ಶಿವಮೊಗ್ಗ ಲೈವ್.ಕಾಂ | SHIMOGA | 10 ನವೆಂಬರ್ 2019
ತುಂಗಾ ನದಿ ಹಳೆ ಸೇತುವೆಗೆ ಅಳವಡಿಸಲಾಗಿದ್ದ ಹ್ಯಾಂಗ್ಲರ್’ಗೆ ಮತ್ತೆ ವಾಹನ ಡಿಕ್ಕಿ ಹೊಡೆದಿದೆ. ಈ ಬಾರಿ ಆ್ಯಂಗ್ಲರ್ ತುಂಡಾಗಿದೆ. ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ತುಂಡಾಗಿದ್ದ ಆ್ಯಂಗ್ಲರ್ ಸಂಚಾರಿ ಪೊಲೀಸರು ಸೈಡಿಗಿಟ್ಟಿದ್ದಾರೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶನಿವಾರ ರಾತ್ರಿ ಖಾಸಗಿ ಬಸ್ ಸೇತುವೆಯ ಆ್ಯಂಗ್ಲರ್‌ಗೆ ಡಿಕ್ಕಿ ಹೊಡಿದಿದೆ. ಅಪಘಾತದ ರಭಸಕ್ಕೆ ಹ್ಯಾಂಗ್ಲರ್ ಎರಡು ಭಾಗವಾಗಿದೆ. ಹಾಗಾಗಿ ಭಾನುವಾರ ಕೆಲಕಾಲ ಸೇತುವೆ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು.
ಸೇತುವೆ ಮೇಲೆ ಭಾರಿ ವಾಹನಗಳನ್ನು ನಿಯಂತ್ರಿಸುವ ಸಲುವಾಗಿ ಹ್ಯಾಂಗ್ಲರ್ ಅಳವಡಿಸಲಾಗಿತ್ತು. ಮೊದಲ ದಿನವೆ ಹ್ಯಾಂಗ್ಲರ್’ಗೆ ವಾಹನ ಡಿಕ್ಕಿ ಹೊಡೆದಿತ್ತು. ಆ ಬಳಿಕ ಮತ್ತೆರಡು ಬಾರಿ ಡಿಕ್ಕಿಯಾಗಿತ್ತು. ಪ್ರತಿ ಭಾರಿ ಅಪಘಾತವಾದಾಗಲು ಹ್ಯಾಂಗ್ಲರ್ ಬೆಂಡ್ ಆಗುತ್ತಿತ್ತು. ಆದರೆ ಈ ಬಾರಿ ತುಂಡಾಗಿದೆ. ಸದ್ಯ ಸೇತುವೆ ಮುಂಭಾಗ ಬ್ಯಾರಿಕೇಡ್ ಹಾಕಲಾಗಿದ್ದು, ದ್ವಿಚಕ್ರ ವಾಹನ, ಕಾರುಗಳು ಮತ್ತು ಕಡಿಮೆ ತೂಕದ ವಾಹನಗಳನ್ನು ಮಾತ್ರ ಬಡಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]