ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 20 ಅಕ್ಟೋಬರ್ 2019
ಮದವೇರಿದಂತೆ ಓಡಾಡುತ್ತಿದ್ದ ಗೂಳಿಯೊಂದು ಇಬ್ಬರನ್ನು ಗಾಯಗೊಳಿಸಿ, ವಿನೋಬನಗರ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಬಳಿಕ ಸತತ ಆರು ಗಂಟೆ ಕಾರ್ಯಾಚರಣೆ ನಡೆಸಿ, ಗೂಳಿಯನ್ನು ಸೆರೆ ಹಿಡಿಯಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿನೋಬನಗರದ ಶುಭ ಮಂಗಳ ಕಲ್ಯಾಣ ಮಂಟಪ ರಸ್ತೆಯಲ್ಲಿ ಘಟನೆ ನಡೆದಿದೆ. ರೇಬಿಸ್ ಲಕ್ಷಣದಿಂದ ಬಳಲುತ್ತಿರುವ ಗೂಳಿಯೊಂದು ಇಬ್ಬರಿಗೆ ಗುದ್ದಿದೆ. ಇದರಿಂದ ಆತಂಕಗೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಗೂಳಿ ತಪ್ಪಿಸಿಕೊಂಡು ಹೋಗದಂತೆ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿದರು. ವಾಹನ ಸಂಚಾರ್ ನಿರ್ಬಂಧಿಸಿ, ಸಾರ್ವಜನಿಕರನ್ನು ಎಚ್ಚರಿಸಿದರು.
ಈ ಕುರಿತು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದೇ ತಡ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಬೆಳಗ್ಗೆ ೯ರಿಂದ ಗೂಳಿ ಹಿಡಿಯಲು ಮುಂದಾಗಿದ್ದು, ಸತತ ಆರು ಗಂಟೆಯ ಬಳಿಕ ಕಾರ್ಯಾಚರಣೆ ಫಲ ಕಂಡಿದೆ.
ಅರಣ್ಯ ಇಲಾಖೆಯ ಡಾ. ವಿನಯ್ ಅವರು ಡಾರ್ಟಿಂಗ್ ಗನ್ ಮೂಲಕ ಮಧ್ಯಾಹ್ನ ೨ರ ಸುಮಾರಿಗೆ ಗೂಳಿಗೆ ಅರವಳಿಕೆ ನೀಡಿದ್ದಾರೆ. ನಂತರ, ಅದನ್ನು ಸೆರೆ ಹಿಡಿದು ಮಹಾವೀರ ಗೋಶಾಲೆ ಸಮೀಪ ತಂದಿಡಲಾಗಿದೆ. ಗೂಳಿ ಮೇಲೆ ವೈದ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ. ವೆಟರ್ನರಿ ಕಾಲೇಜಿನ ಅರವಳಿಕೆ ತಜ್ಞ ರವಿ ರಾಯದುರ್ಗ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಸದಾಶಿವ ಇತರರು ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]