ಚಿರತೆಯನ್ನೇ ಬೆನ್ನಟ್ಟಿದ ನಾಯಿಗಳು, ದಿಂಡದಹಳ್ಳಿ ಗ್ರಾಮಸ್ಥರ ನಿಟ್ಟುಸಿರು, ಆಗಿದ್ದೇನು?

ಶಿಕಾರಿಪುರ: ತಾಲೂಕಿನ ದಿಂಡದಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಗೆ ಸೆರೆಸಿಕ್ಕಿದೆ. ಬೇಟೆಗಾರ ಪ್ರಾಣಿಯಾದ ಚಿರತೆಯನ್ನೇ ಗ್ರಾಮದ ಶ್ವಾನಗಳು (village dogs) ಬೆನ್ನಟ್ಟಿ ಹೊಂಡಕ್ಕೆ ಬೀಳುವಂತೆ ಮಾಡಿವೆ.

ನಾಯಿಗಳಿಗೆ ಹೆದರಿ ಹೊಂಡಕ್ಕೆ ಬಿದ್ದ ಚಿರತೆ

ಸಾಮಾನ್ಯವಾಗಿ ಚಿರತೆಯನ್ನು ಕಂಡರೆ ನಾಯಿಗಳು ದಿಕ್ಕಾಪಾಲಾಗಿ ಓಡುತ್ತವೆ. ಆದರೆ ಇಲ್ಲಿ ದೃಶ್ಯ ಉಲ್ಟಾ ಆಗಿತ್ತು. ನಿತ್ರಾಣಗೊಂಡಿದ್ದ ಚಿರತೆಯನ್ನು ಕಂಡ ಗ್ರಾಮದ ನಾಯಿಗಳು ಗುಂಪುಕಟ್ಟಿ ಅದರ ಮೇಲೆರಗಿವೆ. ನಾಯಿಗಳ ದಾಳಿಗೆ ಹೆದರಿ ಓಡುವ ರಭಸದಲ್ಲಿ ಚಿರತೆಯು ಸಮೀಪದ ಸಣ್ಣ ಹೊಂಡವೊಂದರಲ್ಲಿ ಬಿದ್ದಿದೆ. ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

260226-village-dogs-trap-a-leopard-in-Shikaripuras-Dindadahalli-New.webp

ಕೊನೆಗೆ ಸ್ಥಳಕ್ಕೆ ಆಗಮಿಸಿದ ಅರಿವಳಿಕೆ ತಜ್ಞರ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಹೊಂಡದಲ್ಲಿದ್ದ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ. ಇದರಿಂದ ದಿಂಡದಹಳ್ಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ನಗರದ ಹಲವೆಡೆ ಎರಡು ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 26, 2026 at 11:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 26, 2026

Leave a Comment