ರೈಲ್ವೆ ಸುದ್ದಿ : ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಎರಡು ಎಕ್ಸ್‌ಪ್ರೆಸ್ ರೈಲುಗಳ (Train) ನಿಲುಗಡೆಯನ್ನು ಮುಂದುವರೆಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಯಾವೆಲ್ಲ ರೈಲುಗಳು?
ರೈಲು ಸಂಖ್ಯೆ 16227/16228 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ :
ಈ ಹಿಂದೆ ಅರಸಾಳು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು, ಈ ಸೌಲಭ್ಯವನ್ನು 2025ರ ಫೆ.24 ರಿಂದ ಆ.23ರವರೆಗೆ ಮುಂದುವರೆಸಲಾಗಿದೆ.

ರೈಲು ಸಂಖ್ಯೆ 16206/16205 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ :
ಈ ಹಿಂದೆ ಅರಸಾಳು ಮತ್ತು ಕುಂಸಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು. ಈ ಸೌಲಭ್ಯವನ್ನು 2025ರ ಫೆ.24 ರಿಂದ ಆ.23ರವರೆಗೆ ಮುಂದುವರೆಸಲಾಗಿದೆ.

ಇದನ್ನೂ ಓದಿ » ತಾಳಗುಪ್ಪ, ಶಿವಮೊಗ್ಗ, ಭದ್ರಾವತಿ : ದಿನ ಎಷ್ಟು ರೈಲು, ಯಾವ್ಯಾವ ಟೈಮ್‌ಗೆ ಹೊರಡುತ್ತವೆ? ಇಲ್ಲಿದೆ ಲಿಸ್ಟ್
