ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SAGARA NEWS, 18 NOVEMBER 2024 : ಸ್ಟಾಕ್ ಮಾರ್ಕೆಟ್‌ನಲ್ಲಿ (Stock Market) ಹೂಡಿಕೆ ಮಾಡಿ ಹತ್ತು ಪಟ್ಟು ಲಾಭಾಂಶ ಗಳಿಸಬಹುದು ಎಂದು ನಂಬಿಸಿ ಇಂಜಿನಿಯರ್ ಒಬ್ಬರಿಗೆ 29.56 ಲಕ್ಷ ರೂ. ವಂಚಿಸಲಾಗಿದೆ. ಟೆಲಿಗ್ರಾಂ ಗ್ರೂಪ್ ಒಂದರಲ್ಲಿ ಸ್ಟಾಕ್ ಎಕ್ಸ್‌ಚೇಂಜ್ ಕಂಪನಿಯೊಂದರ ಹೆಸರಿನಲ್ಲಿ ಗ್ರೂಪ್ ಕ್ರಿಯೇಟ್ ಮಾಡಿ ಹಣ ಹೂಡಿಕೆ ಮಾಡುವಂತೆ ತಿಳಿಸಲಾಗಿತ್ತು.
ಇದನ್ನು ನಂಬಿದ ಇಂಜಿನಿಯರ್ ನ.2 ರಿಂದ ನ.7ರವರೆಗೆ ಒಟ್ಟು 29.56 ಲಕ್ಷ ರೂ. ಹೂಡಿಕೆ ಮಾಡಿದ್ದರು. ಸ್ಟಾಕ್‌ನಿಂದ ಲಾಭಾಂಶ 85.67 ಲಕ್ಷ ರೂ. ಎಂದು ತೋರಿಸಲಾಗುತ್ತಿತ್ತು. ಇದರಲ್ಲಿ 5 ಲಕ್ಷ ರೂ. ಹಣ ವಿತ್ ಡ್ರಾ ಮಾಡಲು ಮುಂದಾದಾಗ ರಿವ್ಯು ಫೇಲ್ ಎಂದು ತೋರಿಸಿದೆ. ಈ ಬಗ್ಗೆ ವಿಚಾರಿಸಿದಾಗಲೇ ವಂಚನೆಗೊಳಗಾಗಿರುವುದು ಇಂಜಿನಿಯರ್ ಗಮನಕ್ಕೆ ಬಂದಿದೆ.
ಇದನ್ನೂ ಓದಿ » ಲಕ್ಷ ಲಕ್ಷ ಮೌಲ್ಯದ ಅಡಿಕೆ ಕದ್ದ ಐವರು ಅರೆಸ್ಟ್, ಏನೇನೆಲ್ಲ ಸಿಕ್ಕಿದೆ?
ಕೂಡಲೆ ಇಂಜಿನಿಯರ್ ಸೈಬರ್ ಕ್ರೈಮ್ ವೆಬ್‌ಸೈಟ್‌ನಲ್ಲಿ ಪ್ರಕರಣ ದಾಖಲು ಮಾಡಿದ್ದರು. ಬಳಿಕ ಕಾರ್ಗಲ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
Stock Market
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422