ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್ ಹತ್ಯೆ ಖಂಡನೀಯ. ಜಾತಿ ಹಾಗೂ ಧರ್ಮವನ್ನು ನೋಡದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಘಟಕದಿಂದ (ABVP protest) ಎಂಆರ್ಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಗಾಂಜಾ ಪದಾರ್ಥಗಳು ಸುಲಭವಾಗಿ ಸರಬರಾಜು ಆಗುತ್ತಿದ್ದು ಈ ಹಿಂಸಾತ್ಮಕ ಕೃತ್ಯಕ್ಕೆ ಅದುವೇ ಕಾರಣ. ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ರಾಜ್ಯದಲ್ಲಿ ಡ್ರಗ್ಸ್ ಜಾಲ ಭೇದಿಸಲು ವಿಫಲವಾಗಿವೆ. ಮಾದಕ ವಸ್ತು ನಿರ್ಮೂಲನೆಗೆ ಪೊಲೀಸರು ಆದ್ಯತೆ ನೀಡಿ, ಸೂಕ್ತ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದ ನಂತರ ಪೋಷಕರು ಹಾಗೂ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಇದ್ದಾರೆ. ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ಬೇಕಾದ ಪೂರಕ ವಾತಾವರಣ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಬಿವಿಪಿ ಪದಾಧಿಕಾರಿಗಳಾದ ಆದಿತ್ಯಶೆಟ್ಟಿ, ನಂದನ್, ರವಿ ಇರೋಜ, ವಿನಯ್, ಅಭಿಷೇಕ್ ಇದ್ದರು.
ಇದನ್ನೂ ಓದಿ – ಸಿಎಂಗೆ ಡಿಸಿಎಂ ಪತ್ರ, ಶಿವಮೊಗ್ಗದ ಇಬ್ಬರ ಹೆಸರು ಪ್ರಸ್ತಾಪ, ಆಕಾಂಕ್ಷಿಗಳಿಗೆ ನಿರಾಸೆ, ಏನಿದೆ ಪತ್ರದಲ್ಲಿ?

LATEST NEWS
- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

- ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್, 1 ಕೆ.ಜಿ ಬಕೆಟ್ ಮೊಸರು ಮಾರುಕಟ್ಟೆಗೆ ಎಂಟ್ರಿ, ಎಷ್ಟಿರುತ್ತೆ ರೇಟ್?

- ‘ಒಂದು ಕೋಟಿ ರುಪಾಯಿ ನೆರವು, ಸರ್ಕಾರಿ ನೌಕರಿ ಕೊಡಬೇಕು’, ಕುರುಬರ ವೇದಿಕೆ ಪಟ್ಟು

- ಸಚಿವ ಮಧು ಬಂಗಾರಪ್ಪ ಜನ್ಮದಿನ, ವಿದ್ಯಾರ್ಥಿಗಳು, ಪೌರ ಕಾರ್ಮಿಕರಿಗೆ ವಿಮಾನಯಾನ

- ವಾಸವಿ ಯುವಜನ ಸಂಘದ ಅಧ್ಯಕ್ಷರಾಗಿ ಶ್ರೀನಾಗ್, ಕನ್ನಿಕಾ ಸಖಿಯರ ಸಂಘದ ಅಧ್ಯಕ್ಷ ಶ್ವೇತಾ ಸಂದೀಪ್

About The Editor
ನಿತಿನ್ ಆರ್.ಕೈದೊಟ್ಲು





