ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020
ಶಿವಮೊಗ್ಗದ ಮಿಳಘಟ್ಟ ರಸ್ತೆಯಲ್ಲಿ ಬೈಕ್ ಮತ್ತು ಸಿಟಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತನನ್ನು ಸಾದಿಕ್ (31) ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳದಲ್ಲೇ ಸಾದಿಕ್ ಕೊನೆಯುಸಿರೆಳೆದಿದ್ದಾರೆ.
ಅಪಘಾತವಾಗುತ್ತಿದ್ದಂತೆ ಸಾರ್ವಜನಿಕರು ಗುಂಪುಗೂಡಿದ್ದಾರೆ. ಅಲ್ಲದೆ ಸಿಟಿ ಬಸ್’ಗೆ ಕಲ್ಲು ತೂರಿದ್ದಾರೆ. ಗಾಜು ಪುಡಿ ಪುಡಿಯಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಘಟನೆಯಿಂದಾಗಿ ಮಿಳಘಟ್ಟ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಬ್ಧವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ ಬಳಿಕ, ವಾಹನಗಳ ಸಂಚಾರ ಆರಂಭವಾಯಿತು.
READ ALSO
- ಬೆಳ್ಳಂಬೆಳಗ್ಗೆ ಅರಸಾಳು ಬಳಿ ಕಾಡಾನೆ ದಾಳಿ, ವ್ಯಕ್ತಿ ಸಾವು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು
- ಶಿವಮೊಗ್ಗದಲ್ಲಿ ಬಸ್ ಹತ್ತಿ ಅಣ್ಣನಿಗೆ ಫೋನ್ ಮಾಡಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್
- ಶಿವಮೊಗ್ಗದ ಜೆಎನ್ಎನ್ ಕಾಲೇಜಿನಲ್ಲಿ ಟೆಕ್ ಜೋನ್ 2024
- ಪ್ರಚಾರಕ್ಕೆ ಮೋದಿ ಫೋಟೊ, ಬಿಜೆಪಿಗೆ ಹಿನ್ನಡೆ, ಈಶ್ವರಪ್ಪ ಖುಷ್, ಕೋರ್ಟ್ನಲ್ಲಿ ಆಗಿದ್ದೇನು?
- ಶಿವಮೊಗ್ಗದಲ್ಲಿ ಮುಂದುವರೆದ ಬಿಸಿಲು, ಇವತ್ತು ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ಉಷ್ಣಾಂಶ