ಶಿವಮೊಗ್ಗ : ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ (Temple) ವಿಶೇಷ ಪೂಜೆ ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ದೇವರಿಗೆ ಕೈ ಮುಗಿದು ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸಿದರು.
ದುರ್ಗಿಗುಡಿಯ ದುರ್ಗಮ್ಮ ಮತ್ತು ಮರಿಯಮ್ಮ ದೇವಿ ದೇವಸ್ಥಾನದಿಂದ (Temple) ದುರ್ಗಿಗುಡಿ ಮುಖ್ಯರಸ್ತೆವರೆಗೆ ರಥೋತ್ಸವ ನಡೆಯಿತು.
ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ
ರಥೋತ್ಸವಕ್ಕು ಮುನ್ನ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ದುರ್ಗಿಗುಡಿಯ ವಿವಿಧೆಡೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಭಕ್ತರು ದೇವಿಗೆ ಪೂಜೆ ಸಲ್ಲಿಸಿ, ಹಣ್ಣು ಕಾಯಿ ಅರ್ಪಿಸಿದರು. ನಂತರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ರಥವನ್ನು ಭಕ್ತರು ಎಳೆದು ಪುನೀತರಾದರು.

ಭಕ್ತರು ಮಂಡಕ್ಕಿ, ಬಾಳೆ ಹಣ್ಣುನ್ನು ಪಲ್ಲಕ್ಕಿ ಮತ್ತು ರಥದ ಮೇಲೆ ತೂರಿ ಭಕ್ತಿ ಸಮರ್ಪಿಸಿದರು. ರಥೋತ್ಸವದ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ಜಾತ್ರೆಯ ಮರುದಿನ ಶಿವಮೊಗ್ಗ ನಗರದಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತದೆ.

ಭಾರಿ ಬಿಸಿಲಿಗೆ ಭಕ್ತರು ಹೈರಾಣು
ರಥೋತ್ಸವಕ್ಕೆ ಸೇರಿದ್ದ ದೊಡ್ಡ ಸಂಖ್ಯೆಯ ಭಕ್ತರು ರಣ ಬಿಸಿಲಿಗೆ ಹೈರಾಣಾದರು. ಕಟ್ಟಡಗಳ ಕೆಳಗೆ, ಪೆಂಡಾಲ್ಗಳ ಅಡಿಯಲ್ಲಿ ನಿಂತು ದಣಿವಾರಿಸಿಕೊಳ್ಳುತ್ತಿದ್ದರು. ಕೊಂಚ ಹೊತ್ತು ಬಿಸಿಲಿಗೆ ಮೈ ಒಡ್ಡಿದವರು ಕೂಡಲೆ ನೆರಳಿಗೆ ದೌಡಾಯಿಸುತ್ತಿದ್ದರು.
ಇಲ್ಲಿದೆ ರಥೋತ್ಸವದ ಫೋಟೊಗಳು








ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, ಎಲ್ಲೆಲ್ಲಿ? ಹೇಗಿದೆ ಹೋಳಿ ಹಬ್ಬದ ಸಿದ್ಧತೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200