ಶಿವಮೊಗ್ಗದಲ್ಲಿ ಕೆಎಎಸ್‌ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಶಿವಮೊಗ್ಗ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ (KAS officer) ಸಿದ್ದಲಿಂಗ ರೆಡ್ಡಿ ಮತ್ತು ಗ್ರಾಮ ಸಹಾಯಕ ರಾಜೇಶ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ.

Shivamogga-Live-Number-1-Website

ಏನಿದು ಪ್ರಕರಣ?

ಓತಿಘಟ್ಟ ಗ್ರಾಮದ ಕೇಶವಮೂರ್ತಿ ಎಂಬುವವರು ತಮ್ಮ ಎರಿಟಿಗಾ ಕಾರನ್ನು ಕಳೆದ ಎರಡು ವರ್ಷಗಳಿಂದ ಶಿವಮೊಗ್ಗ ವಿಶೇಷ ಭೂ ಸ್ವಾಧೀನಾಧಿಕಾರಿ (ಎನ್.ಹೆಚ್-206) ಕಛೇರಿಗೆ ಬಾಡಿಗೆಗೆ ನೀಡಿದ್ದರು. 2025ರ ನವೆಂಬರ್ ತಿಂಗಳ ಬಾಡಿಗೆ ಹಣದ ಚೆಕ್ ನೀಡಲು ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ದಲಿಂಗ ರೆಡ್ಡಿ ಅವರು ₹40,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕೇಶವಮೂರ್ತಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shimoga-Lokayukta-police-arrest-KAS-Officer

ನೆಹರು ಸ್ಟೇಡಿಯಂ ಬಳಿ ದಾಳಿ

ಫೆಬ್ರವರಿ 14ರ ಸಂಜೆ ಸಿದ್ದಲಿಂಗ ರೆಡ್ಡಿ ಅವರ ಸೂಚನೆಯಂತೆ ಹೊಳಲೂರು ನಾಡಕಛೇರಿಯ ಗ್ರಾಮ ಸಹಾಯಕ ರಾಜೇಶ್, ಶಿವಮೊಗ್ಗದ ನೆಹರೂ ಸ್ಟೇಡಿಯಂ ಬಳಿ ಕೇಶವಮೂರ್ತಿ ಅವರಿಂದ ₹40,000 ಹಣ ಪಡೆಯುತ್ತಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದೊಂದಿಗೆ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

loka

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಚಂದ್ರಶೇಖರ್.ಬಿ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್ ನಿರೀಕ್ಷಕರಾದ ಕೆ.ಪಿ.ರುದ್ರೇಶ್, ಗುರುರಾಜ್ ಮೈಲಾರ್, ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿ ಯೋಗೇಶ್.ಜಿ.ಸಿ, ಟೀಕಪ್ಪ, ಸುರೇಂದ್ರ.ಹೆಚ್.ಸಿ, ಬಿ.ಟಿ.ಚನ್ನೇಶ್, ದೇವರಾಜ್, ಅರುಣ್ ಕುಮಾರ್.ಯು.ಬಿ, ಪ್ರಕಾಶ್ ಬಾರಿಮರದ್, ಆದರ್ಶ್, ಚಂದ್ರಿಬಾಯಿ, ಪ್ರದೀಪ್, ಗೋಪಿ, ಚೇತನ್ ಮತ್ತು ಆನಂದ್ ಪಾಲ್ಗೊಂಡಿದ್ದರು.

ಇದನ್ನೂ ಓದಿ – ಬಿಳಕಿಯಲ್ಲಿ ಅಂಗನವಾಡಿ ಸಹಾಯಕಿ ಮೃತದೇಹ ಪತ್ತೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 14, 2026

ಭದ್ರಾವತಿಯಲ್ಲಿ ತವರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

ಭದ್ರಾವತಿಯಲ್ಲಿ ತವರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

ಸೂಳೆಬೈಲಿನಲ್ಲಿ ಶೆಡ್‌ ಮೇಲೆ ತುಂಗಾ ನಗರ ಠಾಣೆ ಪೊಲೀಸರ ದಾಳಿ, ದಾಖಲಾಯ್ತು ಕೇಸ್‌

ಸೂಳೆಬೈಲಿನಲ್ಲಿ ಶೆಡ್‌ ಮೇಲೆ ತುಂಗಾ ನಗರ ಠಾಣೆ ಪೊಲೀಸರ ದಾಳಿ, ದಾಖಲಾಯ್ತು ಕೇಸ್‌

ಹಿಟ್ಟೂರು ಸರ್ಕಲ್‌ನಲ್ಲಿ ಬೈಕುಗಳು ಡಿಕ್ಕಿ, ಹೇಗಾಯ್ತು ಘಟನೆ?

ಹಿಟ್ಟೂರು ಸರ್ಕಲ್‌ನಲ್ಲಿ ಬೈಕುಗಳು ಡಿಕ್ಕಿ, ಹೇಗಾಯ್ತು ಘಟನೆ?

ಕೆನರಾ ಬ್ಯಾಂಕ್‌ ವಿರುದ್ಧ ಹೋರಾಡಿ ಗೆದ್ದ ಹೊಸನಗರದ ಗ್ರಾಹಕ, ಏನಿದು ಕೇಸ್‌?

ಕೆನರಾ ಬ್ಯಾಂಕ್‌ ವಿರುದ್ಧ ಹೋರಾಡಿ ಗೆದ್ದ ಹೊಸನಗರದ ಗ್ರಾಹಕ, ಏನಿದು ಕೇಸ್‌?

ಶಿವಮೊಗ್ಗದ 6 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿ ಶೋಭಾ ಬಳಿ ಏನೇನೆಲ್ಲ ಸಿಕ್ತು? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದ 6 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿ ಶೋಭಾ ಬಳಿ ಏನೇನೆಲ್ಲ ಸಿಕ್ತು? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ ಸಿಟಿಯಲ್ಲಿ ಅದ್ಧೂರಿ ಶೋಭಾಯಾತ್ರೆ, ಏನೇನೆಲ್ಲ ಇತ್ತು? ಇಲ್ಲಿವೆ ಫೋಟೊಗಳು

ಶಿವಮೊಗ್ಗ ಸಿಟಿಯಲ್ಲಿ ಅದ್ಧೂರಿ ಶೋಭಾಯಾತ್ರೆ, ಏನೇನೆಲ್ಲ ಇತ್ತು? ಇಲ್ಲಿವೆ ಫೋಟೊಗಳು

ಶಿವಮೊಗ್ಗ ಜಿಲ್ಲಾಧಿಕಾರಿ ದಿಢೀರ್‌ ಭೇಟಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸ್ಟೆಲ್‌ನಲ್ಲಿ ಪರಿಶೀಲನೆ

ಶಿವಮೊಗ್ಗ ಜಿಲ್ಲಾಧಿಕಾರಿ ದಿಢೀರ್‌ ಭೇಟಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸ್ಟೆಲ್‌ನಲ್ಲಿ ಪರಿಶೀಲನೆ

ಆಗುಂಬೆ ಸಮೀಪ ಕಾರು ಡಿಕ್ಕಿ, ವ್ಯಕ್ತಿ ಸ್ಥಳದಲ್ಲೆ ಸಾವು, ಹೇಗಾಯ್ತು ಘಟನೆ?

ಆಗುಂಬೆ ಸಮೀಪ ಕಾರು ಡಿಕ್ಕಿ, ವ್ಯಕ್ತಿ ಸ್ಥಳದಲ್ಲೆ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗದಲ್ಲಿ ಮಹಿಳಾ ನೌಕರರಿಗೆ ಕ್ರೀಡೆ, ಮನರಂಜನಾ ಸ್ಪರ್ಧೆಗಳು, ಯಾವ್ಯಾವ ಸ್ಪರ್ಧೆಗಳಿವೆ?

ಶಿವಮೊಗ್ಗದಲ್ಲಿ ಮಹಿಳಾ ನೌಕರರಿಗೆ ಕ್ರೀಡೆ, ಮನರಂಜನಾ ಸ್ಪರ್ಧೆಗಳು, ಯಾವ್ಯಾವ ಸ್ಪರ್ಧೆಗಳಿವೆ?

ಉದ್ಯೋಗ ಸುದ್ದಿ: ಪಿಯುಸಿ, ಪದವಿ ಆದವರಿಗೆ ಕೆಲಸವಿದೆ, ಏ.9ರಂದು ನೇರ ಸಂದರ್ಶನ, ಎಲ್ಲಿ?

ಉದ್ಯೋಗ ಸುದ್ದಿ: ಪಿಯುಸಿ, ಪದವಿ ಆದವರಿಗೆ ಕೆಲಸವಿದೆ, ಏ.9ರಂದು ನೇರ ಸಂದರ್ಶನ, ಎಲ್ಲಿ?

Leave a Comment