ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಫಾಸ್ಟ್‌ ಫುಡ್‌ ವ್ಯಾಪಾರಿ

Sagara Police Station Building

SHIVAMOGGA LIVE NEWS | 9 OCTOBER 2023 SAGARA : ಫಾಸ್ಟ್‌ ಫುಡ್‌ ವ್ಯಾಪಾರಿಯೊಬ್ಬರು ಹೊಟೇಲ್‌ ಒಂದರ ಕಾರಿಡಾರ್‌ನಲ್ಲಿ (Corridor) ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಟೇಲ್‌ ಸಿಬ್ಬಂದಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಸಾಗರ ನಗರದ ಬಿ.ಹೆಚ್.ರಸ್ತೆಯ ಹೊಟೇಲ್‌ ಮುಂಭಾಗ ಭಾನುವಾರ ಘಟನೆ ನಡೆದಿದೆ. ಫಾಸ್ಟ್‌ಫುಡ್‌ ತಯಾರಿಕೆ ವ್ಯಾಪಾರ ನಡೆಸುತ್ತಿದ್ದ ಬಸವರಾಜ್‌ ಆತ್ಮಹತ್ಯೆಗೆ ಯತ್ನಿಸಿದವರು. ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿರುವ ಬಸವರಾಜ್‌ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ … Read more

ಡೆಂಘೆ ಜ್ವರಕ್ಕೆ ನವವಿಹಾಹಿತೆ ಬಲಿ, ರಿಪ್ಪನ್‌ಪೇಟೆಯ ಮಹಿಳೆ ಶಿವಮೊಗ್ಗದಲ್ಲಿ ನಿಧನ

091023-newly-wed-woman-succumbed-to-dengue-fever.webp

SHIVAMOGGA LIVE NEWS | 9 OCTOBER 2023 RIPPONPETE : ಡೆಂಘೆ ಜ್ವರದಿಂದ (Dengue Fever) ಬಳಲುತ್ತಿದ್ದ ನವವಿವಾಹಿತೆ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ. ರಿಪ್ಪನ್‌ಪೇಟೆಯ ಶಬರೀಶ ನಗರದ ನಿವಾಸಿ ಮಂಜುನಾಥ್ ಅವರ ಪತ್ನಿ ಮಧುರಾ (31) ಡೆಂಘೆ ಜ್ವರದಿಂದ ಭಾನುವಾರ ಬೆಳಗಿನ ಜಾವ ಮೃತಪಟ್ಟರು. ಆರು ತಿಂಗಳ ಹಿಂದಷ್ಟೇ ಇವರ ವಿವಾಹವಾಗಿತ್ತು. ಇದನ್ನೂ ಓದಿ- ಮೂವರು ಸಜೀವ ದಹನ, ಸ್ಥಳಕ್ಕೆ ಎಂಎಲ್‌ಎ ದೌಡು, ಘಟನೆ ಕುರಿತು ಹೇಳಿದ್ದೇನು? ವಾರದ ಹಿಂದೆ ಜ್ವರ … Read more

ಗೋಪಿ ಸರ್ಕಲ್‌ನಲ್ಲಿದ್ದ ಸ್ಮಾರ್ಟ್‌ ಸಿಟಿ ಕಲ್ಲಿನ ರೇಲಿಂಗ್‌ ನಾಪತ್ತೆ

stone-railing-missing-from-gopi-circle.webp

SHIVAMOGGA LIVE NEWS | 6 OCTOBER 2023 SHIMOGA : ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಗೋಪಿ ಸರ್ಕಲ್‌ನಲ್ಲಿ ಅಳವಡಿಸಿದ್ದ ಅಲಂಕಾರಿಕ ಕಲ್ಲಿನ ರೇಲಿಂಗ್‌ (Stone railing) ನಾಪತ್ತೆಯಾಗಿದೆ. ಎಂ.ಜಿ.ಪ್ಯಾಲೇಸ್‌ ಮುಂಭಾಗ ಅಳವಡಿಸಿದ್ದ ರೇಲಿಂಗ್‌ಗಳು ಕಾಣೆಯಾಗಿವೆ. ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಗೋಪಿ ಸರ್ಕಲ್‌ನಲ್ಲಿ ಫುಟ್‌ಪಾತ್‌ಗೆ ಕಲ್ಲಿನ ರೇಲಿಂಗ್‌ (Stone railing) ಅಳವಡಿಸಲಾಗಿದೆ. ಶ್ರೀನಿಧಿ ಟೆಕ್ಸ್‌ಟೈಲ್ಸ್‌ ಮುಂಭಾಗ, ಅನ್ಮೋಲ್‌ ಹೊಟೇಲ್‌ ಕಟ್ಟಡದ ಎದುರು ಮತ್ತು ಎಂ.ಜಿ.ಪ್ಯಾಲೇಸ್‌ ಮುಂಭಾಗ ಕಲ್ಲಿನ ಅಲಂಕಾರಿಕ ರೇಲಿಂಗ್‌ ಹಾಕಲಾಗಿತ್ತು. ಇದನ್ನೂ ಓದಿ- ಶಿವಮೊಗ್ಗ ಗಾಂಧಿ … Read more

ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅ.7ರಂದು ವಿದ್ಯುತ್‌ ವ್ಯತ್ಯಯ

power cut mescom ELECTRICITY

SHIVAMOGGA LIVE NEWS | 6 OCTOBER 2023 SHIMOGA : ತಾಲ್ಲೂಕಿನ ಮಂಡ್ಲಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ ಕೆಲವು ಗ್ರಾಮಗಳಲ್ಲಿ ಅ.7 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut). ಇದನ್ನೂ ಓದಿ – ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಇಬ್ಬರಿಗೆ ಸ್ಥಾನ ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ? ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಅಗಸವಳ್ಳಿ, ಹೊಸೂರು, ಮತ್ತೂರು, ಲಕ್ಷ್ಮೀಪುರ, … Read more

ಅಡಿಕೆ ಬೆಳೆಗಾರರಿಂದ ಸಾಗರ ಡಿವೈಎಸ್‌ಪಿ ಭೇಟಿ, 3 ಪ್ರಮುಖ ಬೇಡಿಕೆ ಈಡೇರಿಸುವಂತೆ ಮನವಿ, ಏನದು?

Areca-growers-memorandum-to-DYSP-in-SAgara.webp

SHIVAMOGGA LIVE NEWS | 6 OCTOBER 2023 SAGARA : ಗ್ರಾಮೀಣ ಭಾಗದಲ್ಲಿ ಪೊಲೀಸ್‌ ಗಸ್ತು (Patrol) ಹೆಚ್ಚಳ ಮಾಡಬೇಕು, ಗನ್‌ ಪರ್ಮಿಷನ್‌ ನವೀಕರಿಸಬೇಕು, ಬಂದೂಕು ತರಬೇತಿ ನೀಡಬೇಕು ಎಂದು ಒತ್ತಾಯಿಸಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಡಿವೈಎಸ್‌ಪಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಅಡಿಕೆ ಬೆಳೆಗಾರರ ಮನವಿಯೇನು? ಸಾಗರ ಭಾಗದಲ್ಲಿ ಒಂಟಿ ಮನೆಗಳು ಹೆಚ್ಚು. ಅಡಿಕೆ ಬೆಳೆಗಾರರು ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಬೇಕಿದೆ. ತಮ್ಮ ಕುಟುಂಬದ ಹಿರಿಯರಿಂದ ಗನ್‌ ಪರವಾನಗಿಯನ್ನು ತಮಗೆ ವರ್ಗಾಯಿಸಿಕೊಡುವಂತೆ ಅರ್ಜಿ … Read more

ಮತ್ತೊಂದು ಹೈಟೆಕ್‌ ಬಸ್‌ ಪರಿಚಯಿಸುತ್ತಿದೆ KSRTC, ಸದ್ಯದಲ್ಲೇ ರಸ್ತೆಗಿಳಿಯಲಿದೆ ‘ಪಲ್ಲಕ್ಕಿ’

ksrtc-news-update-thumbnail.webp

SHIVAMOGGA LIVE NEWS | 6 OCTOBER 2023 KSRTC NEWS : ಪ್ರಯಾಣಿಕರ ಅನುಕೂಲಕ್ಕೆ ಕೆಎಸ್‌ಆರ್‌ಟಿಸಿ ಸಂಸ್ಥೆ ಹೊಸ ಮಾದರಿಯ ಸ್ಲೀಪರ್‌ ಬಸ್ಸುಗಳನ್ನು  (Sleeper Bus) ಪರಿಚಯಿಸುತ್ತಿದೆ. ಎಸಿ ರಹಿತ ಕೆಟಗರಿಯಲ್ಲಿ ಪಲ್ಲಕ್ಕಿ ಎಂಬ ಬಸ್‌ ರಸ್ತೆಗಿಳಿಸಲು ಸಾರಿಗೆ ಸಂಸ್ಥೆ ಮುಂದಾಗಿದೆ. ಕೆಎಸ್‌ಆರ್‌ಟಿಸಿಯ ಪಲ್ಲಕ್ಕಿ ಬಸ್ಸಿನ ವಿಡಿಯೋ ಹೊರ ಬಿದ್ದಿದೆ. ಸಾರಿಗೆ ಸಂಸ್ಥೆಯ ಟಿಪಿಕಲ್‌ ಬಣ್ಣದ ಮಾದರಿ ಇದರಲ್ಲಿ ಇಲ್ಲ. ಖಾಸಗಿ ಬಸ್ಸುಗಳಿಗೆ ತೀವ್ರ ಪೈಪೋಟಿ ಒಡ್ಡುವ ಬಣ್ಣ, ಡಿಸೈನ್‌ ಹೊಂದಿದೆ. ಬಸ್ಸಿನ ಎರಡು ಬದಿಯಲ್ಲಿ … Read more

ಸಾಗರದ ಗಣಪತಿ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆ

Sagara Police Station Building

SHIVAMOGGA LIVE NEWS | 6 OCTOBER 2023 SAGARA : ಗಣಪತಿ ಕೆರೆಯಲ್ಲಿ ಯುವಕನೊಬ್ಬನ (Youth) ಮೃತದೇಹ ಪತ್ತೆಯಾಗಿದೆ. ಆತನ ಗುರುತು ಪತ್ತೆಯಾಗಿಲ್ಲ. ಯುವಕನಿಗೆ (Youth) 25 ವರ್ಷ ಎಂದು ಅಂದಾಜಿಸಲಾಗಿದೆ. ಒಂದು ದಿನ ಮೊದಲು ಆತ ಸಾಗರದ ಗಣಪತಿ ಕೆರೆಯಲ್ಲಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸಾಗರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ- ರಾತ್ರಿ ಕುಡಿದ … Read more

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಇಬ್ಬರಿಗೆ ಸ್ಥಾನ

kuvempu-University-

SHIVAMOGGA LIVE NEWS | 6 OCTOBER 2023 SHIMOGA : ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಶೇ. 2ರಷ್ಟು ಅತ್ಯುತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ (Professors) ಬಿ.ಜೆ.ಗಿರೀಶ್ ಮತ್ತು ಬಿ.ಇ.ಕುಮಾರಸ್ವಾಮಿ ಸತತ ಮೂರನೇ ವರ್ಷ ಸ್ಥಾನ ಪಡೆದಿದ್ದಾರೆ. ಪ್ರತಿಷ್ಠಿತ ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಜಾನ್ ಅಯೋನ್ನಿಡಿಸ್ ಅ.4ರಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇವರು ಸ್ಥಾನ ಪಡೆದಿದ್ದು, ಇಬ್ಬರ ವಿವರ ಅಂತರ್ಜಾಲದಲ್ಲಿ ಲಭ್ಯವಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು, ಸಂಶೋಧನಾ ಉಲ್ಲೇಖಗಳು, … Read more

ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು, ನಾಲ್ವರು ಯುವಕರಿಗೆ ತಲಾ 25 ವರ್ಷ ಜೈಲು, ಶಿಕ್ಷೆ ಆಗಿದ್ದೇಕೆ?

Shimoga District Court

SHIVAMOGGA LIVE NEWS | 6 OCTOBER 2023 SHIMOGA : ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ನಾಲ್ವರಿಗೆ 25 ವರ್ಷ ಕಠಿಣ ಕಾರಾಗೃಹ ಶಿಕ್ಷೆ (Jail) ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯ ಆರೈಕೆಗೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಏನಿದು ಪ್ರಕರಣ? 2020ರ ಡಿಸೆಂಬರ್ 6ರಂದು ಘಟನೆ ಸಂಭವಿಸಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಾಲಕಿಯ ತಾಯಿ ಚಿಕಿತ್ಸೆ ಪಡೆಯುತ್ತಿದ್ದರು. ಶಿವಮೊಗ್ಗದಲ್ಲಿ ಗಲಭೆ ಹಿನ್ನಲೆ ಅಂದು … Read more

ಎಸ್ಸೆಸ್ಸೆಲ್ಸಿ ಪಾಸಾದ ಮಹಿಳೆಯರಿಗೆ ಶಿವಮೊಗ್ಗದಲ್ಲಿ ಸ್ವಯಂ ಉದ್ಯೋಗ ಕುರಿತು ಉಚಿತ ತರಬೇತಿ

one-minute-news-notifications.webp

SHIVAMOGGA LIVE NEWS | 4 OCTOBER 2023 SHIMOGA : ಸ್ವಯಂ ಉದ್ಯೋಗ (Self Employment) ಕೈಗೊಳ್ಳಲು ಇಚ್ಚಿಸುವ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ ಅ.11 ರಿಂದ 20 ರವರೆಗೆ ಶಿವಮೊಗ್ಗದ ಕೈಗಾರಿಕಾ ಕೇಂದ್ರದಲ್ಲಿ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಸಂಸ್ಥೆಯಿಂದ (ಸಿಡಾಕ್) ಈ ತರಬೇತಿ ನೀಡಲಾಗುತ್ತಿದೆ. ಇದನ್ನೂ ಓದಿ- ಶಿವಮೊಗ್ಗಕ್ಕೆ ಬಂದಿದ್ದ 10 ಸರ್ಕಾರಿ ಹೈಟೆಕ್‌ ಬಸ್‌ಗಳ ಪೈಕಿ 8 ಬಸ್‌ ವಾಪಸ್‌, ಈ ನಿರ್ಧಾರವೇಕೆ? ಅರ್ಹತೆಗಳೇನು? … Read more