ಗೃಹಲಕ್ಷ್ಮಿ ಯೋಜನೆ, ಫಲಾನುಭವಿಗಳು ಮರಣ ಹೊಂದಿದ್ದರೆ ಹೊಸದಾಗಿ ಅರ್ಜಿ ಸಲ್ಲಿಸಲು ಸೌಲಭ್ಯ

ಶಿವಮೊಗ್ಗ: ತಾಲೂಕಿನಲ್ಲಿ ಗೃಹಲಕ್ಷ್ಮಿ (Gruhalakshmi) ಯೋಜನೆ ಫಲಾನುಭವಿಗಳು ಮರಣಹೊಂದಿದ್ದರೆ, ಆ ಮನೆಯ ಮುಂದಿನ ಯಜಮಾನಿಯರು ಹೊಸದಾಗಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಮಧು ಹೆಚ್.ಎಂ ತಿಳಿಸಿದ್ದಾರೆ.

ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯ ಪ್ರಮುಖಾಂಶಗಳು

ಗೃಹಲಕ್ಷ್ಮಿ ಯೋಜನೆ: ತಾಲೂಕಿನಲ್ಲಿ ಜನವರಿವರೆಗೆ 1,07,841 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಮರಣ ಹೊಂದಿದವರ ಖಾತೆಯ ಬದಲಾವಣೆಗಾಗಿ ಸರ್ಕಾರದ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು.

garantee

ಅನ್ನಭಾಗ್ಯ ಯೋಜನೆ: 54,147 ಬಿಪಿಎಲ್ ಕಾರ್ಡ್‌ದಾರರು ಸೌಲಭ್ಯ ಪಡೆಯುತ್ತಿದ್ದಾರೆ. 5 ವರ್ಷದಿಂದ ಇ-ಕೆವೈಸಿ (e-KYC) ಮಾಡಿಸದವರು ಕೂಡಲೇ ಮಾಡಿಸಿಕೊಳ್ಳಬೇಕು. ರದ್ದಾದ ಬಿಪಿಎಲ್ ಕಾರ್ಡ್‌ಗಳನ್ನು ದಾಖಲೆ ನೀಡಿ ಮರು ಪರಿಶೀಲನೆಗೆ ಒಳಪಡಿಸಬಹುದು.

ಯುವನಿಧಿ: 11,499 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಡಿಸೆಂಬರ್ ವರೆಗೆ ₹1.02 ಕೋಟಿ ಧನಸಹಾಯ ನೀಡಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆ, ತಂಪಾದ ಇಳೆ, ಎಲ್ಲೆಲ್ಲಿ ಮಳೆಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಶಕ್ತಿ ಯೋಜನೆ: ತಾಲೂಕಿನಲ್ಲಿ ಮಹಿಳೆಯರು 2.54 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ್ದಾರೆ.

ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರು, ತಾಲೂಕು ಪಂಚಾಯಿತಿ ಇಓ ಪರಮೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 26, 2026 at 11:40 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 26, 2026

Leave a Comment