ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜೋರು ಗಾಳಿಗೆ ಸಹಿತ ಮಳೆಯಿಂದಾಗಿ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಬೃಹತ್ ಮರ (Tree) ಧರೆಗುರುಳಿದೆ. ಶಿವಮೊಗ್ಗ ತಾಲೂಕು ಗಾಜನೂರು ಚೆಕ್ ಪೋಸ್ಟ್ ಸಮೀಪ ಮರ ಬುಡಮೇಲಾಗಿದೆ.
ಚೆಕ್ ಪೋಸ್ಟ್‌ನ ಸಹಿನದಲ್ಲಿದ್ದ ಬೃಹತ್ ಆಲದ ಮರ ಮಧ್ಯಾಹ್ನ ಬೀಸಿದ ಜೋರಿ ಗಾಳಿಗೆ ಧರೆಗುರುಳಿಸಿದೆ. ಇದರಿಂದ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಮರ ಉರುಳುವಾಗ ಅದೃಷ್ಟವಶಾತ್ ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ.

ಈಗ ಹೆದ್ದಾರಿ ಪಕ್ಕದಲ್ಲಿರುವ ಕಿರಿದಾದ ದಾರಿಯ ಮೂಲಕ ವಾಹನಗಳು ಸಂಚರಿಸುತ್ತಿವೆ. ಸದ್ಯ ಆಲದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇನ್ನು, ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಜೋರು ಮಳೆಯಾಗುತ್ತಿದೆ. ಹಲವು ಕಡೆ ಗಾಳಿ ಸಹಿತ ಮಳೆಯಾಗುತ್ತಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಯುವತಿಯ ಮೊಬೈಲ್ ಕದ್ದ ಮಂಗ, ಒಂದು ಗಂಟೆ ಮರವೇರಿ ಕುಳಿತು ಪ್ರಹಸನ
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಗಾಳಿ ಸಹಿತ ಜೋರು ಮಳೆ

LATEST NEWS
- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

- ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್, 1 ಕೆ.ಜಿ ಬಕೆಟ್ ಮೊಸರು ಮಾರುಕಟ್ಟೆಗೆ ಎಂಟ್ರಿ, ಎಷ್ಟಿರುತ್ತೆ ರೇಟ್?

- ‘ಒಂದು ಕೋಟಿ ರುಪಾಯಿ ನೆರವು, ಸರ್ಕಾರಿ ನೌಕರಿ ಕೊಡಬೇಕು’, ಕುರುಬರ ವೇದಿಕೆ ಪಟ್ಟು

- ಸಚಿವ ಮಧು ಬಂಗಾರಪ್ಪ ಜನ್ಮದಿನ, ವಿದ್ಯಾರ್ಥಿಗಳು, ಪೌರ ಕಾರ್ಮಿಕರಿಗೆ ವಿಮಾನಯಾನ

About The Editor
ನಿತಿನ್ ಆರ್.ಕೈದೊಟ್ಲು






