SHIVAMOGGA LIVE NEWS, 5 DECEMBER 2024
ಶಿವಮೊಗ್ಗ : ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಅವರಿಗೆ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ನಗರದ ಬಸವ ಕೇಂದ್ರದಲ್ಲಿ ಗುರುವಾರ ಚಿನ್ಮಯಾನುಗ್ರಹ ದೀಕ್ಷೆ (Deekshe) ನೀಡಿದರು. ನಂತರ ಮಾಚೇನಹಳ್ಳಿಯ ಬಸವ ನೆಲೆ ಮೈದಾದನಲ್ಲಿ ಶಿವಮೊಗ್ಗದ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಅವರ ಚಿನ್ಮಯಾನುಗ್ರಹ ದೀಕ್ಷೆ ಸಮಾರಂಭ ನಡೆಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರೆಲ್ಲ ಏನೆಲ್ಲ ಹೇಳಿದರು?
ಪೂರ್ವಾಶ್ರಮದ ತಾಯಿ ನೀಡಿದ ಸಂಸ್ಕಾರದಿಂದ ದೀಕ್ಷೆ ಪಡೆಯಲು ಸಾಧ್ಯವಾಯಿತು. ಕಷಾಯವಸ್ತ್ರ ಧರಿಸಿ 21 ವರ್ಷಗಳ ನಂತರ ಈಗ ಚಿನ್ಮಯಾನುಗ್ರಹ ದೀಕ್ಷೆ ದೊರೆತಿದೆ. ಇದೀಗ ಈ ಗುರು ಸ್ಥಾನವನ್ನು ಹಿರಿಯ ಸ್ವಾಮೀಜಿಗಳು ತಮ್ಮ ಅಮೃತ ಹಸ್ತದಿಂದ ದೀಕ್ಷೆಯ ಮೂಲಕ ನೀಡಿದ್ದಾರೆ. ಇದು ನನ್ನ ಪೂರ್ವಾಶ್ರಮದ ಪುಣ್ಯವೇ ಆಗಿದೆ.
– ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಬಸವಕೇಂದ್ರ
ಚಿನ್ಮಯಾನುಗ್ರಹ ದೀಕ್ಷೆ ಅಲ್ಲಮಪ್ರಭು ಪರಂಪರೆಯಲ್ಲಿ ಮಹತ್ವದ ಸಾತ್ವಿಕ, ಧಾರ್ಮಿಕ ಅನುಭವವಾಗಿದೆ. ಸಮಾಜಮುಖಿಯಾದ ಗುರು ಶಿವತತ್ವಗಳನ್ನು ಅಭ್ಯಾಸ ಮಾಡಿ ಸನ್ಮಾರ್ಗದಲ್ಲಿ ನಡೆಯುತ್ತಿರುವ ಶಿಷ್ಯರಿಗೆ ನೀಡುವ ದೀಕ್ಷೆ ಇದು. ಶಿಷ್ಯ ಜ್ಞಾನ ಸ್ವರೂಪಿಯಾಗಿ ಸೂರ್ಯನ ಬೆಳಕಿನಂತೆ ತೇಜಸ್ಸು ಪಡೆಯುತ್ತಾನೆ. ಜ್ಞಾನದ ಬಲದಿಂದ ಅಜ್ಞಾನ ಓಡಿಸುತ್ತಾನೆ. ಈ ದೀಕ್ಷೆ ಪಡೆದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಜ್ಞಾನ ಸ್ವರೂಪಿಗಳಾಗಿದ್ದಾರೆ.
– ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಜಗತ್ತಿಗೆ ಭಾರತ ಆಧ್ಯಾತ್ಮಿಕ ಶಕ್ತಿ ನೀಡುತ್ತಾ ಬಂದಿದೆ. ಅದೇ ರೀತಿ ಜಿಲ್ಲೆಯು ಕೂಡ ಆಧ್ಯಾತ್ಮ ಕೇಂದ್ರವಾಗಿದೆ. ಇಲ್ಲಿ ಕಲ್ಲು ಎಡವಿದರೂ ಶಿಲಾ ಶಾಸನ ಸಿಗುತ್ತಿದೆ. ಇದು ಅಲ್ಲಮಪ್ರಭು, ಅಕ್ಕಮಹಾದೇವಿ, ಅಜಗಣ್ಣ, ಮುಕ್ತಾಯಕ್ಕ, ಶಿವಪ್ಪನಾಯಕ ಅವರ ಜನ್ಮಸ್ಥಳ. ಈಗ ಶ್ರೀಗಳು ಚಿನ್ಮಯಾನುಗ್ರಹ ಪಡೆದುಕೊಂಡು ಆಧ್ಯಾತ್ಮಿಕ ಜಗತ್ತಿಗೆ ಕಿರೀಟ ಇಟ್ಟಂತೆ ಆಗಿದ್ದಾರೆ.
– ಬಿ.ವೈ.ರಾಘವೇಂದ್ರ, ಸಂಸದ
ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಕಾರ್ತಿಕ ಚಿಂತನದ ಮೂಲಕ ಹೆಸರುವಾಸಿಯಾಗಿದ್ದಾರೆ. ಅವರು ಸಮಾಜ ಸೇವೆ ಮಾಡಲು ಭಗವಂತ ಇಂದು ಹೆಚ್ಚಿನ ಶಕ್ತಿ ನೀಡಿದ್ದಾನೆ. ಇಂತಹ ಮಗನನ್ನು ಸಮಾಜಸೇವೆಗೆ ನೀಡಿದ ಶ್ರೀಗಳ ಪೂರ್ವಾಶ್ರಮದ ತಾಯಿ ಮೀನಾಕ್ಷಮ್ಮ ಅವರನ್ನು ಹೃದಯದಿಂದ ನಮಸ್ಕರಿಸುತ್ತೇನೆ.
– ಶಾರದಾ ಪೂರ್ಯಾನಾಯ್ಕ್, ಶಾಸಕಿ
ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ಜಿ.ಎಂ. ಮೀನಾಕ್ಷಮ್ಮ, ಸಹೋದರ ಎಂ.ಆರ್.ಸುಧಾಕರ್, ನಿಟ್ಟೂರು ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ, ಗುತ್ತಲ ಕಲ್ಮಠದ ಶ್ರೀ ಪ್ರಭು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಶಾಸಕರಾದ ಡಾ.ಧನಂಜಯ ಸರ್ಜಿ, ಎಸ್.ಎನ್.ಚನ್ನಬಸಪ್ಪ, ಬಿ.ಕೆ.ಸಂಗಮೇಶ್ವರ, ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಬಸವ ಕೇಂದ್ರದ ಅಧ್ಯಕ್ಷ ಡಿ.ಜಿ.ಬೆನಕಪ್ಪ, ವಿಜಯ್ ಕುಮಾರ್, ಕಾಡಾ ಅಧ್ಯಕ್ಷ ಡಾ.ಅಂಶುಮಾನ್, ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ » ಶಿವಮೊಗ್ಗ ಭದ್ರಾವತಿ ಮಧ್ಯೆ ರೈಲ್ವೆ ಮೇಲ್ಸೇತವೆ, ಉದ್ಘಾಟನೆ ಯಾವಾಗ ಗೊತ್ತಾ?