ಒಂದು ಮೆಸೇಜ್‌, ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್‌ ಖಾತೆಯಿಂದ ₹6.50 ಲಕ್ಷ ಮಾಯ, ಏನಿತ್ತು ಮೆಸೇಜ್‌ನಲ್ಲಿ?

ಶಿವಮೊಗ್ಗ: ಬ್ಯಾಂಕ್ ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಅಪರಿಚಿತರು ಕಳುಹಿಸಿದ ಲಿಂಕ್ ಹಾಗೂ ಎಪಿಕೆ ಫೈಲ್ ಡೌನ್‌ಲೋಡ್ (fake SBI KYC) ಮಾಡಿದ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ ₹6.50 ಲಕ್ಷ ಕಳೆದುಕೊಂಡಿದ್ದಾರೆ.

ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ (ಹೆಸರು ಗೌಪ್ಯ) ಎಸ್‌ಬಿಐ ಖಾತೆ ಅಪ್‌ಡೇಟ್ ಮಾಡುವಂತೆ ಮೊಬೈಲ್‌ಗೆ ಮೆಸೇಜ್‌ ಬಂದಿತ್ತು. ಅದನ್ನು ನಂಬಿದ ಅವರು ಫೈಲ್ ಡೌನ್‌ಲೋಡ್ ಮಾಡಿ ಮಾಹಿತಿ ಭರ್ತಿ ಮಾಡಿದ್ದರು. ಕೆಲವೇ ಹೊತ್ತಿಗೆ ಹಂತ ಹಂತವಾಗಿ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ.

SMS-Fraud-Shimoga-CEN-Police-Station.

ಇದನ್ನೂ ಓದಿ – ಸಂಸದ ರಾಘವೇಂದ್ರ ಕಾರಿಗೆ ಮತ್ತೊಂದು ಕಾರು ಡಿಕ್ಕಿ, ಆಗಿದ್ದೇನು?

ಸಂತ್ರಸ್ತರು ತಮ್ಮ ಎಸ್‌ಬಿಐ ಉಳಿತಾಯ ಖಾತೆಯಿಂದ ಮೊದಲು ₹50,000, ನಂತರ ಎರಡು ಬಾರಿ ತಲಾ 2 ಲಕ್ಷ ಹಾಗೂ ಮತ್ತೊಮ್ಮೆ 1 ಲಕ್ಷ ಸೇರಿದಂತೆ ಒಟ್ಟು ₹6,50,000 ಕಡಿತವಾಗಿದೆ. ಮೊಬೈಲ್ ಮೆಸೇಜ್‌ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಸಿಇಎನ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Total-Readers-of-Shivamogga-Live
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : January 21, 2026 at 7:09 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 21, 2026

Leave a Comment