
ಶಿವಮೊಗ್ಗ: ಬೈಕುಗಳು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಪತ್ರಕರ್ತ (BTV reporter) ಅನಿಲ್ ಕೊನೆಯುಸಿರೆಳೆದಿದ್ದಾರೆ. ಕಳೆದ ರಾತ್ರಿ ವಿನೋಬನಗರದ ಬೆಂಕಿ ನಗರ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು.
ಘಟನೆಯಲ್ಲಿ ಅನಿಲ್ ಪ್ರಜ್ಞಾಹೀನವಾಗಿ ರಸ್ತೆ ಮೇಲೆ ಬಿದ್ದಿದ್ದರು. ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಅನಿಲ್ ಶಿವಮೊಗ್ಗದ ಬಿ.ಟಿವಿ ವರದಿಗಾರರಾಗಿದ್ದರು. ಇದಕ್ಕು ಮೊದಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ಟಿವಿ9 ವಾಹಿನಿಗೆ ಕ್ಯಾಮರಾಮನ್ ಆಗಿದ್ದರು. ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯಲ್ಲಿಯು ಕರ್ತವ್ಯ ನಿರ್ವಹಿಸಿದ್ದರು.








