ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 MAY 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ಖಾಕಿ ಭದ್ರಕೋಟೆಯಾಗಿದೆ. ನಾಲ್ಕು ದಿಕ್ಕಿಗೂ ಬ್ಯಾರಿಕೇಡ್ ಹಾಕಲಾಗಿದೆ. ಯಾವುದೆ ವಾಹನಗಳು ಈ ಸರ್ಕಲ್ನಲ್ಲಿ ಹಾದು ಹೋಗಲು ಅವಕಾಶವಿಲ್ಲ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕರ್ಫ್ಯೂ ಇದ್ದರೂ ಅನಗತ್ಯ ಓಡಾಡುವವರಿಗೆ ಕಡಿವಾಣ ಹಾಕಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಿ.ಹೆಚ್.ರಸ್ತೆ, ನೆಹರೂ ರೋಡ್, ಓ.ಟಿ.ರಸ್ತೆ ಕಡೆಯಿಂದ ಓಡುವವರು ಈ ಸರ್ಕಲ್ ಮೂಲಕವೆ ಸಂಚರಿಸಬೇಕಾಗುತ್ತದೆ.
ಬ್ಯಾರಿಕೇಡ್ ಹಾಕಿರುವುದರಿಂದ ಅಮೀರ್ ಅಹಮದ್ ಸರ್ಕಲ್ ಕಡೆಯಿಂದ ಸಂಚರಿಸಲು ಯಾರಿಗೂ ಅವಕಾಶವಿಲ್ಲ. ಸೈನ್ಸ್ ಮೈದಾನದ ಕಡೆಯಿಂದ ಬರುವವರು ಬಸ್ ನಿಲ್ದಾಣದ ಕಡೆಯಿಂದ ನೇರವಾಗಿ ಸಂಚರಿಸಲು ಅವಕಾಶವಿಲ್ಲ. ವೀರಭದ್ರ ಟಾಕೀಸ್ , ಡಿವಿಎಸ್ ಸರ್ಕಲ್, ಗೋಪಿ ಸರ್ಕಲ್ ಮೂಲಕ ಸುತ್ತಿ ಬಳಸಿ ಸಂಚರಿಸಬೇಕು.
ತುರ್ತು ಸೇವೆಗಳಾದ ಆಂಬುಲೆನ್ಸ್, ಪೊಲೀಸ್, ಅಗ್ನಿಶಾಮಕ ವಾಹನಗಳಿಗೆ ಮಾತ್ರ ಸರ್ಕಲ್ ಮೂಲಕ ಹಾದು ಹೋಗಲು ಅವಕಾಶವಿದೆ. ಸುತ್ತಿ ಬಳಸಿ ಓಡಾಡುವುದರಿಂದ ತುರ್ತು ಅಗತ್ಯವಿದ್ದವರಷ್ಟೆ ರಸ್ತೆಗಿಳಿಯುತ್ತಾರೆ. ಅಲ್ಲದೆ ಪ್ರತಿ ಸರ್ಕಲ್, ರಸ್ತೆಯಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿರುವುದರಿಂದ ಅನಗತ್ಯ ಸುತ್ತಾಡುವವರಿಗೆ ಬ್ರೇಕ್ ಬೀಳಲಿದೆ ಅನ್ನುವುದು ಪೊಲೀಸರ ಲೆಕ್ಕಾಚಾರ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]