ಆಯನೂರಿನ ಹೊಟೇಲ್ ಮಾಲೀಕನ ಮನೆ ಬಾಗಿಲು ಮುರಿದು ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | ಕುಂಸಿ | 16 ಜುಲೈ 2019 ಹೊಟೇಲ್ ಮಾಲೀಕರೊಬ್ಬರ ಮನೆಗೆ ನುಗ್ಗಿದ ಕಳ್ಳರು ಚಿನ್ನದ ಆಭರಣ, ಗೃಹೋಪಯೋಗಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾರನಹಳ್ಳಿಯಲ್ಲಿರುವ ನಾಗರಾಜ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ನಾಗರಾಜ್, ಹೆಂಡಿತ, ಮಕ್ಕಳ ಜೊತೆಗೆ ಆಯನೂರಿನಲ್ಲಿರುವ ತಮ್ಮ ಹೊಟೇಲ್’ಗೆ ತೆರಳಿದ್ದ ವೇಳೆ, ಕಳ್ಳರು ಕೈಚಳಕ ತೋರಿಸಿದ್ದಾರೆ. ಮನೆಯ ಕರೆಂಟ್ ಕಟ್ ಮಾಡಿ, ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು, 23,500 ರೂ. ಮೌಲ್ಯದ … Read more

ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸಗೆ ಬಂದವರ ಪರ್ಸ್ ಕದಿಯುತ್ತಿದ್ದ ಕಳ್ಳಿ ಅರೆಸ್ಟ್, ಈಕೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 16 ಜುಲೈ 2019 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಔಷಧಿ ತೆಗೆದುಕೊಳ್ಳಲು ಕ್ಯೂನಲ್ಲಿ ನಿಂತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್’ನಿಂದ ಪರ್ಸ್ ಕಳ್ಳತನ ಮಾಡಿದ್ದ ಮಹಿಳೆಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಆಕೆಯಿಂದ 1.69 ಲಕ್ಷ ರೂ. ಮೌಲ್ಯದ ಮೊಬೈಲ್, ನಗದು, ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಗೋಪಾಳದ ತಾಹೀರಾ ರೂಹಿ ಬಂಧಿತಳು. ಭದ್ರಾವತಿಯ ಹೆಬ್ಬಂಡಿಯ ನೇತ್ರಾವತಿ ಎಂಬುವವರ ವ್ಯಾನಿಟಿ ಬ್ಯಾಗ್’ನಿಂದ ಪರ್ಸ್ ಕಳ್ಳತನ ಮಾಡಿದ್ದಳು. ಈ ಕುರಿತು ನೇತ್ರಾವತಿ ಅವರು ದೊಡ್ಡಪೇಟೆ ಪೊಲೀಸ್ … Read more

ಮನೆ ಬಾಗಿಲಿಗೆ ಹಾಕಿದ್ದ ಬೀಗವನ್ನು ಚಿಲಕ ಸಹಿತ ಕಿತ್ತ ಕಳ್ಳರು, 60 ಸಾವಿರ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳ್ಳತನ

Doddapete police station in shimoga

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 06 ಜುಲೈ 2019 ಮನೆ ಬಾಗಿಲಿಗೆ ಹಾಕಿದ್ದ ಬಿಗವನ್ನು ಚಿಲಕ ಸಹಿತ ಕಿತ್ತು, ಕಳ್ಳತನ ಮಾಡಿರುವ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿದ್ದ 60 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಶಿವಮೊಗ್ಗದ ಅಶೋಕನಗರದ ಹೇಮಲತಾ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯವರೆಲ್ಲ ಬೆಂಗಳೂರಿಗೆ ತೆರಳಿದ್ದ ವೇಳೆ, ಘಟನೆ ನಡೆದಿದೆ. ಜುಲೈ 5ರಂದು ಹೇಮಲತಾ ಅವರು ಮನೆಗೆ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೀಗ ಹಾಕಿದ್ದ ಚಿಲಕವನ್ನೇ … Read more

ಹತ್ಯೆ ಮಾಡಿ ರಸ್ತೆ ಪಕ್ಕದ ತೋಟದಲ್ಲಿ ಮೃತದೇಹ ಹೂತಿಟ್ಟ ದುಷ್ಕರ್ಮಿಗಳು

shivamogga graphics map

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 05 ಜುಲೈ 2019 ವ್ಯಕ್ತಿಯೊಬ್ಬನ ಹತ್ಯೆ ಮಾಡಿ, ರಸ್ತೆ ಪಕ್ಕದ ಜಮೀನನಲ್ಲಿ ಅರೆಬರೆ ಕಾಣುವ ಹಾಗೆ ಹೂತು ಹಾಕಿದ್ದ ಘಟನೆ ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿ ನಡೆದಿದೆ. ಸೂಳೆಬೈಲು ನಿವಾಸಿ ಆರೀಫ್ ಖಾನ್ (51) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಆರೀಫ್’ನ ಕೊಲೆ ಮಾಡಿ, ಲಕ್ಕಿನಕೊಪ್ಪದ ಜಮೀನು ಒಂದರಲ್ಲಿ ಹೂತು ಹಾಕಿದ್ದಾರೆ. ಲಕ್ಕಿನಕೊಪ್ಪದಿಂದ ಬಿ.ಆರ್.ಪಿಗೆ ತೆರಳುವ ಮಾರ್ಗದಲ್ಲಿ ರಸ್ತೆ ಜಮೀನಿನಲ್ಲಿ ಮೃತದೇಹವನ್ನು ಹೂಳಲಾಗಿತ್ತು. ಮೃತದೇಹದ ಕೆಲವು ಭಾಗ ಜನರಿಗೆ ಕಾಣಿಸುವಂತಿತ್ತು. ಹಾಗಾಗಿ ಸ್ಥಳೀಯರ ಇದನ್ನು … Read more

ಚೋರಡಿ ಬಳಿ ಟೆಂಪೊ ಟ್ರಾವಲರ್ ಪಲ್ಟಿ, ಪ್ರಯಾಣಿಕರ ರಕ್ಷಣೆಗೆ ನೆರವಾದ ಶಾಸಕ ಹಾಲಪ್ಪ

ಶಿವಮೊಗ್ಗ ಲೈವ್.ಕಾಂ | 19 ಜೂನ್ 2019 ಚೋರಡಿ ಬಳಿ ಪ್ರವಾಸಿ ವಾಹನ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವರಲ್ ವಾಹನ ಪಲ್ಟಿಯಾಗಿದೆ. ಇದೇ ವೇಳೆ, ಸಾಗರ ಶಾಸಕ ಹರತಾಳು ಹಾಲಪ್ಪ, ಅದೇ ಮಾರ್ಗದಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದರು. ಕೂಡಲೇ ಅಪಘಾತದ ಸ್ಥಳಕ್ಕೆ ತೆರಳಿದ ಅವರು, 108 ಆಂಬುಲೆನ್ಸ್’ಗೆ ಕರೆ ಮಾಡಿದರು. ಬಳಿಕ, ಪಲ್ಟಿಯಾದ ವಾಹನದಲ್ಲಿದ್ದವರನ್ನು ಹೊರಗೆ ತರುವಲ್ಲಿ ಶಾಸಕ ಹಾಲಪ್ಪ, ಅವರ ಅಂಗರಕ್ಷಕ ಹೇಮಕೃಷ್ಣ , ಕಾರು ಚಾಲಕ ಸಾರ್ವಜನಿಕರಿಗೆ ನೆರವಾದರು. ಟೆಂಪೊ ಟ್ರಾವಲರ್’ನಲ್ಲಿದ್ದವರಿಗೆ ಸಣ್ಣಪುಟ್ಟ … Read more

ಮಹಾವೀರ ಸರ್ಕಲ್’ನಲ್ಲಿ ಮತ್ತೊಂದು ಅಪಘಾತ, KSRTC ಬಸ್ ಮುಂಭಾಗ ನುಜ್ಜುಗುಜ್ಜು, ಬೊಲೆರೋ ಪಿಕಪ್ ಪಲ್ಟಿ

ಶಿವಮೊಗ್ಗ ಲೈವ್.ಕಾಂ | 21 ಮೇ 2019 ಮಹಾವೀರ ಸರ್ಕಲ್’ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. KSRTC ಬಸ್ ಮತ್ತು ಬೊಲೆರೋ ಪಿಕಪ್ ವಾಹನಗಳ ನಡುವೆ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಮಹಾವೀರ ಸರ್ಕಲ್’ನಲ್ಲಿ ಬಸ್, ಪಿಕಪ್ ವಾಹನ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನುಜ್ಜುಗುಜ್ಜಾಗಿದೆ. ಪಿಕಪ್ ವಾಹನ ಪಲ್ಟಿಯಾಗಿದೆ. ಸರ್ಕಲ್’ನಲ್ಲಿದ್ದ ಸಿಗ್ನಲ್ ಲೈಟಿನ ಕಂಬಕ್ಕೂ ಹಾನಿಯಾಗಿದೆ. KSRTC ಬಸ್, ಬಿಜಾಪುರದಿಂದ ಮೈಸೂರಿಗೆ ತೆರಳುತ್ತಿತ್ತು. ಇನ್ನು, ಪಿಕಪ್ ವಾಹನ ಸೈಯದ್ ದಸ್ತಗೀರ್ ಎಂಬುವವರಿಗೆ … Read more

ಮತ್ತೊಂದು ಸುತ್ತಿನ ರೌಡಿ ಪರೇಡ್, ಎಷ್ಟೆಲ್ಲ ರೌಡಿಗಳು ಬಂದಿದ್ದರು? ಯಾರಿಗೆ ಏನೇನು ವಾರ್ನಿಂಗ್ ಕೊಟ್ರು ಗೊತ್ತಾ ಎಸ್.ಪಿ?

ಶಿವಮೊಗ್ಗ ಲೈವ್.ಕಾಂ | 20 ಮೇ 2019 ಶಿವಮೊಗ್ಗ ನಗರದಲ್ಲಿ ಇವತ್ತು ಎರಡನೇ ಹಂತದ ರೌಡಿಗಳ ಪರೇಡ್ ನಡೆಸಲಾಯಿತು. ಸುಮಾರು 250 ರೌಡಿಗಳು ಇವತ್ತಿನ ಪರೇಡ್’ನಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಬ್ಬರ ಫೈಲ್ ಪರಿಶೀಲಿಸಿದ ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ, ಖಡಕ್ ವಾರ್ನಿಂಗ್ ನೀಡಿದರು. ಡಿಎಆರ್ ಮೈದಾನದಲ್ಲಿ ಎರಡನೇ ಹಂತದ ರೌಡಿಗಳ ಪರೇಡ್ ನಡೆಸಲಾಯಿತು. ಶಿವಮೊಗ್ಗ ಉಪ ವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ರೌಡಿಗಳು ಪರೇಡ್’ನಲ್ಲಿ ಪಾಲ್ಗೊಂಡಿದ್ದರು. ಮೇ 13ರಂದು ಮೊದಲ ಹಂತದ ರೌಡಿಗಳ ಪರೇಡ್ ನಡದಿತ್ತು. 300 ರೌಡಿಗಳು ಅವತ್ತು … Read more

ಮೆಗ್ಗಾನ್ ಆಸ್ಪತ್ರೆ ಮುಂದೆ ಬಸ್ ಅಪಘಾತ, ಸಾಗರ ರಸ್ತೆಯಲ್ಲಿ ಮರಕ್ಕೆ ಗುದ್ದಿದ ರಾಜಹಂಸ

ಶಿವಮೊಗ್ಗ ಲೈವ್.ಕಾಂ | 20 ಮೇ 2019 ಚಾಲಕನ ನಿಯಂತ್ರಣ ತಪ್ಪಿದ KSRTC ರಾಜಹಂಸ ಬಸ್, ಮೆಗ್ಗಾನ್ ಆಸ್ಪತ್ರೆ ಮುಂಭಾಗ, ಸಾಗರ ರಸ್ತೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್ಸಿನ ಮುಂಭಾಗ ಜಖಂ ಆಗಿದೆ. ಗ್ಲಾಸ್ ಪುಡಿಯಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ರಾಜಹಂಸ ಬಸ್, ಇಲ್ಲಿಂದ ಶಿರಸಿ ಕಡೆಗೆ ಪ್ರಯಾಣ ಬೆಳೆಸಿತ್ತು. ಮೆಗ್ಗಾನ್ ಆಸ್ಪತ್ರೆ ಮುಂಭಾಗ, ಪೊಲೀಸ್ ಕ್ಯಾಂಟೀನ್ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಿದ್ದು ಮತ್ತು ಸಿಟಿ … Read more

ಜೆಎನ್ಎನ್ ಕಾಲೇಜು ಬಳಿ ಭೀಕರ ಅಪಘಾತ, ಬೈಕ್ ಪೀಸ್ ಪೀಸ್, ಸೆಕೆಂಡ್ ಪಿಯು ವಿದ್ಯಾರ್ಥಿನಿ ಸಾವು

ಶಿವಮೊಗ್ಗ ಲೈವ್.ಕಾಂ | 19 ಮೇ 2019 ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜು ಬಳಿ ಸವಳಂಗ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸುನೈನಾ (18) ಮೃತ ವಿದ್ಯಾರ್ಥಿನಿ. ಬೆಳಗ್ಗೆ ಟ್ಯೂಷನ್ ಮುಗಿಸಿಕೊಂಡು ಸ್ನೇಹಿತೆಯ ಮನೆಗೆ ಪುಸ್ತಕ ಕೊಡಲು ಬೈಕ್’ನಲ್ಲಿ ತೆರಳುವಾಗ ಘಟನೆ ನಡೆದಿದೆ. ಎದುರಿನಿಂದ ಬಂದ ಬೊಲೆರೊ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ಸುನೈನಾ ಚಲಾಯಿಸುತ್ತಿದ್ದ ಬೈಕ್ ಎರಡು ಭಾಗವಾಗಿದೆ. ಬೊಲೆರೋದ ಮುಂದಿನ ಗಾಜು ಪುಡಿ ಪುಡಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ, ಸ್ಥಳೀಯರು ಸುನೈನಾಳನ್ನು … Read more

ಶಿವಮೊಗ್ಗ ಸಿಟಿಯ 300ಕ್ಕೂ ಹೆಚ್ಚು ರೌಡಿಗಳಿಗೆ ಬಿಸಿ ಮುಟ್ಟಿಸಿದ್ರು ಹೊಸ ಎಸ್.ಪಿ, ಬಾಲ ಬಿಚ್ಚದಂತೆ ಖಡಕ್ ವಾರ್ನಿಂಗ್

ಶಿವಮೊಗ್ಗ ಲೈವ್.ಕಾಂ | 13 ಮೇ 2019 ನಗರದಲ್ಲಿ ಕಾರ್ಯಾಚರಿಸುತ್ತಿರುವ ರೌಡಿಗಳಿಗೆ ಶಿವಮೊಗ್ಗದ ಖಾಕಿ ಪಡೆ, ಇವತ್ತು ಸರಿಯಾಗಿ ಬಿಸಿ ಮುಟ್ಟಿಸಿದೆ. ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ ನೇತೃತ್ವದಲ್ಲಿ ನಡೆದ ರೌಡಿ ಪರೇಡ್’ನಲ್ಲಿ, ಖಡಕ್ ವಾರ್ನಿಂಗ್ ನೀಡಲಾಗಿದೆ. ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಇವತ್ತು ರೌಡಿ ಪರೇಡ್ ನಡೆಯಿತು. ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ, ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಪರೇಡ್’ನಲ್ಲಿ ಪಾಲ್ಗೊಂಡಿದ್ದ ರೌಡಿಗಳಿಗೆ ವಾರ್ನಿಂಗ್ ನೀಡಿದರು. 300ಕ್ಕೂ ಹೆಚ್ಚು ರೌಡಿಗಳು ಭಾಗಿ ಶಿವಮೊಗ್ಗ ನಗರದಲ್ಲಿ ಕಾರ್ಯಾಚರಿಸುತ್ತಿರುವ … Read more