ಒಂದು ಕೋಟಿ ರುಪಾಯಿಯ ಪರಿಹಾರದ ಚೆಕ್‌ ವಿತರಣೆ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ಭದ್ರಾವತಿಯ ಭದ್ರಾ ನದಿಯಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 8ನೇ ಪಡೆಯ ಆರ್‌ಎಚ್‌ಸಿ ಎಲ್.ಚಂದ್ರಶೇಖರ್ ಅವರ ಕುಟುಂಬಕ್ಕೆ ₹1 ಕೋಟಿ ಮೊತ್ತದ ಪರಿಹಾರದ (insurance) ಚೆಕ್‌ ಅನ್ನು ಶಿವಮೊಗ್ಗ ಎಸ್‌ಬಿಐನ ಡಿಜಿಎಂ ಕೃಷ್ಣ ಮೋಹನ್ ಮುಚಾರ್ಲ ಅವರು ಏ.18ರಂದು ವಿತರಿಸುವರು.

ಅಂದು ಬೆಳಗ್ಗೆ 10.30ಕ್ಕೆ ಮಾಚೇನಹಳ್ಳಿಯ ಕೆಎಸ್‌ಆರ್‌ಪಿ 8ನೇ ಪಡೆಯಲ್ಲಿ ಮೃತ ಚಂದ್ರಶೇಖ‌ರ್ ಅವರ ಪತ್ನಿ ಸುಮಲತಾ ಮತ್ತು ಮಕ್ಕಳಿಗೆ ಎಸ್‌ಪಿ ಬಿ.ನಿಖಿಲ್ ಮತ್ತು 8ನೇ ಪಡೆಯ ಕಮಾಂಡೆಂಟ್ ಎಸ್.ಯುವಕುಮಾರ್ ಸಮ್ಮುಖದಲ್ಲಿ ಚೆಕ್ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

SHIMOGA-NEWS-UPDATE

ಇದನ್ನೂ ಓದಿ : ಹಂಸಿಣಿ ನೀರಾನೆಯ ಕೊನೆಕ್ಷಣದ CCTV ದೃಶ್ಯಾವಳಿ ರಿಲೀಸ್‌, ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗ

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಏಪ್ರಿಲ್ 16, 2026

Leave a Comment