ATNC ಕಾಲೇಜಿನಲ್ಲಿ ನಾಯಕತ್ವ ತರಬೇತಿ, ವಿದ್ಯಾರ್ಥಿಗಳಿಗೆ ಯಾರೆಲ್ಲ ಏನೆಲ್ಲ ಸಲಹೆ ನೀಡಿದರು? ಇಲ್ಲಿದೆ ಪಾಯಿಂಟ್ಸ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ನಾಯಕತ್ವ ತರಬೇತಿ (Leadership Training) ಕಾರ್ಯಾಗಾರದಲ್ಲಿ ‘ನಾಯಕತ್ವ ಕೌಶಲ್ಯಗಳು : ನಾಯಕ/ಕಿ ಎಂದರೆ ಯಾರು?’ ವಿಷಯದ ಕುರಿತು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ವಿಶೇಷ ಉಪನ್ಯಾಸ ನೀಡಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ನಾರಾಯಣ ರಾವ್‌ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

Point 1 F1F1F1ನಮಗೆ ನಾವೇ ನಿಜವಾದ ನಾಯಕರು. ರಾಜಕೀಯ ರಂಗದಲ್ಲಿ ಪ್ರವೇಶ ಮಾಡಿ ಜನಪ್ರತಿನಿಧಿ ಆದವರು ಮಾತ್ರ ನಾಯಕರಲ್ಲ, ಕ್ರೀಡೆ, ಚಲನಚಿತ್ರ, ಕುಟುಂಬ ಎಲ್ಲಾ ಕಡೆಗಳಲ್ಲಿ ನಾಯಕರಿದ್ದಾರೆ‌.

Point 2 F1F1F1ಸಮಾಜದ ನಾಯಕನಾಗಲು ಉತ್ತಮ ಕೌಶಲ್ಯತೆ ಹಾಗೂ ಪ್ರಬುದ್ಧತೆ ಬೇಕು. ಸಂಸ್ಕಾರ ಅತಿ ಮುಖ್ಯ. ಎಲ್ಲಿ ಒಳ್ಳೆಯ ಸಂಸಾರವಿದೆ, ಅಲ್ಲಿ ಒಳ್ಳೆಯ ಸಂಸ್ಕಾರವಿರುತ್ತದೆ. ಸಂಸ್ಕಾರದ ತಳಹದಿ ಇರುವುದು ಕುಟುಂಬದಲ್ಲಿ, ನಂತರ ಸಿಗುವುದು ಶಿಕ್ಷಣ ಮತ್ತು ಅನುಭವ ಆಧಾರಿತ ಸಂಸ್ಕಾರ.

Point 3 F1F1F1ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ಪಾರದರ್ಶಕತೆ, ಸಮಯ ಪಾಲನೆ, ಪ್ರಬುದ್ಧ ಮಾತುಗಾರಿಕೆಯ ಜೊತೆಯಲ್ಲಿ ಸಹನೆ ಮತ್ತು ಅಧ್ಯಯನಶೀಲತೆ ಉತ್ತಮ ನಾಯಕತ್ವಕ್ಕೆ ಅತಿ ಮುಖ್ಯ.

Point 4 F1F1F1ನಾಯಕತ್ವ ಎಂದರೆ ಬದ್ಧತೆಯ ಸಂಕೇತ. ಅಹಂಕಾರ, ಹಣ ದಾಹ, ಸ್ವಹಿತಾಸಕ್ತಿ, ಸ್ವಾರ್ಥ ಪರವಾದ ನಡೆ ನಾಯಕತ್ವಕ್ಕೆ ಶೋಭೆ ತರುವುದಿಲ್ಲ. ವಿರೋಧಿಗಳನ್ನು ಅವಹೇಳನ ಮಾಡುವ ಗುಣ ನಾಯಕನಿಗೆ ಇರಬಾರದು. ಮನುಷ್ಯನಲ್ಲಿ ಅತಿ ಭಾರವಾದ ವಸ್ತುವೆಂದರೆ ಅದು ಅಹಂಕಾರ. ನಾಯಕ ಹಿಂಬಾಲಕರನ್ನು ಸೃಷ್ಟಿಸಿದೆ ನಾಯಕರನ್ನು ರೂಪಿಸುವ ಶಕ್ತಿ ಇರಬೇಕು.

Point 5 F1F1F1ಇನ್ನೊಬ್ಬರ ಕೌಶಲ್ಯತೆ ಸಾಮರ್ಥ್ಯಗಳನ್ನು ಗುರುತಿಸುವವರು ನಿಜವಾದ ನಾಯಕ. ನಾಯಕ ಸುದ್ದಿಯಲ್ಲಿರಬೇಕು ವಿನಃ ಸುದ್ದಿಯಾಗಲು ನಾಯಕರಾಗಬಾರದು. ಸೋಲಿನ ಜವಾಬ್ದಾರಿಯನ್ನು ತಾನು ವಹಿಸಿಕೊಂಡು, ಗೆಲುವನ್ನು ಎಲ್ಲರಿಗೂ ಹಂಚುವ ಸಾಮರ್ಥ್ಯ ಬೇಕು.

ಸೇವೆ ಎನ್ನುವುದು ಒಂದು ದಿನಕ್ಕೆ ಸೀಮಿತವಾದ ಪರಿಕಲ್ಪನೆಯಲ್ಲ. ಗಾಂಧೀಜಿಯವರು ಹೇಳುವ ಹಾಗೆ, ನಮ್ಮ ಜೀವನದಲ್ಲಿ ಸಾಮಾಜಿಕ ಬದಲಾವಣೆಗೆ ನಿರಂತರ ಶ್ರಮಿಸಿದಾಗ ಮಾತ್ರ ನಿಜವಾದ ಸೇವಾ ಮನೋಭಾವ ಸಾಧ್ಯವಾಗುತ್ತದೆ.‌

  • ಎಸ್.ಎನ್.ನಾಗರಾಜ, ಎನ್ಇಎಸ್ ಕಾರ್ಯದರ್ಶಿ

RED-LINE-

ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯಕ್ರಮಾಧಿಕಾರಿ ಮಂಜುನಾಥ. ಎನ್, ಸ್ವಯಂ ಸೇವಕರಾದ ಪ್ರಜ್ವಲ್, ಸಿಂಚನ, ಪ್ರಿಯಾಂಕಾ, ಇಂದ್ರಸೇನಾ, ಹೇಮಂತ್, ರಶ್ಮಿತ, ಅದಿತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leadership training at ATNCC

Leadership training at ATNCC

Leadership Training

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment