CRIME NEWS | ಕೊಲೆ ಬೆದರಿಕೆ, ಆಯುಧ ತೋರಿಸಿ ಹಣ ವಸೂಲಿ, ಒಂದು ವರ್ಷ ಶಿವಮೊಗ್ಗದಿಂದ ಒಬ್ಬನ ಗಡಿಪಾರು

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019 ವಾಹನಗಳನ್ನು ಅಡ್ಡಗಟ್ಟಿ ಆಯುಧ ತೋರಿಸಿ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದ ರೌಡಿಯೊಬ್ಬನನ್ನು ಗಡಿಪಾರು ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಗುರುಪುರದ ಸುನಿಲ್ ಅಲಿಯಾಸ್ ಬೆಕ್ಕು (25) ಎಂಬಾತನನ್ನು ಗಡಿಪಾರು ಮಾಡಲಾಗಿದೆ. ಈತನ ವಿರುದ್ಧ ಇದ್ದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ. ಏನೆಲ್ಲ ಆರೋಪಗಳಿವೆ? ಸುನಿಲ್ ಅಲಿಯಾಸ್ ಬೆಕ್ಕು ವಿರುದ್ಧ ಕೊಲೆ, ಕೊಲೆ ಬೆದರಿಕೆ, ಗುಂಪು ಕಟ್ಟಿಕೊಂಡು ಹೊಡೆದಾಡುವುದು ಸೇರಿದಂತೆ ಹಲವು … Read more

ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಮುಂದೆ ಬೈಕ್ ಅಡ್ಡಗಟ್ಟಿ ಮೊಬೈಲ್ ಕದ್ದ ದುಷ್ಕರ್ಮಿಗಳು

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 15 ನವೆಂಬರ್ 2019 ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಮುಂದೆ ಬೈಕ್ ಅಡ್ಡಗಟ್ಟಿ, ದುಷ್ಕರ್ಮಿಗಳು ಯುವಕನೊಬ್ಬನ ಮೊಬೈಲ್ ಕತ್ತುಕೊಂಡು ಪರಾರಿಯಾಗಿದ್ದಾರೆ. ಸ್ನೇಹಿತನನ್ನು ಬಸ್ಸಿಗೆ ಬಿಡಲು ತೆರಳಿದ್ದಾಗ ಘಟನೆ ನಡೆದಿದೆ. ವಿನೋಬನಗರ ನಿವಾಸಿ ರಂಜಿತ್, ತಮ್ಮ ಸ್ನೇಹಿತರೊಬ್ಬರನ್ನು ಬಿಡಲು ಬಸ್ ನಿಲ್ದಾಣಕ್ಕೆ ತೆರಳಿದ್ದರು. ಮನೆಗೆ ಮರಳುವಾಗ ದುಷ್ಕರ್ಮಿಗಳು, ಖಾಸಗಿ ಬಸ್ ನಿಲ್ದಾಣದ ಬಳಿ, ರಂಜಿತ್ ಅವರ ಬೈಕ್’ಗೆ ಮತ್ತೊಂದು ಬೈಕ್ ಅಡ್ಡಗಟ್ಟಿದ್ದಾರೆ. ಅವರ ಬಳಿ ಇದ್ದ ಚಿನ್ನದ ಖಡ್ಗ ಮತ್ತು ಪರ್ಸ್ … Read more

ಒಡವೆ ಬ್ಯಾಗ್ ಜೊತೆಗೆ ಎಸ್ಕೇಪ್ ಆಗಿದ್ದ ಆಟೋ ಡ್ರೈವರ್ ಶಿವಮೊಗ್ಗದಲ್ಲಿ ಅರೆಸ್ಟ್

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 14 ನವೆಂಬರ್ 2019 ಪ್ರಯಾಣಿಕರ ಚಿನ್ನಾಭರಣದ ಬ್ಯಾಗನ್ನು ಕದ್ದು ಸಾಗಿಸಿದ್ದ ಆಟೊ ಚಾಲಕನನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 159 ಗ್ರಾಂ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಬ್ಬಲಗೆರೆಯ ಬಸವನಗೌಡ (44) ಬಂಧಿತ ಆರೋಪಿ. ನ.4ರಂದು ಎನ್.ಟಿ.ರಸ್ತೆ 7ನೇ ತಿರುವು ವಾಸಿಗಳಾದ ಇಬ್ಬರು ಮಹಿಳೆಯರು ಬಸ್ ನಿಲ್ದಾಣದಿಂದ ತಮ್ಮ ಮನೆಗೆ ಬಸವನಗೌಡನ ಆಟೊದಲ್ಲಿ ಪ್ರಯಾಣಿಸಿದ್ದರು. ತುಂಬ ಬ್ಯಾಗ್’ಗಳಿದ್ದ ಕಾರಣ ಆಟೊದಲ್ಲಿ ಬರುವಾಗ ಚಾಲಕನ ಬಳಿ ಒಡವೆಯ ಬ್ಯಾಗನ್ನು … Read more

ಶಿವಮೊಗ್ಗದಲ್ಲಿ ಮೆಡಿಕಲ್ ವಿದ್ಯಾರ್ಥಿ ನಿಗೂಢ ಸಾವು, ರೂಂನಲ್ಲಿದ್ದ ಹಾಸಿಗೆ ಧಗಧಗ, ಘಟನೆಗೇನು ಕಾರಣ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 12 ನವೆಂಬರ್ 2019 ಶಿವಮೊಗ್ಗದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪ್ರಕರಣದ ತನಿಖೆಗೆ  ದಾವಣಗೆರೆಯಿಂದ ವಿಶೇಷ ತಂಡವೊಂದು ಶಿವಮೊಗ್ಗಕ್ಕೆ ಆಗಮಿಸಿತ್ತು. ಘಟನೆ ಏನಾಗಿದೆ? ಮೃತ ವಿದ್ಯಾರ್ಥಿ ಯಾರು? ಸುಬ್ಬಯ್ಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ನಿತಿನ್ (23), ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪುರಲೆಯ ಮೂರನೆ ಕ್ರಾಸ್’ನಲ್ಲಿರುವ ರೂಂನಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ. ನಿತಿನ್ ರೂಂನಿಂದ ಹೊಗೆ ಬರುತ್ತಿರುವುದನ್ನು ಸ್ಥಳೀಯರು ಮತ್ತು ಸ್ನೇಹಿತರು ಗಮನಿಸಿದ್ದಾರೆ. ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಸಮೀಪದ … Read more

ಚಲಿಸುತ್ತಿದ್ದ ಕಾರಿನೊಳಗೆ ನುಗ್ಗಿತು ಗೂಡ್ಸ್ ಗಾಡಿಯಲ್ಲಿದ್ದ ಆ್ಯಂಗ್ಲರ್, ತಪ್ಪಿತು ದೊಡ್ಡ ಅನಾಹುತ

ಶಿವಮೊಗ್ಗ ಲೈವ್.ಕಾಂ | SHIMOGA | 10 ನವೆಂಬರ್ 2019 ಹ್ಯಾಂಗ್ಲರ್ ತುಂಬಿಕೊಂಡಿದ್ದ ಗೂಡ್ಸ್ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಆಗಿಲ್ಲ. ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿ ಇವತ್ತು ಮಧ್ಯಾಹ್ನ ಘಟನೆ ಸಂಭವಿಸಿದೆ. ಗೂಡ್ಸ್ ವಾಹನದಲ್ಲಿದ್ದ ಹ್ಯಾಂಗ್ಲರ್’ಗಳು ಮುಂದೆ ಹೋಗುತ್ತಿದ್ದ ಕಾರಿನ ಹಿಂಬದಿ ಗ್ಲಾಸ್’ಗೆ ಗುದ್ದಿದೆ. ಅಲ್ಲದೆ ಹ್ಯಾಂಗ್ಲರ್’ಗಳ ಮುಂಭಾಗ ಕಾರಿನೊಳಗೆ ನುಗ್ಗಿದೆ. ಗೂಡ್ಸ್ ವಾಹನದಲ್ಲಿ ಹ್ಯಾಂಗ್ಲರ್’ಗಳನ್ನು ಬಿಗಿಯಾಗಿ ಕಟ್ಟದೆ ಇರುವುದೆ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಪಘಾತದಲ್ಲಿ … Read more

ಶಿವಮೊಗ್ಗದಲ್ಲಿ 23 ಪೊಲೀಸರ ಮೊಬೈಲ್ ಎಗರಿಸಿದ್ದ ಖತರ್ನಾಕ್ ಕಳ್ಳನ ಅರೆಸ್ಟ್

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 9 ನವೆಂಬರ್ 2019 ಹಿಂದೂ ಮಹಾಸಭಾ ಗಣೇಶ ವಿಸರ್ಜನೆಯ ಬಂದೋಬಸ್ತ್’ಗೆ ಬಂದಿದ್ದ ಪೊಲೀಸರ ಮೊಬೈಲ್ ಕದಿದ್ದ ಆರೋಪಿಯನ್ನು ದೊಡ್ಡಪೇಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಮಿಳುನಾಡು ಮೂಲದ ಕಾರ್ತಿಕ್ ಅಲಿಯಾಸ್ ಮಂಜುನಾಥ್ (34) ಬಂಧಿತ ಆರೋಪಿ. ಶಿವಮೊಗ್ಗ ಹಿಂದೂ ಮಹಾಸಭಾ ವಿಸರ್ಜನೆ ಬಂದೋಬಸ್ತ್’ಗೆ ಬಂದಿದ್ದ ಪೊಲೀಸರು ಮೊಬೈಲ್’ಗಳನ್ನು ಕಾರ್ತಿಕ್ ಕಳ್ಳತನ ಮಾಡಿದ್ದ. ಪೊಲೀಸರು ತಂಗಿದ್ದ ಸಮುದಾಯದ ಭವನದಲ್ಲಿ ಕಾರ್ತಿಕ್ ಕಳ್ಳತನ ಮಾಡಿದ್ದ. ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯ ಒಂದು ಮೊಬೈಲ್ … Read more

ರಾತ್ರಿ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಸ್ಕೆಚ್, ದಿಢೀರ್ ಮಾಡಿದ ಪೊಲೀಸ್, ಇಬ್ಬರು ಅರೆಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019 ಶಿವಮೊಗ್ಗ ತಾಲೂಕಿನ ಹಿಟ್ಟೂರು ಗ್ರಾಮದ ಬಳಿ ರಾತ್ರಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರನ್ನು ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ. ಬಂಧಿತರಿಂದ ಚಾಕು, ಖಾರದ ಪುಡಿ ಪ್ಯಾಕೇಟ್, ಒಂದು ಬೈಕಿನ ಬಂಪರ್ ಕೊಳವೆ ಹಾಗೂ ಕಬ್ಬಿಣದ ರಾಡ್ ವಶ ಪಡಿಸಿಕೊಳ್ಳಲಾಗಿದೆ. ಸೋಮಿನಕೊಪ್ಪದ ಸೈಯದ್ ಮೆಹಬೂಬ್ ( 22) ಮತ್ತು ಅಯನೂರು ಕೋಟೆ ಗ್ರಾಮದ ವೈ.ಕುಮಾರ (30) ಬಂಧಿತರು. ಸೋಮಿನಕೊಪ್ಪದ ಅಮೀರ್ (20), ಸುಲೇಮಾನ್ … Read more

ವಾಟ್ಸಪ್, ಫೇಸ್’ಬುಕ್ ಅಡ್ಮಿನ್’ಗಳಿಗೆ ಶಿವಮೊಗ್ಗ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್

Whatsapp-General-Image

ಶಿವಮೊಗ್ಗ ಲೈವ್.ಕಾಂ | SHIMOGA | 5 ನವೆಂಬರ್ 2019 ವಾಟ್ಸಪ್, ಫೇಸ್’ಬುಕ್, ಇನ್ಸ್’ಟಾಗ್ರಾಂ ಅಡ್ಮಿನ್’ಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ. ಸಂದೇಶಗಳನ್ನು ಫಾರ್ವರ್ಡ್ ಮಾಡುವಾಗ ಎಚ್ಚರ ವಹಿಸುವಂತ ಸೂಚನೆ ನೀಡಿದೆ. ಸಾಮಜಿಕ ಜಾಲತಾಣಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಮತ್ತು ಕೋಮು ಭಾವನೆ ಕೆರಳಿಸುವ ಮೆಸೇಜುಗಳನ್ನು ಫಾರ್ವರ್ಡ್ ಮಾಡಲಾಗುತ್ತಿದೆ. ಯಾರೋ ಕಳುಹಿಸಿದ ಮೆಸೇಜುಗಳನ್ನು ಫಾರ್ವರ್ಡ್ ಮಾಡಿದರೆ ಮೆಸೇಜು ಕಳುಹಿಸಿದವರು ಮತ್ತು ಗ್ರೂಪ್ ಅಡ್ಮಿನ್’ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ … Read more

ತರಕಾರಿ ಲಾರಿಯಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಣೆ, ಇಬ್ಬರು ಅರೆಸ್ಟ್, ಎಷ್ಟು ಮದ್ಯವಿತ್ತು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 4 ನವೆಂಬರ್ 2019 ಗೋವಾ ಮದ್ಯ ಸಾಗಣೆ ಮಾಡುತ್ತಿದ್ದ ತರಕಾರಿ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಚೋರಡಿ ಬಳಿ ಇವತ್ತು ಬೆಳಗಿನ ಜಾವ ವಾಹನ ತಡೆದು ತಪಾಸಣೆ ನಡೆಸಿ ಮದ್ಯ ಮತ್ತು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ತರಕಾರಿ ಲಾರಿಯಲ್ಲಿ ಗೋವಾದ ಮದ್ಯವನ್ನು ಅಕ್ರವಾಗಿ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಚೋರಡಿ ಬಳಿ ಲಾರಿಯನ್ನು ತಡೆದು, ತಪಾಸಣೆ ನಡೆಸಲಾಯಿತು. ಲಾರಿಯಲ್ಲಿ 20 ಸಾವಿರ ಮೌಲ್ಯದ 22 ಲೀಟರ್ … Read more

ದುರ್ಗಿಗುಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ದಾಳಿ, ಲೈಸೆನ್ಸ್ ನೀಡಲು ಲಂಚ ಪಡೆಯುತ್ತಿದ್ದ ಅಧಿಕಾರಿ ಅರೆಸ್ಟ್

Corruption-ACB-Raid-1.jpg

ಶಿವಮೊಗ್ಗ ಲೈವ್.ಕಾಂ | SHIMOGA | 31 ಅಕ್ಟೋಬರ್ 2019 ಕಾಂಟ್ರಾಕ್ಟರ್ ಲೈಸೆನ್ಸ್ ನೀಡಲು ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದುರ್ಗಿಗುಡಿಯಲ್ಲಿ ಇಂದು ಸಂಜೆ ದಾಳಿ ನಡೆಸಿ, ಅಧಿಕಾರಿಯನ್ನು ಬಂಧಿಸಲಾಗಿದೆ. ಲೋಕೋಪಯೋಗಿ ಇಲಾಖೆ ಕಚೇರಿ ವ್ಯವಸ್ಥಾಪಕ ಶೇಖ್ ಮೊಹಮ್ಮದ್ ರಫಿ, ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ದಾವಣಗೆರೆಯ ಜಗಳೂರಿನ ವೈ.ಪಿ.ಸಿದ್ದನಗೌಡ ಅವರಿಗೆ ಕ್ಲಾಸ್ 3 ಕಾಂಟ್ರಾಕ್ಟರ್ ಲೈಸೆನ್ಸ್ ಮಾಡಿಕೊಡಲು ಶೇಖ್ ಮೊಹಮ್ಮದ್ ರಫಿ 10 ಸಾವಿರ ರೂ. … Read more