ಶಿವಮೊಗ್ಗ: ಸಂಚಾರ ದಟ್ಟಣೆ ನಿಯಂತ್ರಿಸಲು ಶಿವಮೊಗ್ಗ ನಗರದ ವಿವಿಧೆಡೆ ವಾಹನ ಪಾರ್ಕಿಂಗ್‌ಗೆ ಅವಕಾಶ ಮತ್ತು ನಿಷೇಧ (No Parking) ಮಾಡಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ದ್ವಿಚಕ್ರ ವಾಹನಗಳ ನಿಲುಗಡೆ
ಬಿ.ಹೆಚ್.ರಸ್ತೆಯ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ ಕುಚಲಕ್ಕಿ ಕೇರಿ ಎದುರಿನಿಂದ ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್.
ಸಂಗಮ್ ಟೈಲರ್ ಶಾಪ್‌ನಿಂದ ಡಯಟ್ ಕಾಲೇಜು ಕ್ರಾಸ್ (ಸಾವರ್ಕರ್ ನಗರ ಕ್ರಾಸ್‌ವರೆಗೆ) ಬಲ ಬದಿಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್
ನಾಲ್ಕು ಚಕ್ರದ ವಾಹನ ಪಾರ್ಕಿಂಗ್ ನಿಷೇಧ
ಅಮೀರ್ ಅಹಮದ್ ಸರ್ಕಲ್ ಸಮೀಪದ ವೆಂಕಟೇಶ್ವರ ಸ್ವೀಟ್ ಹೌಸ್ ಮುಂಭಾಗದಿಂದ ಕರ್ನಾಟಕ ಸಂಘ ಸರ್ಕಲ್‌ವರೆಗೆ ಎಡ ಮತ್ತು ಬಲ ಬದಿಯಲ್ಲಿ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ನಿಷೇಧ.

ಶಿವಪ್ಪನಾಯಕ ಸರ್ಕಲ್‌ನಿಂದ ಗಾಂಧಿ ಬಜಾರ್ 2ನೇ ತಿರುವಿನವರೆಗೆ ರಸ್ತೆಯ ಎರಡೂ ಬದಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ನಿಲುಗಡೆ ನಿಷೇಧ.
ನೆಹರು ರಸ್ತೆಯಲ್ಲಿ ಗೋಪಿ ವೃತ್ತದಿಂದ ಅಮೀರ್ ಅಹಮದ್ ಸರ್ಕಲ್‌ವರೆಗೆ ವಾಹನಗಳ ಪಾರ್ಕಿಂಗ್ ನಿಷೇಧ. ಸ್ಮಾರ್ಟ್ ಸಿಟಿ ವತಿಯಿಂದ ವಾಹನಗಳ ಪಾರ್ಕಿಂಗ್‌ಗಾಗಿ ಅಭಿವೃದ್ಧಿಪಡಿಸಿರುವ ಕನ್ಸರ್‌ವೆನ್ಸಿ ಪಾರ್ಕಿಂಗ್ ವ್ಯವಸ್ಥೆ ಜಾರಿಯಾದ ನಂತರ ಈ ನಿಷೇಧ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಕಾರುಗಳು ಎಲ್ಲಿ ನಿಲ್ಲಿಸಬೇಕು?
ಆ.1ರಿಂದ ಬಹು ಮಹಡಿ ಪಾರ್ಕಿಂಗ್ ಕಟ್ಟಡ ಕಾರ್ಯಾರಂಭ ಮಾಡಿದೆ. ಇಲ್ಲಿ ಕಾರುಗಳನ್ನು ನಿಲ್ಲಿಸಲು ಸುಸಜ್ಜಿತ ಮತ್ತು ಸುರಕ್ಷಿತ ವ್ಯವಸ್ಥೆ ಇದೆ. ಇನ್ಮುಂದೆ ಕಾರುಗಳನ್ನು ಇದೇ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ಮಾಡಬೇಕು. ಇದರಿಂದ ಬಿ.ಹೆಚ್.ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ.
ಇದನ್ನೂ ಓದಿ » ಶಿವಮೊಗ್ಗದ ಈ ರಸ್ತೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಭಾರಿ ವಾಹನ ಸಂಚಾರ ನಿಷೇಧ
No Parking
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





