ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 19 DECEMBER 2024
ಶಿವಮೊಗ್ಗ : ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನ ಮಾಡಿರುವ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ಕೈ ಬಿಡಬೇಕು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಿ.ಟಿ.ರವಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ (Protest) ನಡೆಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಗೋಪಿ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು.
ಅಮಿತ್ ಷಾ ಫೋಟೊಗೆ ಪೊರಕೆ ಏಟು
ಗೋಪಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಸಭೆ ನಡೆಸಿದರು. ಈ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾವಚಿತ್ರಕ್ಕೆ ಮಹಿಳೆಯರು ಪೊರಕೆ ಏಟು ನೀಡಿ, ಘೋಷಣೆ ಕೂಗಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ಡಾ. ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನಲ್ಲೆ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಸರ್ವರಿಗು ಸಮಬಾಳು, ಸಮಪಾಲು ತತ್ವದಡಿ ಸಂವಿಧಾನ ರಚನೆಯಾಗಿದೆ. ಬಿಜೆಪಿಯವರಿಗೆ ಈ ಸಂವಿಧಾನವನ್ನು ಬದಲಿಸುವ, ಮೀಸಲಾತಿಯನ್ನು ರದ್ದುಗೊಳಿಸುವ ಹಿಡನ್ ಅಜೆಂಡ್ ಇದೆ. ಹಾಗಾಗಿಯೇ ಡಾ. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಕಂಡರೆ ಬಿಜೆಪಿಯವರಿಗೆ ಸಹಿಸಲು ಸಾಧ್ಯವಿಲ್ಲ. ಅಮಿತ್ ಷಾ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣ ಇದಕ್ಕೆ ಪುಷ್ಠಿ ನೀಡುತ್ತದೆ.
– ಆರ್.ಪ್ರಸನ್ನ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಅಮಿತ್ ಷಾ ಅವರದ್ದು ಸಂವಿಧಾನವನ್ನು ಬದಲಿಸುವ ಮನಸ್ಥಿತಿ. ಇದೆ ಕಾರಣಕ್ಕೆ ಅವರು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಇತ್ತ ಸಿಟಿ ರವಿ ಮಹಿಳಾ ನಿಂದನೆ ಮಾಡಿ ಬಿಜೆಪಿಯ ಮನಸ್ಥಿತಿ ತೋರಿಸಿದ್ದಾರೆ.
– ರವಿಕುಮಾರ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ
ಈವರೆಗು ಸಂಸತ್ತಿನ ಹೊರಗೆ ಸಂವಿಧಾನ ಬದಲಾವಣೆ ಮಾತಾಡುತ್ತಿದ್ದರು. ಈಗ ಅಮಿತ್ ಷಾ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಸಂವಿಧಾನದಿಂದಾಗಿಯೆ ಈ ದೇಶದ ಅಲ್ಪಸಂಖ್ಯಾತರು, ಹಿಂದುಳಿದವರಿಗೆ ಸಮಾನತೆ ಸಿಕ್ಕಿದೆ. ಎಲ್ಲರು ಒಗ್ಗೂಡಿ ಅಮಿತ್ ಶಾ ಅವರ ಮನಸ್ಥಿತಿಗೆ ತಿಲಾಂಜಲಿ ಹೇಳಬೇಕು.
– ಡಾ. ಶ್ರೀನಿವಾಸ್ ಕರಿಯಣ್ಣ, ಕಾಂಗ್ರೆಸ್ ಮುಖಂಡ
ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅನ್ನುವ ಬದಲು ಭಗವಂತನನ್ನು ಸ್ಮರಿಸಿ ಎಂದು ಅಮಿತ್ ಷಾ ಹೇಳಿದ್ದಾರೆ. ಬಿಜೆಪಿಯವರು ಮೋದಿ ಮೋದಿ ಮೋದಿ ಅನ್ನುವ ಬದಲು ಪೊರಕೆ, ಪೊರಕೆ, ಪೊರಕೆ ಎನ್ನಲಿ. ಪೊರಕೆ ಲಕ್ಷ್ಮಿ ಸಮಾನ. ಇದರಿಂದ ದೇಶ ಸ್ವಚ್ಛವಾಗಲಿದೆ.
– ಹೆಚ್.ಸಿ.ಯೋಗೇಶ್, ಮಾಜಿ ಕಾರ್ಪೊರೇಟರ್
ಇದನ್ನೂ ಓದಿ » ಎರಡು ದಿನ ಶಿವಮೊಗ್ಗ ಜಿಲ್ಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಎಲ್ಲೆಲ್ಲಿಗೆಲ್ಲ ತೆರಳಲಿದ್ದಾರೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422