ಹೊಂಬುಜದಲ್ಲಿ ವಿಶೇಷ ಪೂಜೆ, ದಾಖಲೆ ಸೇರಿತು ಜಿನ ನಾಮಸ್ಮರಣೆ, ಏನಿದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರಿಪ್ಪನ್‌ಪೇಟೆ: ಹೊಂಬುಜ ಕ್ಷೇತ್ರದಲ್ಲಿ ವಿಶ್ವ ಶಾಂತಿ ಯುವ ಸೇವಾ ಸಮಿತಿಯಿಂದ ಜಿನ ಸಹಸ್ರ ನಾಮಾರ್ಚನೆಯ (Jina Namasmarane) ಪೂಜೆ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು. ಹೊಂಬುಜ ಜೈನ ಮಠಾಧೀಶರಾದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶಾಸ್ತ್ರದನ್ವಯ ಪೂಜೆಗಳನ್ನು ಸಲ್ಲಿಸಲಾಯಿತು.

ಇದನ್ನೂ ಓದಿ –  ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.com/news/shivamogga-city/kote-temple-brahmotsava-in-shivamogga/" target="_blank" rel="noopener">ಕೋಟೆ ದೇಗುಲ, ವೈಭವದ ಬ್ರಹ್ಮರಥೋತ್ಸವ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಬಳಿಕ ಆಶೀರ್ವಚನ ನೀಡಿದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಜಿನನಾಮ ಸ್ತುತಿಸುವುದೆಂದರೆ ಕರ್ಮಕ್ಷಯ ಮಾಡಿದಂತಾಗುವುದು. ಆತೋನ್ನತಿಯ ನೈಜ ಸನ್ಮಾರ್ಗವು ಜಿನ ಸಹಸ್ರನಾಮ ಅರ್ಚನೆಯ ಮೂಲಕ ದೊರೆಯಲಿದೆ ಎಂದರು.

Special-Pooja-at-hombuja-jain-mutt

ಪದ್ಮಾವತಿ ಮಹಿಳಾ ಮಂಡಲ ಸದಸ್ಯರು, ಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಭಕ್ತರು ಹಾಜರಿದ್ದರು. ವಿಶ್ವ ಸೇವಾ ಯುವ ಸಮಿತಿ ಬೆಂಗಳೂರು ಹಾಗೂ ವಿವಿಧ ಜೈನ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಏಕಕಾಲದಲ್ಲಿ ನಡೆದ 1.11ಕೋಟಿ ಜಿನ ನಾಮಸ್ಮರಣೆ ದಾಖಲೆಗೆ ಸೇರ್ಪಡೆಯಾಯಿತು.

Shivamogga Live reached 2.8 million views in January-2026 - Editor : Nitin Kaidotlu

Leave a Comment