ಆರಂಭದಲ್ಲಿ ನಂಬಿಕೆ ಮೂಡಿಸಿದರು, ಕೊನೆಗೆ ಸತಾಯಿಸಿದರು, ಶಿವಮೊಗ್ಗದಲ್ಲಿ ದಾಖಲಾಯ್ತು ಪ್ರಕರಣ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ಹೆಲ್ತ್ ಕೇರ್‌ ಕಂಪನಿಯಲ್ಲಿ ಹಣ ಹೂಡಿಕೆ (investment) ಮಾಡಿಸಿಕೊಂಡು ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ವಂಚಿಸಿಲಾಗಿದೆ.

ಶಿವಮೊಗ್ಗದ ತಾರಕೇಶ್ವರ ಎಂಬುವವರಿಗೆ ಕಂಪನಿಯಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಲಾಗಿತ್ತು. ಇದನ್ನು ನಂಬಿದ ತಾರಕೇಶ್ವರ ಅವರು ಹಂತ ಹಂತವಾಗಿ ಸುಮಾರು ₹2.10 ಲಕ್ಷ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಸ್ವಲ್ಪ ಹಣವನ್ನು ವಾಪಸ್ ನೀಡಿ ನಂಬಿಕೆ ಹುಟ್ಟಿಸಿದ್ದ ಸಂಸ್ಥೆ, ನಂತರ ಹಣ ನೀಡದೆ ವಂಚಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

140823-Jayanagara-Police-Station

140823-Jayanagara-Police-Station

ತಾರಕೇಶ್ವರ ತಮ್ಮ ಹಣ ವಾಪಸ್ ಕೇಳಿದಾಗ ಸಂಸ್ಥೆಯವರು ಸರಿಯಾಗಿ ಸ್ಪಂದಿಸದೆ ಸತಾಯಿಸುತ್ತಿದ್ದರು. ಇದೇ ರೀತಿ ಶಿವಮೊಗ್ಗದ ಇನ್ನೂ ಹಲವಾರಿಂದ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುವ ಶಂಕೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಮೂವರ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಶಿವಮೊಗ್ಗದ ಸೆಂಟ್ರಲ್‌ ಜೈಲಿಗೆ ಚೌ ಚೌ ತಂದವನೆ ಜೈಲುಪಾಲು

ಹೆಚ್ಚಿನ Shimoga News, Shivamogga News ಮತ್ತು CRIME DIARY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಏಪ್ರಿಲ್ 16, 2026

Leave a Comment