ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಪೆರೋಲ್ ರಜೆ ಮುಗಿಸಿ ಕಾರಾಗೃಹಕ್ಕೆ ಮರಳುತ್ತಿದ್ದ ಸಜಾ ಬಂದಿಯೊಬ್ಬ (convict) ಕೇಂದ್ರ ಕಾರಾಗೃಹದೊಳಗೆ ಮದ್ಯ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕೈದಿ ಮೋಹನ್ ಕುಮಾರ ಎಂಬಾತ ಪೆರೋಲ್ ಮುಗಿಸಿ ಜೈಲಿಗೆ ವಾಪಸ್ಸಾಗುವಾಗ ಮುಖ್ಯದ್ವಾರದ ತಪಾಸಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ – ಶಿವಮೊಗ್ಗದ ಲಾಡ್ಜ್‌ಗಳಲ್ಲಿ ಪೊಲೀಸರಿಂದ ದಿಢೀರ್ ತಪಾಸಣೆ, ಏನೆಲ್ಲ ಪರಿಶೀಲಿಸಿದರು?
ಜೈಲಿನ ಮುಖ್ಯದ್ವಾರದ ಆಕ್ಸೆಸ್ ಕಂಟ್ರೋಲ್‌ನಲ್ಲಿ ಕರ್ತವ್ಯದಲ್ಲಿದ್ದ KSISF ಸಿಬ್ಬಂದಿ, ಕೈದಿ ಮೋಹನ್ ಕುಮಾರನನ್ನು ತಪಾಸಣೆ ನಡೆಸಿದರು. ಆತ ಮದ್ಯಪಾನ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತಕ್ಷಣ ಆತನ ಬ್ಯಾಗ್ ಪರಿಶೀಲಿಸಿದಾಗ, 90 ಎಂಎಲ್‌ನ ಒಂದು ಮದ್ಯದ ಪೌಚ್ ಹಾಗೂ 200 ಎಂಎಲ್‌ನ ಜಿರಾ ಮಸಾಲಾ ಬಾಟಲಿಯನ್ನು ಪತ್ತೆಯಾಗಿದೆ.

ಕೈದಿಯು ಕಾರಾಗೃಹದ ನಿಯಮ ಉಲ್ಲಂಘಿಸಿ ನಿಷೇಧಿತ ವಸ್ತು ಒಳಕ್ಕೆ ಸಾಗಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ದೂರು ನೀಡಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

- ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

- ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು















