ನೀರಿನ ತೊಟ್ಟಿಯಲ್ಲಿ ಕಾಡು ಕೋಣದ ಮೃತದೇಹ ಪತ್ತೆ

ತೀರ್ಥಹಳ್ಳಿ: ತೋಟದ ಮನೆಯೊಂದರ ಸಮೀಪ ನೀರಿನ ತೊಟ್ಟಿಗೆ ಬಿದ್ದು ಕಾಡುಕೋಣ (Bison) ಮೃತಪಟ್ಟಿದೆ. ಶನಿವಾರ ಪ್ರಕರಣ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತೀರ್ಥಹಳ್ಳಿ ತಾಲೂಕು ಉಂಟೂರುಕಟ್ಟೆ ಕೈಮರ ಸಮೀಪದ ದಂಡಿನಕುಡಿಗೆಯಲ್ಲಿ ಎರಡು ದಿನದ ಹಿಂದೆ ಕಾಡುಕೋಣ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ. ರವಿರಾಜ ಹೆಬ್ಬಾರ್ ಎಂಬ ರೈತರ ದಂಡಿನಕುಡಿಗೆ ತೋಟದ ಮನೆ ಸಮೀಪದಲ್ಲಿರುವ ನೀರಿನ ತೊಟ್ಟಿಯಲ್ಲಿ ಘಟನೆ ಸಂಭವಿಸಿದೆ. ಶನಿವಾರ ವಿಷಯ ಗೊತ್ತಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕೋಣದ ಶವ ಪರೀಕ್ಷೆ ನಂತರ ಅದನ್ನು ಮಣ್ಣು ಮಾಡಿದರು.

ಇದನ್ನೂ ಓದಿ » ಪೊಲೀಸ್‌ ಕಂಡು ಎಸ್ಕೇಪ್‌ ಆಗಲು ಯತ್ನ, ಹಿಡಿದು ವಿಚಾರಿಸಿದಾಗ ಹೊರಬಿತ್ತು ಸಾಲು ಸಾಲು ಕೇಸ್‌ಗಳ ವಿಷಯ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment