ಶಿವಮೊಗ್ಗ LIVE
SHIMOGA: ಸೀತಾ ಕಲ್ಯಾಣ ಶತಮಾನೋತ್ಸವ ಅಂಗವಾಗಿ ಶಿವಮೊಗ್ಗ ತುಂಗಾ ನದಿಯಲ್ಲಿ ಶ್ರೀ ಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ (Teppotsava) ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.
ತೆಪ್ಪೋತ್ಸವಕ್ಕು ಮೊದಲು ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ನಡೆಸಲಾಯಿತು. ಪಟಾಕಿಗಳನ್ನು ಸಿಡಿಸುತ್ತ, ರಸ್ತೆಯ ಉದ್ದಕ್ಕು ಕರ್ಪೂರ ಹಚ್ಚಲಾಯಿತು.
ವೈಭವದ ತೆಪ್ಪೋತ್ಸವ ಕಣ್ತುಂಬಿಕೊಂಡ ಜನ
ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗಾ ನದಿಯಲ್ಲಿ ವೈಭವದ ತೆಪ್ಪೋತ್ಸವ ನೆರವೇರಿತು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ದೇವರ ಮೂರ್ತಿಗಳನ್ನು ತೆಪ್ಪದಲ್ಲಿ ಇರಿಸಿ, ತುಂಗಾ ನದಿಯಲ್ಲಿ ಉತ್ಸವ ನೆರವೇರಿಸಲಾಯಿತು.
ಇದನ್ನೂ ಓದಿ » ಬಾಪೂಜಿನಗರದಲ್ಲಿ ಬನಶಂಕರಿ ದೇವಿಯ ವೈಭವದ ರಥೋತ್ಸವ, ಏನೇನೆಲ್ಲ ಪೂಜೆ ಇತ್ತು?
ತೆಪ್ಪೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ತೆಪ್ಪೋತ್ಸವದ ಸಂದರ್ಭ ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಇದನ್ನು ಕಣ್ತುಂಬಿಕೊಂಡು ಜನರು ಖುಷಿ ಪಟ್ಟರು. ಇನ್ನು, ಹೊಳೆಯಲ್ಲಿ ದೀಪಗಳನ್ನು ತೇಲಿ ಬಿಡಲಾಯಿತು. ಮತ್ತೊಂದೆಡೆ ತೆಪ್ಪೋತ್ಸವದ ಹಿನ್ನೆಲೆ ಈ ಬಾರಿ ಕಣ್ಮನ ಸೆಳೆಯುವಂತೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.












ಇದನ್ನೂ ಓದಿ » ಶಿವಮೊಗ್ಗದಲ್ಲಿ ಟ್ರಾಫಿಕ್ ಫೈನ್ ಎಷ್ಟಿದೆ ಅಂತಾ ನೋಡಲು ಹೋಗಿ ₹11.25 ಲಕ್ಷ ಕಳೆದುಕೊಂಡ ವ್ಯಕ್ತಿ
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






