ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಪಾಲಿಕೆ ನೌಕರರು, ತಪ್ಪಿದರೆ ಅನಿರ್ದಿಷ್ಟಾವಧಿ ಮುಷ್ಕರದ ವಾರ್ನಿಂಗ್‌

ಶಿವಮೊಗ್ಗ : ವಿವಿಧ ಬೇಡಿಕೆ ಈಡೇರಿಸುವಂತೆ ಪಾಲಿಕೆ ನೌಕರರು ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ್ದಾರೆ. ಮನವಿಗೆ ಸ್ಪಂದಿಸದೆ ಇದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ (Strike) ನಡೆಸುವುದಾಗಿ ಎಚ್ಚರಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಗೋವಿಂದ್‌, ಏ.10ರಂದು ಕೇಂದ್ರ ಸಂಘದೊಂದಿಗೆ ಸಭೆ ನಡೆಯಿತು. ಬೇಡಿಕೆಗಳ ಈಡೇರಿಕೆಗೆ ವಿವಿಧ ಹಂತದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಆಗಲು ತಮ್ಮ ಮನವಿಗೆ ಸ್ಪಂದಿಸದೆ ಇದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ (Strike) ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಕಾಗೋಷ್ಠಿಯ ಪ್ರಮುಖ ಹೈಲೈಟ್ಸ್‌

ಹೈಲೈಟ್‌ 1 : ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯವನ್ನು ಸರ್ಕಾರದಿಂದ ಪಾವತಿಸಲಾಗುತ್ತಿದೆ. ಪಾಲಿಕೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ನೌಕರರಿಗು ಇದೇ ಮಾದರಿ ವೇತನ ನೀಡಬೇಕು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿಟಿಯಲ್ಲಿ ಅಧಿಕಾರಿಗಳ ದಾಳಿ, ಲೋಡ್‌ಗಟ್ಟಲೆ ಮರಳು ವಶಕ್ಕೆ

ಹೈಲೈಟ್‌ 2 : ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಮತ್ತು ಕೆಜಿಐಡಿಯನ್ನು ಪಾಲಿಕೆ, ಪುರಸಭೆ, ನಗರಸಭೆ ನೌಕರರಿಗು ವಿಸ್ತರಿಸಬೇಕು.

Palike-Employees-protest-in-Shimoga-city.

ಹೈಲೈಟ್‌ 3 : ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿ ಕರಡು ಅಧಿಸೂಚನೆ ಕೂಡಲೆ ಜಾರಿ ಮಾಡಬೇಕು.

ಹಂತ ಹಂತದ ಹೋರಾಟ

ಬೇಡಿಕೆಗಳನ್ನು ಈಡೇರಿಸುವಂತೆ ಹಂತ ಹಂತವಾಗಿ ಹೋರಾಟ ನಡೆಸಲಾಗುತ್ತದೆ ಎಂದು ಎನ್‌.ಗೋವಿಂದ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Palike Workers Strike at Shimoga

ಇಂದಿನಿಂದ ಬಲತೋಳಿಗೆ ಕಪ್ಪು ಪಟ್ಟಿ ಧರಿಸಿ ಹೋರಾಟ ನಡೆಸಲಾಗುತ್ತದೆ. ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಸಂಘ – ಸಂಸ್ಥೆಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಹಂತ ಹಂತವಾಗಿ ಹೋರಾಟ ನಡೆಸಲಾಗುತ್ತದೆ. ಆದರೂ ಬೇಡಿಕೆಗಳು ಈಡೇರದಿದ್ದರೆ ಮೇ 26ರಂದು ಸಾಂದರ್ಭಿಕ ರಜೆ ಹಾಕಿ ಅನಿರ್ದಿಷ್ಟಾವಧಿಗೆ ಕೆಲಸ ಸ್ಥಗಿತಗೊಳಿಸಲಾಗುತ್ತದೆ.

– ಎನ್.‌ಗೋವಿಂದ, ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಜಿಲ್ಲಾಧ್ಯಕ್ಷ

Palike-Employees-protest-in-Shimoga-city.

ಸುದ್ದಿಗೋಷ್ಠಿಯಲ್ಲಿ ಕುಮಾರ್, ವಸಂತಕುಮಾರ್, ಮೋಹನ್, ಎಸ್.ಜಿ.ಮಂಜಣ್ಣ, ನಾಗೇಶ್, ಲೋಹಿತ್ ಯಾದವ್, ಜುಬೇರುಲ್ಲಾ, ಮಾರುತಿ, ಪೆಂಚಲಯ್ಯ, ರೇಣುಕಮ್ಮ ಇದ್ದರು.

ಇದನ್ನೂ ಓದಿ » ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಜನಸ್ಪಂದನ, ಈ ಬಾರಿ ಹೊಸನಗರದಲ್ಲಿ ಅಹವಾಲು ಸ್ವೀಕಾರ, ಯಾವಾಗ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment