಕ್ಕೆ ಅವೈಜ್ಞಾನಿಕವಾಗಿ ಜನರ ಮೇಲೆ ಸೆಸ್ (CESS) ವಿಧಿಸಲಾಗುತ್ತಿದೆ. ಇದರ ಬದಲು ರಾಜ್ಯ ಸರ್ಕಾರದ ಸಚಿವರು ಶಬರಿಮಲೈಗೆ ಹೋಗಿ ಭಿಕ್ಷೆ ಬೀಡಲಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚನ್ನಬಸಪ್ಪ, ಅರಣ್ಯದ ನಡುವೆ ಹರಿಯುವ ನದಿ ನೀರು ಅರಣ್ಯ ಸಂಪತ್ತು. ಅದನ್ನು ಉಪಯೋಗಿಸಿಕೊಂಡರೆ ಮೂರು ಪರ್ಸೆಂಟ್ ಸೆಸ್ ವಿಧಿಸಲಾಗುತ್ತದೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ. ಗಿಡ, ಮರಗಳಿಂದಾಗಿಯೇ ನಾವೆಲ್ಲ ಉಸಿರಾಡುತ್ತಿದ್ದೇವೆ. ಕೊನೆಗೆ ಗಾಳಿ ಸೇವನೆಗು ಸೆಸ್ ವಿಧಿಸಿಬಿಡಿ ಎಂದರು.
ಅಕೇಶಿಯಾ ಮರದ ಗಾಳಿ ಸರಿ ಇಲ್ಲ ಎಂದು ಕಡಿಮೆ ಸೆಸ್, ಸಂಪಿಗೆ ಮರ ಸುಗಂಧ ಸೂಸಲಿದೆ ಎಂದು ಅದಕ್ಕೆ ದುಬಾರಿ ಸೆಸ್ ಎಂದು ವರ್ಗೀಕರಿಸಿ ಸೆಸ್ ವಿಧಿಸಿದರು ಆಶ್ಚರ್ಯ ಪಡಬೇಕಿಲ್ಲ. ಸರ್ಕಾರಕ್ಕೆ ಮುಂದೆ ಇಂತಹ ದುರ್ಬುದ್ದಿಯು ಬರಬಹುದು. ಅರಣ್ಯ ಸಚಿವರು ಮೊದಲು ಅವೈಜ್ಞಾನಿಕ ಅದೇಶಗಳನ್ನು ಹಿಂದಕ್ಕೆ ಪಡೆಯಲಿ.
ಎಸ್.ಎನ್.ಚನ್ನಬಸಪ್ಪ, ಶಾಸಕ
ಕಾಂಗ್ರೆಸ್ ಪಕ್ಷ ಜನಪರವಾಗಿ ಎಂದಿಗೂ ಯೋಚನೆ ಮಾಡುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಈ ರೀತಿ ಆದೇಶಿಸುವುದು ಸರಿಯಲ್ಲ. ಇದರ ಬದಲು ರಾಜ್ಯದ ಸಚಿವರುಗಳು ಭಿಕ್ಷೆ ಬೇಡಲಿ. ಡಿಸೆಂಬರ್‌ನಿಂದ ಶಬರಿಮಲೈ ಯಾತ್ರೆ ಶುರುವಾಗಲಿದೆ. ಕೋಟ್ಯಂತರ ಭಕ್ತರು ಅಲ್ಲಿಗೆ ಬರುತ್ತಾರೆ. ಸಚಿವರು ಅಲ್ಲಿ ಹೋಗಿ ಭಿಕ್ಷೆ ಬೇಡಲಿ. ಜನರು ಹಣ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ » ಹೆದ್ದಾರಿಯಲ್ಲಿ ಗುಂಡಿ ಮುಚ್ಚಿದ ಸಂಸದ, ಗಮನ ಸೆಳೆದ JNNCE ಆವಿಷ್ಕಾರ