ಶಿವಮೊಗ್ಗ: ಬೈಕ್ ಮತ್ತು ಟ್ರಾಕ್ಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ (road accident). ಮೃತರನ್ನು ಹಾವೇರಿ ಜಿಲ್ಲೆಯ ಕುಂಚೂರು ಗ್ರಾಮದ ಹನುಮಂತಪ್ಪ ಹದಡಿ (49) ಎಂದು ಗುರುತಿಸಲಾಗಿದೆ.
ಸವಳಂಗಕ್ಕೆ ಹೋಗುವಾಗ ಅವಘಡ
ಹನುಮಂತಪ್ಪ ಹದಡಿ ಅವರು ಶಿವಮೊಗ್ಗದ ಕೋಟೆಗಂಗೂರು ಗ್ರಾಮಕ್ಕೆ ಕೆಲಸದ ನಿಮಿತ್ತ ಬೈಕ್‌ನಲ್ಲಿ ತೆರಳಿದ್ದರು. ಅಲ್ಲಿಂದ ಸವಳಂಗಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಕಲ್ಲಾಪುರ ಗ್ರಾಮದ ಬಳಿ ಟ್ರಾಕ್ಟರ್ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಕಂಠಮಟ್ಟ ಕುಡಿದು ಹೊಟ್ಟೆ ತುಂಬಾ ಊಟ ಮಾಡಿ ಬಿಲ್ ಕೇಳಿದಾಗ ಬಿಯರ್ ಬಾಟಲಿಯಿಂದ ದಾಳಿ
ಎದುರಿನಿಂದ ಬಂದ ಟ್ರಾಕ್ಟರ್
ಶಿವಮೊಗ್ಗ – ಸವಳಂಗ ರಸ್ತೆಯಲ್ಲಿ ಹನುಮಂತಪ್ಪ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ, ಎದುರುಗಡೆಯಿಂದ ಬಂದ ಟ್ರಾಕ್ಟರ್ ಡಿಕ್ಕಿ ಹೊಡೆದಿದೆ. ಚಾಲಕ ಟ್ರಾಕ್ಟರ್ ಅನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ತಲೆಗೆ ತೀವ್ರ ಪೆಟ್ಟು
ಡಿಕ್ಕಿಯ ರಭಸಕ್ಕೆ ಹನುಮಂತಪ್ಪ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ









