ಬೈಕ್‌ನಲ್ಲಿ ಬಂದು ಆಟೋ ಅಡಗಟ್ಟಿದ ದುಷ್ಕರ್ಮಿಗಳು, ಹಿಂಬದಿ ಕುಳಿತಿದ್ದ ವ್ಯಕ್ತಿ ಬಳಿ ಇದ್ದ ಬ್ಯಾಗ್‌ ಕಸಿದು ಪರಾರಿ

Police-Van-Jeep-at-Shimoga-Nehru-Road

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಲಿಸುತ್ತಿದ್ದ ಆಟೋವನ್ನು (Auto) ಅಡ್ಡಗಟ್ಟಿ ಹಿಂಬದಿ ಕುಳಿತಿದ್ದ ವ್ಯಕ್ತಿ ಬಳಿ ಇದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಬ್ಯಾಗ್‌ನಲ್ಲಿ ಎರೆಡು ಲಕ್ಷ ರೂ. ಹಣವಿತ್ತು ಎಂದು ಆರೋಪಿಸಲಾಗಿದೆ. ನಗರದ ಕೆ.ಆರ್‌.ಪುರಂನಲ್ಲಿ ಘಟನೆ ಸಂಭವಿಸಿದೆ. ಆಟೋ ಚಾಲಕ ಅಲ್ಲಾಭಕ್ಷ್‌ ಎಂಬುವವರು ದೂರು ನೀಡಿದ್ದಾರೆ. ಹೇಗಾಯ್ತು ಘಟನೆ? ಏನಿದು ಹಣ? ನಗರದ ವಿವಿಧ ಆಟೋ ಚಾಲಕರು ತುರ್ತು ಸಂದರ್ಭದಲ್ಲಿ ನೆರವಿಗೆ ಫಂಡ್‌ ರಚಿಸಿಕೊಂಡಿದ್ದಾರೆ. ಅಲ್ಲಾಭಕ್ಷ್‌ ಅವರಿಗೆ ಅದರ ಉಸ್ತುವಾರಿ ವಹಿಸಲಾಗಿದೆ. ಜುಲೈ 5ರಂದು ಫಂಡ್‌ … Read more

ವಿದ್ಯಾನಗರದಲ್ಲಿ ಹಾಡಹಗಲೆ ಮನೆ ಬಾಗಿಲು ತಟ್ಟಿದ ವ್ಯಕ್ತಿ, ಬಾಗಿಲು ತೆಗದಾಗ ಮಾಲೀಕನಿಗೆ ಕಾದಿತ್ತು ಶಾಕ್

Crime-News-General-Image

ಶಿವಮೊಗ್ಗ: ಗೃಹಿಣಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ (Gold Chain) ಕಸಿದುಕೊಂಡು ಮನೆ ಬಾಗಿಲಿನ ಚಿಲಕ ಹಾಕಿ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ. ಶಿವಮೊಗ್ಗದ ವಿದ್ಯಾನಗರದ ಗಣಪತಿ ಲೇಔಟ್‌ನಲ್ಲಿ ಈಚೆಗೆ ಘಟನೆ ಸಂಭವಿಸಿದೆ. ಮನೆಯೊಂದರ ಬಳಿ ಬಂದಿದ್ದ ಸುಮಾರು 35 ವರ್ಷದ ವ್ಯಕ್ತಿಯೊಬ್ಬ ಬಾಗಿಲು ಬಡಿದಿದ್ದಾನೆ. ಮನೆ ಮಾಲೀಕ ನಾಗರಾಜಪ್ಪ ಬಾಗಿಲು ತೆರೆದಾಗ, ‘ಸೈಟ್‌ ಮಾರಾಟಕ್ಕಿದೆಯೇʼ ಎಂದು ಆ ವ್ಯಕ್ತಿ ವಿಚಾರಿಸಿದ್ದ. ನಾಗರಾಜಪ್ಪ ಅವರು ‘ಯಾವುದೇ ಸೈಟ್‌ ಮಾರಾಟಕ್ಕಿಲ್ಲʼ ಎಂದು ತಿಳಿಸಿದ್ದರು. ಒಳ ನುಗ್ಗಿ, ಚಿನ್ನದ ಚೈನ್‌ ಕಸಿದ ಕೂಡಲೆ ಮನೆಯೊಳಗೆ … Read more

ಶಿವಮೊಗ್ಗದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಮಿನಿ ಬಸ್‌ ಪಲ್ಟಿ

Amir-Ahmed-mini bus-incident.

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್‌ (Mini Bus) ಪಲ್ಟಿಯಾಗಿದೆ. ಶಿವಮೊಗ್ಗದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಎ.ಎ. ಸರ್ಕಲ್‌ ಬಳಿ ಬಸ್‌ ಬರುವಾಗ ಆಟೋವೊಂದು ಅಡ್ಡ ಬಂದಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್‌ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರಾರೂ ಇರಲಿಲ್ಲ. ಚಾಲಕ ಒಬ್ಬರೆ ಇದ್ದರು. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ … Read more

ಯುವತಿಗೆ ಬಂತು ಫ್ರೆಂಡ್‌ ರಿಕ್ವೆಸ್ಟ್‌, ಪರಿಶೀಲಿಸಿದಾಗ ಕಾದಿತ್ತು ಶಾಕ್‌, ಏನಿದು ಕೇಸ್‌?

Instagram-Cyber-Crime-Shimoga-Station.

ಶಿವಮೊಗ್ಗ: ಯುವತಿಯೊಬ್ಬಳ (ಹೆಸರು ಗೌಪ್ಯ) ಭಾವಚಿತ್ರವನ್ನು ಅಶ್ಲೀಲ ಚಿತ್ರದೊಂದಿಗೆ ಎಡಿಟ್‌ (edited) ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಸಿ.ಇ.ಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಯುವತಿಯೊಬ್ಬಳಿಗೆ ಇನ್‌ಸ್ಟಾಗ್ರಾಂನಲ್ಲಿ ಅಪರಿಚಿತ ಖಾತೆಯಿಂದ ಮೆಸೇಜ್‌ ಬಂದಿತ್ತು. ತೆರೆದು ನೋಡಿದಾಗ ತನ್ನನ್ನು ಪ್ರೀತಿಸುವಂತೆ ಸಂದೇಶವಿತ್ತು. ಗಂಭೀರವಾಗಿ ಪರಿಗಣಿಸದ ಯುವತಿ ಆ ಮೆಸೇಜ್‌ ಬ್ಲಾಕ್‌ ಮಾಡಿದ್ದರು. ಮತ್ತೆರಡು ಖಾತೆಗಳಿಂದ ಇದೇ ರೀತಿಯ ಮೆಸೇಜುಗಳು ಬಂದಿದ್ದವು. ಯುವತಿಯು ತನ್ನ ಸ್ನೇಹಿತರ ಮೂಲಕ ಆ ಖಾತೆಗಳ ವಿರುದ್ಧ ರಿಪೋರ್ಟ್‌ ಮಾಡಿ, … Read more

NR ಪುರಕ್ಕೆ ತೆರಳಲು ಶಿವಮೊಗ್ಗದಲ್ಲಿ KSRTC ಬಸ್‌ ಹತ್ತಿ ಕುಳಿತ ಕಡೂರಿನ ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?

KSRTC-Bus-General-Image

ಶಿವಮೊಗ್ಗ: ಎನ್‌.ಆರ್‌.ಪುರಕ್ಕೆ ತೆರಳಲು ಶಿವಮೊಗ್ಗದಲ್ಲಿ KSRTC ಬಸ್‌ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣ ಕಳ್ಳತನವಾಗಿದೆ. ₹1.75 ಲಕ್ಷ ಕಳ್ಳತನವಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರಿನ ಪಾಲಾಕ್ಷಮ್ಮ ಎಂಬುವವರು ಎನ್‌.ಆರ್‌.ಪುರದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದರು. ಮಗಳಿಗೆ ಕೊಡಲು ₹1.75 ಲಕ್ಷ ರೂ. ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ಬಂದಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶೃಂಗೇರಿಗೆ ತೆರಳುವ ಬಸ್‌ ಹತ್ತಿದ್ದರು. ಸೀಟಿನಲ್ಲಿ ಕುಳಿತ ಪಾಲಾಕ್ಷಮ್ಮ ವ್ಯಾನಿಟಿ ಬ್ಯಾಗ್‌ ಮುಟಿದ್ದಾಗ ಅನುಮಾನ ಬಂದಿದೆ. ಪರಿಶೀಲಿಸಿದಾಗ ಹಣ … Read more

ಶಿವಮೊಗ್ಗದಲ್ಲಿ ವ್ಯಕ್ತಿಯ ಹತ್ಯೆ, ಕೆರೆ ಏರಿ ಬಳಿ ಮೃತದೇಹ ಪತ್ತೆ

Bommanakatte-incident-police-investigation-on

ಶಿವಮೊಗ್ಗ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್‌ ಒಬ್ಬನ ಬರ್ಬರ ಹತ್ಯೆ ಮಾಡಲಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ತಡರಾತ್ರಿ ಘಟನೆ (Incident) ಸಂಭವಿಸಿದೆ. ಅವಿನಾಶ್‌ (32) ಕೊಲೆಯಾದವನು. ಬೊಮ್ಮನಕಟ್ಟೆಯ ಕೆರೆ ಏರಿ ಮೇಲೆ ಅವಿನಾಶ್‌ನ ಹತ್ಯೆಯಾಗಿತ್ತು. ಬೆಳಗ್ಗೆ ದಾರಿಯಲ್ಲಿ ಹೋಗುವವರು ಮೃತದೇಹ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.   ಕೊಲೆ ಪ್ರಕರಣವೊಂದರಲ್ಲಿ ಅವಿನಾಶ್‌ ಜೈಲುಪಾಲಾಗಿದ್ದ. ಉಚ್ಛ ನಾಯಾಲಯದಲ್ಲಿ ಜಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಜೀವನ ನಿರ್ವಹಣೆಗೆ ಟೈಲ್ಸ್‌ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಮನೆಯಿಂದ … Read more

ಗಾಂಧಿ ಬಜಾರ್‌ ಬಟ್ಟೆ ಮಾರುಕಟೆಯಿಂದ ಹೊರ ಬಂದ ಕೆಲಸಗಾರನಿಗೆ ಕಾದಿತ್ತು ಆಘಾತ

021023 Gandhi Bazaar during 144 section in Shimoga

ಶಿವಮೊಗ್ಗ: ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳ್ಳತನವಾಗಿದೆ. ಬಟ್ಟೆ ಮಾರುಕಟ್ಟೆಯಲ್ಲಿ (Cloth Market) ಕೆಲಸ ಮಾಡುವ ಸುಲೇಮನ್‌ ಖಾನ್‌ ಎಂಬುವವರಿಗೆ ಸೇರಿದ ಬೈಕ್‌ ನಾಪತ್ತೆಯಾಗಿದೆ ಎಂದು ದೂರು ನೀಡಿದ್ದಾರೆ. ಸಂಜೆ 4.30ರ ಹೊತ್ತಿಗೆ ಸುಲೇಮಾನ್‌ ಖಾನ್‌ ತಮ್ಮ ಬೈಕ್‌ ಅನ್ನು ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿ ಬಟ್ಟೆ ಮಾರುಕಟ್ಟೆಗೆ ತೆರಳಿದ್ದರು. ರಾತ್ರಿ 9.30ಕ್ಕೆ ಹಿಂತಿರುಗಿದಾಗ ಬೈಕ್‌ ಕಳ್ಳತನವಾಗಿತ್ತು. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ಶಿವಮೊಗ್ಗದ ಬಿ.ಹೆಚ್‌.ರಸ್ತೆಯಲ್ಲಿ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಪಲ್ಸರ್‌ ನಾಪತ್ತೆ

bike theft reference image

ಶಿವಮೊಗ್ಗ: ಬಿ.ಹೆಚ್‌.ರಸ್ತೆಯ ಪಾರ್ಕಿಂಗ್‌ (Parking) ಸ್ಥಳದಲ್ಲಿ ನಿಲ್ಲಿಸಿದ್ದ ಪಲ್ಸರ್‌ ಬೈಕ್‌ ಕಳ್ಳತನವಾಗಿದೆ ಎಂದು ಆರೋಪಿಸಿ ಮಾಲೀಕ ದೂರು ನೀಡಿದ್ದಾರೆ. ಕೆಎಸ್‌ಆರ್‌ಟಿಸಿಯ ಸೆಕ್ಯೂರಿಟಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಆಲ್ಬರ್ಟ್‌ ಮನೋಹರ್‌ ಎಂಬುವವರು ತಮ್ಮ ಪಲ್ಸರ್‌ ಬೈಕ್‌ ಅನ್ನು ಬಿ.ಹೆಚ್‌.ರಸ್ತೆಯಲ್ಲಿ ರಾತ್ರಿ ನಿಲ್ಲಿಸಿದ್ದರು. ಸ್ವಲ್ಪ ಸಮಯದ ಬಳಿಕ ಪಾರ್ಕಿಂಗ್‌ ಜಾಗಕ್ಕೆ ಬಂದಾಗ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಮೈಸೂರು – ಶಿವಮೊಗ್ಗ, ತಾಳಗುಪ್ಪ ರೈಲುಗಳು ಮಾರ್ಗ ಮಧ್ಯೆ … Read more

ಗಾಂಧಿ ಬಜಾರ್‌ಗೆ ನಡೆದು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾದ ವ್ಯಕ್ತಿ, ಹೇಗಾಯ್ತು ಘಟನೆ?

Crime-News-General-Image

ಶಿವಮೊಗ್ಗ: ನಡೆದು ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿ ಇದ್ದ ಚಿನ್ನದ ಸರವನ್ನು (Chain) ವ್ಯಕ್ತಿಯೊಬ್ಬ ಕಸಿದುಕೊಂಡು ಪರಾರಿಯಾಗಿದ್ದಾನೆ. ಶಿವಮೊಗ್ಗ ನಗರದ ಕುಂಬಾರಗುಂಡಿಯಲ್ಲಿ ಘಟನೆ ಸಂಭವಿಸಿದೆ. ಬಿ.ಬಿ.ಸ್ಟ್ರೀಟ್‌ ನಿವಾಸಿ ಪುಷ್ಪಲತಾ ಅವರು ರಾತ್ರಿ 9 ಗಂಟೆ ಹೊತ್ತಿಗೆ ಗಾಂಧಿ ಬಜಾರ್‌ನಲ್ಲಿರುವ ಸಹೋದರನ ಮನೆಗೆ ನಡೆದು ಹೋಗುತ್ತಿದ್ದರು. ಕುಂಬಾರಗುಂಡಿಯಲ್ಲಿ ಸ್ವಲ್ಪ ಕತ್ತಲು ಇರುವ ಜಾಗದಲ್ಲಿ ಪುಷ್ಪಲತಾ ತೆರಳುವಾಗ ವ್ಯಕ್ತಿಯೊಬ್ಬ ಅವರ ಬಳಿ ಬಂದು ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ₹1.15 ಲಕ್ಷ ಮೌಲ್ಯದ 12.800 ಗ್ರಾಂ ತೂಕದ … Read more

ಸವಳಂಗ ರಸ್ತೆಯಲ್ಲಿ ಭೀಕರ ಅಪಘಾತ, ಡಿವೈಡರ್‌ ಹಾರಿ ಬಂತು ಇನ್ನೋವಾ, ಲಾರಿಗೆ ಡಿಕ್ಕಿ

Canter-and-innova-car-mishap-near-abbalagere

ಶಿವಮೊಗ್ಗ: ಡಿವೈಡರ್‌ ಹಾರಿ ಬಂದ ಇನ್ನೋವಾ (Innova) ಕಾರು ಎದುರಿನಿಂದ ಬರುತ್ತಿದ್ದ ಕ್ಯಾಂಟರ್‌ ಲಾರಿಗೆ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಸವಳಂಗ ರಸ್ತೆಯ ಮತ್ತೋಡು ಮತ್ತು ಅಬ್ಬಲಗೆರೆಯ ಮಧ್ಯೆ ಸಂಜೆ ಘಟನೆ ಸಂಭವಿಸಿದೆ. ಶಿಕಾರಿಪುರ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಡಿವೈಡರ್‌ ಹಾರಿ ಬಂದಿದೆ. ರಸ್ತೆಯ ಮತ್ತೊಂದು ಬದಿಯಲ್ಲಿ ಶಿವಮೊಗ್ಗ ಕಡೆಯಿಂದ ತೆರಳುತ್ತಿದ್ದ ಕ್ಯಾಂಟರ್‌ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿ … Read more