ಶಿವಮೊಗ್ಗ: ಗೋಪಾಳದ ಪ್ರೆಸ್ ಕಾಲೋನಿಯಲ್ಲಿ ಮರ ಕತ್ತರಿಸುವ ಕಾಮಗಾರಿ ವೇಳೆ ಅವಘಡ ಉಂಟಾಗಿ ಕಾರ್ಮಿಕನ ಮರ್ಮಾಂಗಕ್ಕೆ ಗಂಭೀರ ಗಾಯವಾಗಿದೆ. ಘಟನೆ ಸಂಬಂಧ ಮೇಸ್ತ್ರಿ ಮತ್ತು ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಕಾರ್ಮಿಕ ಹನುಮನಂತಪ್ಪ ಎಂಬುವವರು ಗಾಯಗೊಂಡಿದ್ದಾರೆ. ಗೋಪಾಳದಲ್ಲಿರುವ ಸುರೇಶ್ ಎಂಬುವವರ ಮನೆ ಬಳಿ ಮರದ ಬುಡವನ್ನು ಗ್ರಾನೈಟ್ ಕಟ್ ಮಾಡುವ ಮಿಷನ್‌ನಿಂದ ಕತ್ತರಿಸುವ ಕೆಲಸ ಮಾಡಿಸಲಾಯಿತು. ಮಿಷನ್ ನಿಯಂತ್ರಣ ತಪ್ಪಿ ಹಿಂದಕ್ಕೆ ಬಂದು ಹನುಮಂತಪ್ಪ ಅವರ ಮರ್ಮಾಂಗಕ್ಕೆ ಬಡಿದಿದೆ ಎಂದು ಆರೋಪಿಸಲಾಗಿದೆ. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ಮೇಸ್ತ್ರಿ ಸುರೇಶ್, ಮನೆ ಮಾಲೀಕ ರಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ » ತಾಯಿ ಜೊತೆ ಬೈಕ್‌ನಲ್ಲಿ ತೆರಳುವಾಗ ಜೋರಾಗಿ ಕೂಗಿದ ಬಾಲಕಿ, ನಿಲ್ಲಿಸಿ ನೋಡಿದಾಗ ಕಾದಿತ್ತು ಆಘಾತ
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






