ಶಿವಮೊಗ್ಗ ಲೈವ್
ಶಿವಮೊಗ್ಗ: ಕುಟುಂಬದವರು ಕೊಳ್ಳೆಗಾಲಕ್ಕೆ ಹೋಗಿದ್ದ ಸಂದರ್ಭ ಗಾಜನೂರು ಅಗ್ರಹಾರದ ಮನೆಯೊಂದರಲ್ಲಿ ಕಳ್ಳತನ (burglary) ನಡೆದಿದೆ. ಅಂದಾಜು ₹31.30 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳುವಾಗಿದೆ. ಏಪ್ರಿಲ್ 13ರ ರಾತ್ರಿ ಈ ಘಟನೆ ನಡೆದಿರುವ ಶಂಕೆ ಇದೆ.
ಇಲ್ಲಿನ ಹನುಮಂತು ಎಂಬುವವರ ಮನೆಯ ಬಾಗಿಲನ್ನು ಆಯುಧದಿಂದ ಮೀಟಿ ಒಳನುಗ್ಗಿರುವ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಘಟನೆ ವೇಳೆ ಮನೆಯವರು ಕಾರ್ಯಕ್ರಮಕ್ಕೆ ಕೊಳ್ಳೆಗಾಲಕ್ಕೆ ತೆರಳಿದ್ದರು.


ಮನೆಯೊಳಗಿನ ಬೀರುವನ್ನು ಮೀಟಿ ತೆಗೆದಿರುವ ಕಳ್ಳರು, ಒಟ್ಟು 204 ಗ್ರಾಂ ಚಿನ್ನದ ಆಭರಣಗಳು ಮತ್ತು 250 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕದ್ದಿದ್ದಾರೆ. ಇದರಲ್ಲಿ ಚಿನ್ನದ ನೆಕ್ಲೇಸ್, ಚೈನ್, ಉಂಗುರಗಳು ಹಾಗೂ ಮಕ್ಕಳ ಆಭರಣಗಳು ಸೇರಿವೆ. ಇವುಗಳ ಒಟ್ಟು ಮೌಲ್ಯ ₹31,30,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮುಖ, ತಲೆ, ಕುತ್ತಿಗೆಗೆ ಚಾಕುವಿನಿಂದ ಹಲ್ಲೆ, ಗಾಯಾಳು ಮೆಗ್ಗಾನ್ ಆಸ್ಪತ್ರೆಗೆ