ತೀರ್ಥಹಳ್ಳಿಯಲ್ಲಿ ಜೋರು ಮಳೆ, ನಾಳೆ ಸ್ಕೂಲ್’ಗಳಿಗೆ ರಜೆ, ಮರಗಳು ಧರೆಗೆ, ಗದ್ದೆಯಲ್ಲಿ ನಿಂತ ನೀರು

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 5 ಆಗಸ್ಟ್ 2019

ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಕೆಲವು ಕಡೆ ಮರ ಬಿದ್ದ ವರದಿಯಾಗಿದೆ.

ತೀರ್ಥಹಳ್ಳಿ ತಾಲೂಕಿನಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 69.6 ಮಿ.ಮೀ ಮಳೆಯಾಗಿದೆ. ಇನ್ನು, ಆಗುಂಬೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, 110 ಮಿ.ಮೀ ಮಳೆ ದಾಖಲಾಗಿದೆ. ನಿರಂತರ ಮಳೆಯಿಂದಾಗಿ ಗದ್ದೆಗಳು ಜಲಾವೃತವಾಗಿವೆ. ಕೆಲವು ಕಡೆಗೆ ವಿದ್ಯುತ್ ವ್ಯತ್ಯೆಯದ ವರದಿಯಾಗಿದೆ.

ಗಾಳಿ, ಮಳೆಗೆ ತೀರ್ಥಹಳ್ಳಿಯ ಸಹ್ಯಾದ್ರಿ ಶಾಲೆ ಮುಂಭಾಗ ಮರ ಧರೆಗುರುಳಿದ್ದು, ಶಿವಮೊಗ್ಗ – ಮಂಗಳೂರು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಸ್ಕೂಲ್’ಗಳಿಗೆ ರಜೆ ಘೋಷಣೆ

ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ತೀರ್ಥಹಳ್ಳಿ ತಾಲೂಕಿನ ಶಾಲೆಗಳಿಗೆ ಆಗಸ್ಟ್ 6ರಂದು ರಜೆ ಘೋಷಿಸಲಾಗಿದೆ ಎಂದು ಬಿಇಓ ತಿಳಿಸಿದ್ದಾರೆ.

ತುಂಬಿ ಹರಿಯುತ್ತಿರುವ ತುಂಗೆ

ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿರುವುದರಿಂದ ತುಂಗೆ ನದಿ ತುಂಬಿ ಹರಿಯುತ್ತಿದೆ. ಹಾಗಾಗಿ ತುಂಗಾ ಜಲಾಶಯದಕ್ಕೆ ಒಳಹರಿವು ಹೆಚ್ಚಳವಾಗಿದೆ. ಸುಮಾರು 35 ಕ್ಯೂಸೆಕ್ ಒಳಹರಿವು ದಾಖಲಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : August 5, 2019 at 5:28 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಆಗಷ್ಟ್ 5, 2019

Leave a Comment