ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ ಅಂಬಾರಿ (Ambari) ಹೊರಲು ಸಾಗರ ಆನೆ ಸಜ್ಜಾಗಿದೆ. ನಾಡ ದೇವಿಯ ಬೆಳ್ಳಿ ಮಂಟಪ ಹೊತ್ತು ಸಾಗರ ಆನೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದ್ದಾನೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ನಾಡ ದೇವಿ ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿ ಮತ್ತು ಮಂಟಪ 450 ಕೆ.ಜಿ ಇದೆ. ಇನ್ನು ಆನೆಗೆ ಹಾನಿ ಆಗದಂತೆ ಮತ್ತು ಅಂಬಾರಿ ಜಾರದಂತೆ ಇರಿಸಲು ವಿಶೇಷವಾದ ಬೆಡ್ ಹಾಕಲಾಗುತ್ತದೆ. ಅದರ ಒಟ್ಟು ತೂಕ ಸುಮಾರು 200 ಕೆ.ಜಿ. ಶಿವಮೊಗ್ಗದ ಜಂಬೂ ಸವಾರಿಯಲ್ಲಿ ಸಾಗರ ಆನೆ ಸುಮಾರು 650 ಕೆ.ಜಿ ತೂಕವನ್ನು ಹೊತ್ತು ಇವತ್ತು ಮೆರವಣಿಗೆ ಮಾಡಲಿದ್ದಾನೆ.
ಆರನೆ ಬಾರಿ ಅಂಬಾರಿ ಹೊರಲಿದ್ದಾನೆ
ಇನ್ನು, ಜಂಬೂ ಸವಾರಿ ಸಿದ್ಧತೆ ಕುರಿತು ಮಾಹಿತಿ ನೀಡಿರುವ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನ ಪಟಗಾರ, ‘ಸಾಗರ ಆನೆ ಈವರೆಗೂ 15 ಬಾರಿ ಶಿವಮೊಗ್ಗ ದಸರಾದಲ್ಲಿ ಭಾಗವಹಿಸಿದೆ. ಐದು ಬಾರಿ ಅಂಬಾರಿ ಹೊತ್ತಿದೆ. ಈಗ ಆರನೇ ಬಾರಿ ಅಂಬಾರಿ ಹೊರಲು ಸಿದ್ದವಾಗಿದೆ. ಆನೆಗಳಿಗೆ ಸ್ನಾನ ಮಾಡಿಸಿ, ಆಹಾರ ನೀಡಿ ಸಿಂಗಾರ ಮಾಡಲಾಗುತ್ತಿದೆ. ಒಂದು ವಾರ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಿದ್ದೇವೆ. ಎಲ್ಲ ಆನೆಗಳು ಆರೋಗ್ಯವಾಗಿವೆ’ಎಂದು ತಿಳಿಸಿದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಜಂಬೂ ಸವಾರಿ, ಆನೆಗಳು ರೆಡಿ, ಅಂಬಾರಿ ಮೆರವಣಿಗೆಗೆ ಹೇಗಿದೆ ತಯಾರಿ?
Ambari
LATEST NEWS
- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

- ಶಿವಮೊಗ್ಗ ಸಿಟಿಯ ಹಲವೆಡೆ ಜನವರಿ 29, 30ರಂದ ಅರ್ಧ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗದಲ್ಲಿ ವಿದ್ಯಾರ್ಥಿಗಳೇ ಟ್ರಾಫಿಕ್ ಪೊಲೀಸರಾದರು, ಸಂಚಾರ ನಿಯಂತ್ರಿಸಿದರು, ಕಾರಣವೇನು?

- ಕರ್ನಾಟಕ ಸಂಘದಿಂದ ಪುಸ್ತಕಗಳಿಗೆ ಬಹುಮಾನ, ಕೃತಿಗಳಿಗೆ ಆಹ್ವಾನ, ಇಲ್ಲಿದೆ ಕಂಪ್ಲೀಟ್ ವಿವರ

- ಮಂಡಿ, ಕಾಲು ನೋವು, ಬಾಣಂತಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





