ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸಿಮೆಂಟ್ ಮತ್ತು ಜೆಲ್ಲಿ ಮಿಕ್ಸ್ ಮಾಡಿ ರಸ್ತೆ ಗುಂಡಿ (Pot Holes) ಮುಚ್ಚಿದ್ದು ಶಿವಮೊಗ್ಗದಲ್ಲಿ ವಾಹನ ಸವಾರರಿಗೆ ತಲೆನೋವು ತಂದಿದೆ. ಗುಂಡಿ ಇದ್ದಾಗಲೇ ರಸ್ತೆಯಲ್ಲಿ ಸಂಚಾರ ಚೆನ್ನಾಗಿತ್ತು ಎಂಬಂತಾಗಿದೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಎದುರು ಬಿ.ಹೆಚ್.ರಸ್ತೆಯಲ್ಲಿನ ದುಸ್ಥಿತಿ. ಈ ರಸ್ತೆಯ ಉದ್ದಕ್ಕು ನಾನಾ ಗಾತ್ರದ ಆಳವಾದ ಗುಂಡಿಗಳಾಗಿದ್ದವು. ಇವುಗಳನ್ನು ಶಾಶ್ವತವಾಗಿ ಬಂದ್ ಮಾಡುವ ಬದಲು ಸಿಮೆಂಟ್ ಮತ್ತು ಜೆಲ್ಲಿ ಮಿಕ್ಸ್ ಮಾಡಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದು ವಾಹನ ಸವಾರರ ಪಾಲಿಗೆ ಸಮಸ್ಯೆ ಹೆಚ್ಚಳ ಮಾಡಿದೆ.
ಕಣ್ ಬಿಡಲು ಆಗಲ್ಲ, ಜೀವ ಭಯ ತಪ್ಪಿಲ್ಲ
ಬಿ.ಹೆಚ್.ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಸ್ಸು, ಲಾರಿಗಳು ನಿರಂತರವಾಗಿ ಓಡಾಡುತ್ತಲೆ ಇರುತ್ತವೆ. ಇಂತಹ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಲು ಸಿಮೆಂಟ್ ಮತ್ತು ಜೆಲ್ಲಿ ಹಾಕಲಾಗಿದೆ. ಜೆಲ್ಲಿಯು ರಸ್ತೆ ತುಂಬೆಲ್ಲ ಹರಡಿಕೊಂಡಿದೆ. ಇನ್ನು, ಯಾವುದೇ ವಾಹನ ಇದರ ಮೇಲೆ ಸಂಚರಿಸಿದರೆ ಧೂಳು ಹಾರುತ್ತಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಜೀವ ಭಯ ಮೂಡಿಸುತ್ತಿದೆ.

ಗುಂಡಿಗೆ ಸಿಮೆಂಟ್, ಜೆಲ್ಲಿ ಹಾಕಿದ್ದಾರೆ. ವಾಹನಗಳು ಹೋದಾಗ ಧೂಳು ಹಾರುತ್ತಿದೆ. ಈ ವಾಹನಗಳ ಹಿಂದೆ ಬೈಕಿನಲ್ಲಿ ಹೋಗುವಾಗ ಕಣ್ಣು ಬಿಡಲು ಆಗುವುದಿಲ್ಲ. ಇದಕ್ಕಿಂತಲು ಗುಂಡಿ ಇದ್ದಾಗಲೆ ಚನ್ನಾಗಿತ್ತು.
- ಪ್ರಶಾಂತ್, ಸ್ಥಳೀಯ
![]()
ಗುಂಡಿಗಳನ್ನು ಶಾಶ್ವತವಾಗಿ ಮುಚ್ಚುವತ್ತ ಅಧಿಕಾರಿಗಳು ಗಮನ ವಹಿಸಬೇಕು. ಈ ತಾತ್ಕಾಲಿಕ ಪರಿಹಾರ ವಾಹನ ಸವಾರರ ಜೀವಕ್ಕೆ ಕುತ್ತು ತರುವಂತಿದೆ.


ಇದನ್ನೂ ಓದಿ » ಆಗುಂಬೆ ಘಾಟಿ, ಕಾರ್ಯಾಚರಣೆ ಪೂರ್ಣ, ಈಗ ವಾಹನಗಳು ಓಡಾಡಬಹುದಾ?

road repair, potholes, road safety, traffic, commuters, local news, infrastructure, Karnataka, Shivamogga,
LATEST NEWS
- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

About The Editor
ನಿತಿನ್ ಆರ್.ಕೈದೊಟ್ಲು















