ದೇವಸ್ಥಾನದಲ್ಲಿ ಕಳ್ಳತನವಾಗಿ ಎರಡೇ ಗಂಟೆಯಲ್ಲಿ ಆರೋಪಿ ಅರೆಸ್ಟ್‌, ಎಲ್ಲಿ?

ತೀರ್ಥಹಳ್ಳಿ: ದೇವಸ್ಥಾನದಲ್ಲಿ ಕಳ್ಳತನ (Theft) ಮಾಡಿದ ಕೇವಲ 2 ಗಂಟೆಯೊಳಗೆ ಆಗುಂಬೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಂಕದಹೊಳೆ ಸಮೀಪದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆಗುಂಬೆ ಶ್ರೀರಾಮಮಂದಿರದಲ್ಲಿ ಸೋಮವಾರ ರಾತ್ರಿ ರಾಮ ದೇವರ ಕೈಯಲ್ಲಿದ್ದ ಬಿಲ್ಲು, ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳವು ಮಾಡಲಾಗಿತ್ತು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ವಿಷಯ ತಿಳಿಯುತ್ತಲೆ ತನಿಖೆ ಆರಂಭಿಸಿದ ಪೊಲೀಸರು ಸುಂಕದ ಹೊಳೆ ಸಮೀಪದ ಏಳಮಲೈ ವಾಸಿ ಮನೋಜ್ ಆಲಿಯಾಸ್ ಗುಂಡ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಆತನದಿಂದ ರಾಮಮಂದಿರದಲ್ಲಿ ಕಳವು ಆಗಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆಗುಂಬೆ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಶಿವನಗೌಡ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ದಸ್ತಗಿರಿ ಮಾಡಿದೆ. ಕಾಯಾಚರಣೆಯಲ್ಲಿ ಸಿಬ್ಬಂದಿ ಅನಿಲ್, ಸುರೇಶ್, ರಮೇಶ್, ನಾಗಾರ್ಜುನ, ಅವಿನಾಶ್, ಚೇತನ, ಆದರ್ಶ ಪಾಲ್ಗೊಂಡಿದ್ದರು.

Shivamogga Live Promotion

Agumbe-Board-General

ಇದನ್ನೂ ಓದಿ » ‘ಪಾಕಿಸ್ತಾನ ಜಿಂದಾಬಾದ್‌’ ಘೋಷಣೆ ಕೇಸ್‌, ಭದ್ರಾವತಿಯಲ್ಲಿ ಏನೇನಾಯ್ತು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Theft case arrest

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment