
ಹೊಳೆಹೊನ್ನೂರು: ಸಿದ್ಲೀಪುರ ಗ್ರಾಮದ ಸುಕ್ಷೇತ್ರ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ (Brahma Rathotsava) ಹಾಗೂ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಮುಂಜಾನೆ ಶ್ರೀ ಆಂಜನೇಯಸ್ವಾಮಿ ಮೂರ್ತಿಗೆ ಪುಣ್ಯತೀರ್ಥ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಅರ್ಚನೆ, ಮಂಗಳಾರತಿ, ಮಾಡಲಾಯಿತು.
ಇದನ್ನೂ ಓದಿ – ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ
ನಂತರ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಡೋಲು ಭಜಂತ್ರಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ವಿವಿಧ ವಸ್ತ್ರ, ಪುಷ್ಪಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ನೆರವೇರಿಸಿ ರಥೋತ್ಸವ ನಡೆಸಲಾಯಿತು. ಸಿಂಧೂರ ಉತ್ಸವ, ಪುದುರೆ ಉತ್ಸವ, ಕಳಸಾರೋಹಣ, ಹರಿಸೇವೆ, ಗಯೋತ್ಸವ, ಹೋಮ ನಂತರ ಬ್ರಹ್ಮ ರಥೋತ್ಸವ ನಡೆಯಿತು.

ಅನ್ನ ಪ್ರಸಾದ ವಿನಿಯೋಗ ಮಾಡಲಾಯಿತು. ಮುದ್ರೆ, ಜವಳ ಕಾರ್ಯ ನಡೆಯಿತು. ಹರಕೆ ಹೊತ್ತ ಭಕ್ತರು ತಮ್ಮ ಮಕ್ಕಳನ್ನು ದಿಂಡು ಉರುಳಿಸಿದರು. ಆಂಜನೇಯ ಸೇವಾ ಸಮಿತಿ ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಗಳ ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.








