ಶಿವಮೊಗ್ಗ ಲೈವ್.ಕಾಂ | SHIMOGA | 8 ನವೆಂಬರ್ 2019
ಶಿವಮೊಗ್ಗಕ್ಕೆ ಮೂರು ಹೊಸ ರೈಲುಗಳ ಘೋಷಣೆ ಆಗಿದೆ. ಬಹು ಬೇಡಿಕೆ ಇದ್ದ ಶಿವಮೊಗ್ಗ – ಚೆನ್ನೈ, ಶಿವಮೊಗ್ಗ – ತಿರುಪತಿ ಮಾರ್ಗದಲ್ಲಿ ರೈಲು ಓಡಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಮೈಸೂರು – ಶಿವಮೊಗ್ಗ ನಡುವೆ ಮತ್ತೊಂದು ರೈಲು ಘೋಷಣೆಯಾಗಿದೆ.
ನೆವೆಂಬರ್ 10ರಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹೊಸ ರೈಲುಗಳಿಗೆ ಚಾಲನೆ ಸಿಗಲಿದೆ.
ಮೂರು ರೈಲುಗಳ ತಾತ್ಕಾಲಿಕ ಸೇವೆ
ಶಿವಮೊಗ್ಗ – ಚೆನ್ನೈ, ಶಿವಮೊಗ್ಗ – ತಿರುಪತಿ, ಶಿವಮೊಗ್ಗ – ಮೈಸೂರು ಜನಸಾಧಾರಣ ರೈಲು ಪ್ರಾಯೋಗಿಕ ಸೇವೆಯನ್ನು ಆರಂಭಿಸಲಾಗುತ್ತಿದೆ. ಫೆಬ್ರವರಿ ತಿಂಗಳವರೆಗೆ ಈ ಮೂರು ರೈಲುಗಳು ಸಂಚರಿಸಲಿವೆ. ‘ಸದ್ಯ ರೈಲುಗಳು ವಾರಕ್ಕೆ ಒಂದು ದಿನ ಮಾತ್ರವೆ ಸಂಚರಿಸಲಿವೆ. ಪ್ರಯಾಣಿಕರ ಸ್ಪಂದನೆ ಆಧರಿಸಿ ಇವುಗಳ ಸೇವೆಯನ್ನು ಹೆಚ್ಚಳ ಮಾಡಲಾಗುತ್ತದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಸಂಸದ ರಾಘವೇಂದ್ರ ಅವರ ಮೊದಲ ರಿಯಾಕ್ಷನ್ ವಿಡಿಯೋ ಇಲ್ಲಿದೆ ನೋಡಿ.
ರೈಲುಗಳ ಟೈಮ್, ಎಲ್ಲೆಲ್ಲಿ ನಿಲುಗಡೆ ಇದೆ ಗೊತ್ತಾ?
ಶಿವಮೊಗ್ಗ – ಚೆನ್ನೈ (ವಾರಕ್ಕೆ ಒಂದು ದಿನ – ಪ್ರತಿ ಸೋಮವಾರ)
ಶಿವಮೊಗ್ಗ ಟೌನ್ ರಾತ್ರಿ 11.55ಕ್ಕೆ ಹೊರಡಲಿದೆ. ಭದ್ರಾವತಿ ರಾತ್ರಿ 12.17, ತರೀಕೆರೆ ರಾತ್ರಿ 12.37, ಬೀರೂರು ರಾತ್ರಿ 1.04, ಕಡೂರು ರಾತ್ರಿ 1.16, ಅರಸಿಕೆರೆ ರಾತ್ರಿ 2.05, ತುಮಕೂರು ರಾತ್ರಿ 3.58, ಚಿಕ್ಕಬಾಣಾವರ ಬೆಳಗ್ಗೆ 5 ಗಂಟೆ, ಬಾಣಸವಾಡಿ ಬೆಳಗ್ಗೆ 5.23, ಕೃಷ್ಣರಾಜಪುರಂ ಬೆಳಗ್ಗೆ 5.40, ಬಂಗಾರಪೇಟೆ ಬೆಳಗ್ಗೆ 6.30, ಜೋಳರಪೆಟ್ಟೈ ಬೆಳಗ್ಗೆ 7.58, ಕಾಟ್ಪಾಡಿ ಬೆಳಗ್ಗೆ 9.08, ಪೆರಂಬೂರು ಬೆಳಗ್ಗೆ 10.43, ಚೆನ್ನೈ ಬೆಳಗ್ಗೆ 11.15ಕ್ಕೆ ತಲುಪಲಿದೆ.
ಚೆನ್ನೈ – ಶಿವಮೊಗ್ಗ (ವಾರಕ್ಕೆ ಒಂದು ದಿನ – ಪ್ರತಿ ಮಂಗಳವಾರ)
ಚೆನ್ನೈನಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿದೆ. ಪೆರಂಬೂರು ಮಧ್ಯಾಹ್ನ 3.58, ಕಾಟ್ಪಾಡಿ ಸಂಜೆ 4.48, ಜೋಳರಪೆಟ್ಟೈ ಸಂಜೆ 6.23, ಬಂಗಾರಪೇಟೆ 7.18, ಕೃಷ್ಣರಾಜಪುರಂ ರಾತ್ರಿ 8.09, ಬಾಣಸವಾಡಿ ರಾತ್ರಿ 8.20, ಚಿಕ್ಕಬಾಣಾವರ ರಾತ್ರಿ 9 ಗಂಟೆ, ತುಮಕೂರು ರಾತ್ರಿ 10 ಗಂಟೆ, ಅರಸಿಕೆರೆ ರಾತ್ರಿ 12.25, ಕಡೂರು ರಾತ್ರಿ 1.40, ಬೀರೂರು ರಾತ್ರಿ 1.55, ತರೀಕೆರೆ ರಾತ್ರಿ 2.30, ಭದ್ರಾವತಿ ರಾತ್ರಿ 2.59, ಶಿವಮೊಗ್ಗ ಟೌನ್ ರಾತ್ರಿ 3.55ಕ್ಕೆ ತಲುಪಲಿದೆ.
ಶಿವಮೊಗ್ಗ ಚೆನ್ನೈ ರೈಲಿನಲ್ಲಿ ಮೂರು ಜನರಲ್ ಕೋಚ್, ಏಳು ಸ್ಲೀಪರ್ ಕೋಚ್, ಒಂದು ಎಸಿ ಟು ಟೈರ್, ಒಂದು ಎಸಿ ತ್ರಿ ಟೈರ್ ಕೋಚ್’ಗಳು ಸೇರಿ 14 ಕೋಚ್’ಗಳು ಇರಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಶಿವಮೊಗ್ಗ – ರೇಣಿಗುಂಟ (ತಿರುಪತಿಗೆ) (ವಾರಕ್ಕೆ ಒಂದು ದಿನ – ಬುಧವಾರ)
ಶಿವಮೊಗ್ಗ ಬೆಳಗ್ಗೆ 6.15ಕ್ಕೆ, ಭದ್ರಾವತಿ ಬೆಳಗ್ಗೆ 6.28, ತರೀಕೆರೆ ಬೆಳಗ್ಗೆ 6.49, ಬೀರೂರು ಬೆಳಗ್ಗೆ 7.15, ಅಜ್ಜಂಪುರ ಬೆಳಗ್ಗೆ 7.46, ಹೊಸದುರ್ಗ ರೋಡ್ ಬೆಳಗ್ಗೆ 8.16, ಚಿಕ್ಕಜಾಜೂರು ಬೆಳಗ್ಗೆ 8.43, ಚಿತ್ರದುರ್ಗ ಬೆಳಗ್ಗೆ 9.26, ಮೊಳಕಾಲ್ಮೂರು ಬೆಳಗ್ಗೆ 11, ರಾಯದುರ್ಗ ಬೆಳಗ್ಗೆ 11.29, ಬಳ್ಳಾರಿ ಮಧ್ಯಾಹ್ನ 1.10, ಗುಂಟಕಲ್ ಮಧ್ಯಾಹ್ನ 2.05, ಗೂಟಿ ಮಧ್ಯಾಹ್ನ 2.25, ತಡಿಪಾತ್ರಿ ಮಧ್ಯಾಹ್ನ 3.24, ಕೊಂಡಾಪುರಂ ಸಂಜೆ 4, ಯರ್ರಾಗುಂಟ್ಲಾ ಸಂಜೆ 4.40, ಕುಡ್ಡಾಪ ಸಂಜೆ 5.28, ರಾಜಂಪೇಟಾ ಸಂಜೆ 6.30, ರಾಣಿಗುಂಟಾ ರಾತ್ರಿ 8.05.
ರೇಣಿಗುಂಟ (ತಿರುಪತಿ) – ಶಿವಮೊಗ್ಗ (ವಾರಕ್ಕೆ ಒಂದು ದಿನ – ಗುರುವಾರ)
ರೇಣಿಗುಂಟಾ 9.45, ರಾಜಂಪೇಟಾ 10.56, ಕುಡ್ಡಾಪ 11.50, ಯರ್ರಾಗುಂಟ್ಲಾ 12.25, ಕೊಂಡಾಪುರಂ 1.07, ತಡಿಪಾತ್ರಿ 1.35, ಗೂಟಿ 2.25, ಗುಂಟಕಲ್ 3.10, ಬಳ್ಳಾರಿ 4.450, ರಾಯದುರ್ಗ 6.15, ಮೊಳಕಾಲ್ಮೂರು 6.31, ಚಿತ್ರದುರ್ಗ 8, ಚಿಕ್ಕಜಾಜೂರು 8.45, ಹೊಸದುರ್ಗ ರೋಡ್ 9.02, ಅಜ್ಜಂಪುರ 9.19, ಬೀರೂರು 9.40, ತರೀಕೆರೆ 10.39, ಭದ್ರಾವತಿ 11, ಶಿವಮೊಗ್ಗ ಬೆಳಗ್ಗೆ 11.45ಕ್ಕೆ ತಲುಪಲಿದೆ.
ಶಿವಮೊಗ್ಗ ರೇಣಿಗುಂಟ ರೈಲಿನಲ್ಲಿ ಮೂರು ಜನರಲ್ ಕೋಚ್, ಏಳು ಸ್ಲೀಪರ್ ಕೋಚ್, ಒಂದು ಎಸಿ ಟು ಟೈರ್, ಒಂದು ಎಸಿ ತ್ರಿ ಟೈರ್ ಕೋಚ್’ಗಳು ಸೇರಿ 14 ಕೋಚ್’ಗಳು ಇರಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮೈಸೂರು – ಶಿವಮೊಗ್ಗ ಜನಸಾಧಾರಣ ವಿಶೇಷ ರೈಲು (ವಾರಕ್ಕೆ ಒಂದು ದಿನ – ಸೋಮವಾರ)
ಮೈಸೂರಿನಿಂದ ಸಂಜೆ 4.40ಕ್ಕೆ ಹೊರಡಲಿದೆ. ಕೃಷ್ಣರಾಜನಗರ ಸಂಜೆ 5.21, ಹೊಳೆನರಸೀಪುರ ಸಂಜೆ 6.15, ಹಾಸನ ಸಂಜೆ 6.43, ಅರಸೀಕೆರೆ ರಾತ್ರಿ 7.40, ಕಡೂರು ರಾತ್ರಿ 8.20, ಬೀರೂರು ರಾತ್ರಿ 8.35, ತರೀಕೆರೆ ರಾತ್ರಿ 9.05, ಭದ್ರಾವತಿ ರಾತ್ರಿ 9.30, ಶಿವಮೊಗ್ಗ ರಾತ್ರಿ 10.30ಕ್ಕೆ ತಲುಪಲಿದೆ.
ಶಿವಮೊಗ್ಗ – ಮೈಸೂರು ಜನಸಾಧಾರಣ ವಿಶೇಷ ರೈಲು (ವಾರಕ್ಕೆ ಒಂದು ದಿನ – ಗುರುವಾರ)
ಶಿವಮೊಗ್ಗದಿದಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿದೆ, ಭದ್ರಾವತಿ ಮಧ್ಯಾಹ್ನ 1.31, ತರೀಕರೆ ಮಧ್ಯಾಹ್ನ 1.52, ಬೀರೂರು ಮಧ್ಯಾಹ್ನ 2.36, ಕಡೂರು ಮಧ್ಯಾಹ್ನ 2.50, ಅರಸೀಕೆರೆ ಮಧ್ಯಾಹ್ನ 3.20, ಹಾಸನ ಸಂಜೆ 4.18, ಹೊಳೆನರಸೀಪುರ ಸಂಜೆ 4.50, ಕೃಷ್ಣರಾಜನಗರ ಸಂಜೆ 6, ಮೈಸೂರಿಗೆ ರಾತ್ರಿ 7.05ಕ್ಕೆ ತಲುಪಲಿದೆ.
ಶಿವಮೊಗ್ಗ ಮೈಸೂರು ಜನಸಾಧಾರಣ ರೈಲಿನಲ್ಲಿ ಮೂರು ಜನರಲ್ ಕೋಚ್, ಏಳು ಸ್ಲೀಪರ್ ಕೋಚ್, ಒಂದು ಎಸಿ ಟು ಟೈರ್, ಒಂದು ಎಸಿ ತ್ರಿ ಟೈರ್ ಕೋಚ್’ಗಳು ಸೇರಿ 14 ಕೋಚ್’ಗಳು ಇರಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು