ಶಿವಮೊಗ್ಗ ಲೈವ್
ರಿಪ್ಪನ್‌ಪೇಟೆ: ಕ್ರೀಡಾಕೂಟದಲ್ಲಿ ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ತಗುಲಿ ದೈಹಿಕ ಶಿಕ್ಷಕರೊಬ್ಬರು ಗಾಯಗೊಂಡಿದ್ದಾರೆ. ಪಟ್ಟಣದ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಇಂದು ನಡೆದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಘಟನೆ ಸಂಭವಿಸಿದೆ.
ಮೇರಿಮಾತಾ ಶಾಲೆಯ ದೈಹಿಕ ಶಿಕ್ಷಕ ಕಮಲಾಕರ್ ಗಾಯಗೊಂಡವರು. ಸ್ಪರ್ಧೆ ವೇಳೆ ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ಅನಿರೀಕ್ಷಿತವಾಗಿ ಅಲ್ಲೇ ಇದ್ದ ಶಿಕ್ಷಕ ಕಮಲಾಕರ್ ಅವರ ತಲೆಗೆ ಅಪ್ಪಳಿಸಿದೆ. ಘಟನೆಯಲ್ಲಿ ಕಮಲಾಕರ್ ಅವರ ತಲೆಗೆ ಗಾಯವಾಗಿದ್ದು,

ರಕ್ತಸ್ರಾವವಾದ ಹಿನ್ನೆಲೆ ಕೂಡಲೆ ಅವರನ್ನು ರಿಪ್ಪನ್‌ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿಕ್ಷಕ ಕಮಲಾಕರ್ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.