THIRTHAHALLI | ಮುಖ್ಯರಸ್ತೆಯಲ್ಲೇ ನಾಲ್ಕು ಲಕ್ಷ ರೂ. ಅಪಹರಣ, ಪೊಲೀಸ್ ಜಾಗೃತಿಯ ಮರುದಿನವೇ ಅವಾಂತರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | THIRTHAHALLI | 27 ನವೆಂಬರ್ 2019

ಆಗುಂಬೆ ರಸ್ತೆಯಲ್ಲಿರುವ ಹಾರ್ಡ್‌ವೇರ್ ಅಂಗಡಿಯೊಂದರ ಸಮೀಪ ಬೈಕ್‌ನಲ್ಲಿ ಇಟ್ಟಿದ್ದ 4 ಲಕ್ಷ ರೂ. ಹಣವನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪಹರಿಸಿದ್ದಾರೆ.

ಮಲೆನಾಡು ಕ್ಲಬ್‌ನ ಮ್ಯಾನೇಜರ್ ಶರತ್‌ ಬ್ಯಾಂಕ್‌ನಿಂದ ಡ್ರಾ ಮಾಡಿ ತಂದಿದ್ದ ಹಣವನ್ನು ತಮ್ಮ ಬೈಕ್‌ನ ಸೈಡ್ ಬ್ಯಾಗಿನಲ್ಲಿ ಇಟ್ಟು ಹಾರ್ಡ್‌ವೇರ್ ಅಂಗಡಿಗೆ ಹೋಗಿದ್ದಾರೆ. ಇವರನ್ನೇ ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದಿದ್ದ ಇಬ್ಬರಲ್ಲಿ ಒಬ್ಬ ಬೈಕ್‌ನಿಂದ ಇಳಿದು ಹಣದ ಬ್ಯಾಗನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಕಳವು ಮಾಡುತ್ತಿದ್ದ ದೃಶ್ಯ ಹಾರ್ಡ್ ವೇರ್ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಹಣ ಅರಮನೆಕೇರಿ ರವಿಶಂಕರ್ ಅವರಿಗೆ ಸೇರಿದ್ದು, ಬ್ಯಾಂಕಿನಿಂದ ಡ್ರಾ ಮಾಡಿ ತರುವಂತೆ ಶರತ್‌ಗೆ ಹೇಳಿದ್ದರು ಎನ್ನಲಾಗಿದೆ. ಇಂತಹ ಅಪರಾಧಗಳ ಬಗ್ಗೆ ಜಿಲ್ಲಾ ಪೊಲೀಸ್ ಅಪರಾಧ ವಿಭಾಗದವರು ಸೋಮವಾರ ಇಡೀ ದಿನ ಪಟ್ಟಣದಲ್ಲಿ ಧ್ವನಿವರ್ಧಕ ಮತ್ತು ಕರಪತ್ರ ಹಂಚುವ ಮೂಲಕ ಜನಜಾಗೃತಿ ಮೂಡಿಸಿದ್ದರು.

four lakh rupees theft by a gang in Thirthahalli Agumbe road in the city. This is the first incident after police held a drive on monday

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment