ಶಿವಮೊಗ್ಗ: ರೈಲ್ವೆ ನಿಲ್ದಾಣದ ಸುತ್ತಲು ಆಟೋಗಳಿಗೆ (Auto) ನಿರ್ಬಂಧ ವಿಧಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣ ಮತ್ತು ಪ್ರಯಾಣಿಕರಿಗೆ ಕಿರಿಕಿರಿ ತಪ್ಪಿಸಲು ಸಂಚಾರ ಠಾಣೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಮೂರು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಈ ಬ್ಯಾರಿಕೇಡ್‌ನ ಒಳಗೆ ಆಟೋಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಖಾಸಗಿ ವಾಹನಗಳು ಮಾತ್ರ ನಿಲ್ದಾಣದವರೆಗೆ ಹೋಗಬಹುದಾಗಿದೆ.

ಆಟೋಗಳಿಗೆ ನಿರ್ಬಂಧಕ್ಕೆ ಕಾರಣಗಳೇನು?
ರೈಲುಗಳು ಬಂದಾಗ ಆಟೋಗಳನ್ನು ರೈಲ್ವೆ ನಿಲ್ದಾಣದ ಗೇಟಿಗೆ ನಿಲ್ಲಿಸುತ್ತಿದ್ದರು. ಇದರಿಂದ ಪ್ರಯಾಣಿಕರು ನಿಲ್ದಾಣದಿಂದ ಹೊರಗೆ ಬರಲು ಕಷ್ಟವಾಗುತಿತ್ತು.
ನಿಲ್ದಾಣದಿಂದ ಹೊರ ಬರುವ ಪ್ರಯಾಣಿಕರಿಗೆ ಕೆಲವು ಆಟೋ ಚಾಲಕರು ಕಿರಿಕಿರಿ ಉಂಟು ಮಾಡುತ್ತಿದ್ದರು. ತಮ್ಮ ಆಟೋಗಳಿಗೆ ಹತ್ತಬೇಕು ಎಂದು ಒತ್ತಾಯಿಸುತ್ತಿದ್ದರು.

ಆಟೋಗಳ ದಟ್ಟಣೆಯಿಂದ ರೈಲ್ವೆ ನಿಲ್ದಾಣದ ಮುಂಭಾಗ ಕಾರುಗಳು, ಬೈಕುಗಳು ಸಂಚಾರಕ್ಕೆ ಸಮಸ್ಯೆ ಆಗುತಿತ್ತು. ರೈಲ್ವೆ ನಿಲ್ದಾಣದ ರಸ್ತೆಗೆ ಖಾಸಗಿ ವಾಹನಗಳು ಬರಲು ಸಾಧ್ಯವೆ ಆಗುತ್ತಿರಲಿಲ್ಲ.
ಆಟೋಗಳಿಂದ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್‌ನಿಂದಾಗಿ ಹಲವರು ರೈಲು ತಪ್ಪಿಸಿಕೊಂಡಿದ್ದರು.

ಇದನ್ನೂ ಓದಿ » ಹೊಸನಗರದ ಸಂಪೆಕಟ್ಟೆಯಲ್ಲಿ ಮದ್ಯದ ವಿಚಾರಕ್ಕೆ ರಾಡ್‌ನಿಂದ ಹಲ್ಲೆ, CCTVಯಲ್ಲಿ ದೃಶ್ಯ ಸೆರೆ, ಏನಿದು ಘಟನೆ?
ಈಗ ಹೇಗಿದೆ ವ್ಯವಸ್ಥೆ?
ರೈಲ್ವೆ ನಿಲ್ದಾಣದಲ್ಲಿ ಆಟೋಗಳ ನಿಲುಗಡೆಗೆ ಸಂಚಾರ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿದ್ದರು. ಆದರೆ ಸಂಚಾರ ದಟ್ಟಣೆ ನಿಯಂತ್ರಣವಾಗಲಿಲ್ಲ. ಹಾಗಾಗಿ ರೈಲ್ವೆ ನಿಲ್ದಾಣದ ಮುಂಭಾಗ ಆಟೋಗಳ ನಿಲುಗಡೆ ನಿಷೇಧಿಸಲಾಗಿದೆ.
ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇದರ ಮುಂದೆ ಆಟೋಗಳ ಪ್ರವೇಶಕ್ಕೆ ನಿರ್ಬಂಧ ಎಂದು ಬ್ಯಾನರ್ ಹಾಕಲಾಗಿದೆ.
ಬ್ಯಾರಿಕೇಡ್‌ನ ಹೊರ ಭಾಗದಲ್ಲಿಯೇ ಆಟೋಗಳ ನಿಲುಗಡೆ ಮಾಡಬೇಕು. ಬ್ಯಾರಿಕೇಡ್ ಬಳಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಅಥವಾ ಇಳಿಸಬೇಕು.

ಇತರೆ ವಾಹನಗಳ ಸಂಚಾರಕ್ಕೆ ಸ್ವಲ್ಪ ಜಾಗ ಬಿಟ್ಟು ಸಂಚಾರ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.

ಆಟೋಗಳಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಚಾರ ಠಾಣೆ ಪೊಲೀಸರನ್ನು ನಿಯೋಜಿಸಲಾಗಿದೆ. ಮೈಕ್ ಹಿಡಿದು ಆಟೋ ಚಾಲಕರಿಗೆ ಸಂಚಾರ ಠಾಣೆ ಪೊಲೀಸರು ಸೂಚನೆ ನೀಡಲಿದ್ದಾರೆ.

ಇದನ್ನೂ ಓದಿ » ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ರೈಲಿನ ಬೋಗಿಯಲ್ಲಿ ಬೆಂಕಿ
ಸಂಚಾರ ಠಾಣೆ ಪೊಲೀಸರ ಈ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವ್ಯವಸ್ಥೆ ಇದೇ ರೀತಿ ಮುಂದುವರೆದರೆ ಪ್ರಯಾಣಿಕರಿಗು ಅನುಕೂಲವಾಗಲಿದೆ.
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






