ಶಿವಮೊಗ್ಗ : ಗೊರೂರು ಸೂಪರ್ ಮಾರ್ಟ್‌ನಲ್ಲಿ (Market) ಉದ್ಯೋಗವಕಾಶವಿದೆ. ಒಟ್ಟು 30 ಹುದ್ದೆಗಳು ಖಾಲಿ ಇದ್ದು, 15 ಪುರುಷರು, 15 ಮಹಿಳೆಯರಿಗೆ ಕೆಲಸವಿದೆ ಎಂದು ತಿಳಿಸಲಾಗಿದೆ.
ಅರ್ಹತೆಗಳೇನು?
ಅಭ್ಯರ್ಥಿ ಕನಿಷ್ಠ 18 ರಿಂದ ಗರಿಷ್ಠ 40 ವರ್ಷ ವಯಸ್ಸಿನವರಾಗಿರಬೇಕು. ಎಸ್ಸೆಸ್ಸೆಲ್ಸಿ ಅಥವಾ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಓದಲು ಮತ್ತು ಬರೆಯಲು ಬರಬೇಕು. ಪುರುಷ ಅಭ್ಯರ್ಥಿಗಳು ದ್ವಿಚಕ್ರ ವಾಹನದ ಪರವಾನಿಗೆ ಹೊಂದಿರಬೇಕು.
ಯಾವೆಲ್ಲ ಹೆದ್ದೆ ಖಾಲಿ ಇದೆ?
ಸ್ಟೋರ್ ಮ್ಯಾನೇಜರ್ -1 (ಪದವೀಧರ), ಅಸಿಸ್ಟೆಂಟ್ ಮ್ಯಾನೇಜರ್ – 1 (ಪದವೀಧರ), ಡಿಪಾರ್ಟ್‌ಮೆಂಟಲ್ ಮ್ಯಾನೇಜರ್ – 3, ಕ್ಯಾಷಿಯರ್ – 6, ಕಸ್ಟಮರ್ ರೆಪ್ರೆಸೆಂಟೇಟಿವ್ – 15, ಸ್ಟಾಕ್ ಕ್ಲರ್ಕ್ – 2, ಪ್ರೊಡ್ಯೂಸ್ ಕ್ಲರ್ಕ್ – 2 ಹುದ್ದೆಗಳು ಖಾಲಿ ಇದೆ.
ವೇತನ ಮತ್ತು ಸಂದರ್ಶನ ಸ್ಥಳ
ಅಭ್ಯರ್ಥಿಯ ಅನುಭಕ್ಕೆ ತಕ್ಕ ವೇತನ ನೀಡಲಾಗುತ್ತದೆ. ಪಿಎಫ್, ಇಎಸ್‌ಐ, ಜಿಐ ಸೌಲಭ್ಯ ಇರಲಿದೆ. ಆಸಕ್ತರು ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ಅಂಕಪಟ್ಟಿಯ ಮೂಲ ಪ್ರತಿಗಳನ್ನು ತರಬೇಕು.
ಸಂದರ್ಶನದ ಸ್ಥಳ & ದಿನಾಂಕ : ಫೆಬ್ರವರಿ 21ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ. ಮಧ್ಯಾಹ್ನ 2.30 ರಿಂದ ಸಂಜೆ 5.30ರವರೆಗೆ. ಸ್ಥಳ : ಜ್ಯೂವೆಲ್ ರಾಕ್ ಹೊಟೇಲ್, 1ನೇ ಮಹಡಿ, ಶಿವಮೊಗ್ಗ
ಸಂದರ್ಶನಕ್ಕೆ ಬರುವ ಮುನ್ನ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಆಸಕ್ತರು 8792132747 ಮೊಬೈಲ್ ನಂಬರ್‌ಗೆ ಕರೆ ಮಾಡುವಂತೆ ತಿಳಿಸಲಾಗಿದೆ.
ಇದನ್ನೂ ಓದಿ » ಹಂದಿಗಾಗಿ ಕೈ ಕೈ ಮಿಲಾಯಿಸಿ ಆಸ್ಪತ್ರೆ ಸೇರಿದ ಯುವಕರು, ದೂರು, ಪ್ರತಿದೂರು ದಾಖಲು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200