ಸೊರಬ:ಪಟ್ಟಣದ ಆರಾಧ್ಯ ದೈವ ರಂಗನಾಥ ಸ್ವಾಮಿಯ ನೂತನ ರಥವನ್ನು (chariot) ಸಚಿವ ಮಧು ಬಂಗಾರಪ್ಪ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಪ್ರಮುಖ ವಿಷಯಗಳನ್ನು ತಿಳಿಸಿದರು.
ಸಚಿವ ಮಧು ಬಂಗಾರಪ್ಪ ಏನೇನು ಹೇಳಿದರು?
1 ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನವು ತಾಲೂಕಿಗೆ ಕೀರ್ತಿ ಶಿಖಕರ. ದೇವರ ನೂತನ ರಥ ನಿರ್ಮಾಣಗೊಂಡಿರುವುದರಿಂದ ದಶಕಗಳ ಕನಸು ಈಡೇರಿದೆ. ಈ ಮಹತ್ವದ ಕಾರ್ಯದ ಯಶಸ್ಸಿಗೆ ಸಹಕಾರ ನೀಡಿದ ಪ್ರತಿಯೊಬ್ಬ ದಾನಿಗಳಿಗೆ ಕ್ಷೇತ್ರದ ಪರವಾಗಿ ಕೃತಜ್ಞತೆ.2 ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿರುವ ತಾಲೂಕಿನಲ್ಲಿ ಪುರಾಣ ಪ್ರಸಿದ್ಧ ದೇವಸ್ಥಾನಗಳು ಕ್ಷೇತ್ರದ ಮಹಿಮೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ. ತಾವು ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಪುರೋಹಿತರಾದ ನಾರಾಯಣ ಭಟ್ ಅವರು, ಹೊಸ ರಥ ನಿರ್ಮಾಣ ಮಾಡಲು ಮನವಿ ಮಾಡಿದ್ದರು. ನಮ್ಮ ಸರ್ಕಾರದ ಸಹಕಾರ ಸೇರಿದಂತೆ ಅನೇಕರ ಶ್ರಮದಿಂದ ಇಂದು ಸಮರ್ಪಣೆ ಆಗಿರುವುದು ಸಂತೋಷ.
3 ರಥವನ್ನು ಸುರಕ್ಷಿತವಾಗಿಡಲು ತೇರು ಮನೆ ನಿರ್ಮಾಣಕ್ಕೆ ಈಗಾಗಲೇ ₹10 ಲಕ್ಷ ಮಂಜೂರಾಗಿದೆ. ಅಧಿಕಾರಿಗಳು ₹30 ಲಕ್ಷ ಹೆಚ್ಚುವರಿ ಅನುದಾನದಲ್ಲಿ ಸುಂದರವಾದ ತೇರು ಮನೆ ನಿರ್ಮಿಸಬೇಕು.
ರಂಗನಾಥ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ತಹಸೀಲ್ದಾರ್ ಪುರಂದರ, ತಾ.ಪಂ ಇಒ ಕೆ.ಜಿ.ಶಶಿಧರ್, ರಥ ಸಮರ್ಪಣಾ ಸಮಿತಿ ಅಧ್ಯಕ್ಷ ಹೆಚ್.ಗಣಪತಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಪ್ರಶಾಂತ್ ಮೇಸ್ತ್ರಿ, ಡಾಕಪ್ಪ, ಬಂದಗಿ ಬಸವರಾಜ್ ಶೇಟ್, ತಬಲಿ ಬಂಗಾರಪ್ಪ ಇತರಿದ್ದರು.
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ.
ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ